ತಾಲ್ಲೂಕು ಕಚೇರಿಗೆ ಬೀಗ ಜಡಿದು ರೈತರಿಂದ ಪ್ರತಿಭಟನೆ

ಕುಣಿಗಲ್ :       ರೈತರಿಗೆ ರಾಗಿ ಖರೀದಿಯಲ್ಲಿ ಮೋಸ ಮಾಡಿದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿದಾಗ ಪ್ರತಿಭಟನೆಯನ್ನ ಕೈಬಿಡಿ ರೈತರ ಹಣ ಸಂದಾಯ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿ ತಿಂಗಳಾದರೂ ಇನ್ನೂ ರೈತರ ರಾಗಿ ದುಡ್ಡು ನೀಡಿಲ್ಲ ಎಂದು ಆರೋಪಿಸಿ ರೈತ ಸಂಘ ತಾಲ್ಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ನಡೆಯಿತು.       ಮಹಿಳೆಯರು ಸೇರಿದಂತೆ ಹಲವು ರೈತರು ತಮ್ಮ ಜಮೀನಿನಲ್ಲಿ ರಾಗಿ ಬೆಳೆದು ಖರೀದಿ ಕೇಂದ್ರಕ್ಕೆ ಸುಮಾರು 1087 ರೈತರಿಂದ ಪಡೆದಿದ್ದು ಇದರಲ್ಲಿ 391 ರೈತರಿಗೆ ಮಾತ್ರ ನೀಡಿದ್ದರೂ ಇನ್ನೂ ಹಣ ನೀಡಿಲ್ಲ ಎಂಬ ಅವರ ದೂರಿನ ಮೇರೆಗೆ ಜಿಲ್ಲಾ ಹಸಿರು ಸೇನೆಯ ಅಧ್ಯಕ್ಷ ಆನಂದ್ ಪಟೇಲ್ ನೇತೃತ್ವದಲ್ಲಿ ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗುವ ಮೂಲಕ ತಾಲ್ಲೂಕು ಕಚೇರಿ ಮುಂದಿನ ಗೇಟಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಡಿಸಿದರು.  …

ಮುಂದೆ ಓದಿ...

ಮೈತ್ರಿ ಸರ್ಕಾರ ಕೆಡವಲು ಬಿಜೆಪಿ ಷಡ್ಯಂತ್ರ’ – ಜಿಲ್ಲಾ ಕಾಂಗ್ರೆಸ್

ತುಮಕೂರು:       ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರವನ್ನು ಬಿಜೆಪಿ ರೂಪಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕವು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.       ಪ್ರತಿಭಟನೆಯಲ್ಲಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು ಬಿಜೆಪಿ ಕುದುರೆ ವ್ಯಾಪಾರ ಮಾಡಿದಂತೆ ಶಾಸಕರನ್ನು ನೂರಾರು ಕೋಟಿಗಳ ಲೆಕ್ಕದಲ್ಲಿ ಖರೀದಿಸುತ್ತಿದೆ. ಕೋಟಿಗಳ ಲೆಕ್ಕದಲ್ಲಿ ಆಮಿಷ ಒಡ್ಡುತ್ತಿದೆ. ಕಾಂಗ್ರೆಸ್‍ನಿಂದ ಟಿಕೆಟ್ ಪಡೆದು, ಆಯ್ಕೆಯಾದ ಜನಪ್ರತಿನಿಧಿಗಳು ಜನರಿಗೆ ದ್ರೋಹ ಬಗೆಯುತ್ತಿದ್ದಾರೆ. ಅವರನ್ನು ರಾಜ್ಯದ ಜನರು ಎಂದಿಗೂ ಕ್ಷಮಿಸಲಾರರು ಎಂದು ಹರಿಹಾಯ್ದರು.       ರಾಜೀನಾಮೆ ಕೊಟ್ಟಿರುವ ಶಾಸಕರು ಮುಂದಿನ ಪೀಳಿಗೆಗೆ ಕೆಟ್ಟ ರಾಜಕೀಯದ ಪರಿಪಾಟ ಹೇಳಿಕೊಡುತ್ತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ, ಅವರು ಮನಸ್ಸು ಬದಲಿಸಿಕೊಂಡು ಪಕ್ಷಕ್ಕೆ ಬಂದರೆ, ಸರ್ಕಾರ ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತದೆ ಎಂದರು. ಕಾಂಗ್ರೆಸ್‍ನ ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ, ನಮ್ಮ ಪಕ್ಷದಿಂದ ಗೆದ್ದು ಅಧಿಕಾರ…

ಮುಂದೆ ಓದಿ...