1ಲಕ್ಷ ಮೌಲ್ಯದ ನಿಷೇಧಿತ ಪ್ಲಾಸ್ಟಿಕ್ ವಶ : 50 ಸಾವಿರ ರೂ.ದಂಡ!

ತುಮಕೂರು :       ತಮಗೆ ಲಭಿಸಿದ ಖಚಿತ ವರ್ತಮಾನ ಆಧರಿಸಿ ಗೋಡೋನ್ ಒಂದರ ಮೇಲೆ ದಾಳಿ ನಡೆಸಿದ ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಸುಮಾರು 1 ಲಕ್ಷ ರೂ. ಮೌಲ್ಯದ 1,200 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರಲ್ಲದೆ, ಸಂಬಂಧಿಸಿದವರಿಗೆ 50,000 ರೂ. ದಂಡ ವಿಧಿಸಿರುವ ಮಹತ್ವದ ಘಟನೆ ಶುಕ್ರವಾರ ನಡೆದಿದೆ.      ತುಮಕೂರು ನಗರದ ಮಂಡಿಪೇಟೆಯ ಒಂದನೇ ಮುಖ್ಯರಸ್ತೆಯ ಮೂರನೇ ತಿರುವಿನಲ್ಲಿರುವ ಗೋಡೋನ್‍ನಲ್ಲಿ ಈ ಘಟನೆ ಜರುಗಿದೆ. ಇದು ಅಮ್ಜದ್ ಪಾಷ ಎಂಬುವವರಿಗೆ ಸೇರಿದ ಗೋಡೋನ್ ಆಗಿದೆ.       ದೊಡ್ಡ ಪ್ರಮಾಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ ಎಂಬ ವರ್ತಮಾನದ ಹಿನ್ನೆಲೆಯಲ್ಲಿ ಗುರುವಾರ ಸಂಜೆಯೇ ಪಾಲಿಕೆಯ ಅಧಿಕಾರಿಗಳು ಈ ಗೋಡೋನ್‍ಗೆ ದಾಳಿ ನಡೆಸಿದ್ದರು. ಆದರೆ ಗೋಡೋನ್ ಮಾಲೀಕರು ಬಾಗಿಲು ತೆರೆಯಲು ಒಪ್ಪಿರಲಿಲ್ಲ. ಹೀಗಾಗಿ ಸದರಿ ಗೋಡೋನ್ ಅನ್ನು ಪಾಲಿಕೆಯವರು…

ಮುಂದೆ ಓದಿ...

ಕಳೆದು ಹೋದ ಅಮಾನಿಕೆರೆ ವೈಭವಕ್ಕೆ ಮತ್ತೆ ಹೊಸ ರೂಪ

ತುಮಕೂರು :       ನಗರದ ಕೇಂದ್ರಭಾಗದಲ್ಲಿರುವ ಅಮಾನಿಕೆರೆಗೆ ಸುಮಾರು 887 ವರ್ಷಗಳ ಇತಿಹಾಸವಿದೆ. ಮಾನವ ನಿರ್ಮಿತ ವೈಭವದಿಂದ ಕೂಡಿದ್ದ ಈ ಕೆರೆಯು ಕೆಲವು ವರ್ಷಗಳ ಹಿಂದೆ ಸಂಸ್ಕರಿಸದ ಒಳಚರಂಡಿ ನೀರು, ಕಸದ ರಾಶಿಯಿಂದ ತುಂಬಿಕೊಂಡು ಅಸಹನೀಯ ದುರ್ವಾಸನೆಯಿಂದ ಕೂಡಿದ ಅವ್ಯವಸ್ಥೆಯ ತಾಣವಾಗಿತ್ತು. ಮತ್ತೊಮ್ಮೆ ಈ ಕೆರೆಗೆ ಪುನಶ್ಚೇತನ ನೀಡಿ ಹೊಸ ರೂಪ ನೀಡಲು ಸ್ಮಾರ್ಟ್ ಸಿಟಿ ಸಂಸ್ಥೆಯು ಮುಂದಾಗಿದೆ.   28ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ:       ಭಾರತದಲ್ಲಿ ನೀರಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಖಿieಡಿ (ಟೈರ್)-1 ನಗರಗಳಾದ ದೆಹಲಿ, ಬೆಂಗಳೂರು, ಹೈದ್ರಬಾದ್, ಮತ್ತಿತರ ನಗರಗಳಲ್ಲಿ 2020ರ ವೇಳೆಗೆ ಅಂತರ್ಜಲ ಬರಿದಾಗಲಿದೆ ಎಂದು ಓIಖಿI ಆಯೋಗವು ಇತ್ತೀಚಿಗಷ್ಟೇ ವರದಿ ಮಾಡಿದೆ. ಇದನ್ನು ಮನಗಂಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷೆ ಡಾ|| ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ನಗರದ ನಾಗರಿಕರಿಗೆ ಉಪಯೋಗವಾಗುವಂತೆ ಅಮಾನಿಕೆರೆಯನ್ನು…

ಮುಂದೆ ಓದಿ...