ಕುಡಿಯುವ ನೀರು ಪೂರೈಕೆಗೆ ಆಗ್ರಹ : ಪಂಚಾಯಿತಿಗೆ ಮುತ್ತಿಗೆ!

ತುಮಕೂರು:      ಸಮರ್ಪಕ ಕುಡಿಯುವ ನೀರಿಗೆ ಆಗ್ರಹಿಸಿ ನಗರದ ಹೊರವಲಯದ ಬೆಳಗುಂಬ ಗ್ರಾಮ ಪಂಚಾಯಿತಿ ಕಚೇರಿಗೆ ಮಹಿಳೆಯರು ಬುಧವಾರ ಮುತ್ತಿಗೆ ಹಾಕಿದರು. ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.        ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಐದಾರು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒ ಜನರ ಮನವಿಗೆ ಸ್ಪಂದಿಸುತ್ತಿಲ್ಲ. ಇದರಿಂದ ಕುಡಿಯುವ ನೀರಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದರು       ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಮತ್ತು ಅಧ್ಯಕ್ಷರು ಸ್ಪಂದಿಸುತ್ತಿಲ್ಲ. ಇದರಿಂದ ಬೇಸರವಾಗಿದೆ. ನಾನು ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರಯ್ಯ ಅವರು ಈ ವೇಳೆ ತಿಳಿಸಿದರು.      ಅಧಿಕಾರಿಗಳು ಮೊದಲು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಮಹಿಳೆಯರು ಆಗ್ರಹಿಸಿದರು. ಪಿಡಿಒ ವರ್ಗಾವಣೆಗೆ ಮನವಿ:…

ಮುಂದೆ ಓದಿ...

ಹೇಮಾವತಿ ಯೋಜನೆ : ಭೂಮಿ ಖರೀದಿಗೆ ದರ ನಿಗಧಿ!

ತುಮಕೂರು:       ಹೇಮಾವತಿ ಯೋಜನೆ ಅಡಿಯಲ್ಲಿ ಭೂಮಿಯನ್ನು ಪಡೆಯಲು 2013ನೇ ಕಾಯ್ದೆ ಪ್ರಕಾರ ಕೆಲ ಗ್ರಾಮಗಳಲ್ಲಿ ರೈತರ ಜಮೀನುಗಳ ಖರೀದಿಗೆ ನಿರ್ದಿಷ್ಠ ಮೊತ್ತವನ್ನು ನಿಗದಿ ಮಾಡಿದ್ದು, ಇದಕ್ಕೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಒಂದು ತಿಂಗಳೊಳಗಡೆ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ತಿಳಿಸಿದರು.       ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಚಿಕ್ಕನಾಯಕನಹಳ್ಳಿಯ ಕೆಲ ಹಳ್ಳಿಗಳಲ್ಲಿ ಹೇಮಾವತಿ ನಾಲಾ ಯೋಜನೆಗೆ ರೈತರ ಜಮೀನು ಪಡೆಯಲು ಗುಂಟೆಗೆ 8900, 9250 ರೂಗಳಂತೆ ನಿಗದಿ ಪಡಿಸಲಾಗಿದೆ. ಒಂದು ಗುಂಟೆಗೆ 8900 ರೂಗಳಂತೆ 1:4 ಅನುಪಾತದಲ್ಲಿ ಒಂದು ಎಕರೆಗೆ 14 ಲಕ್ಷದಷ್ಟು ಹಣ ನೀಡಿ ಜಮೀನು ನೇರ ಖರೀದಿ ಮಾಡಲಾಗುವುದು ಎಂದರು.        ಸಭೆಯಲ್ಲಿ ಮಾತನಾಡಿದ ರೈತರು, ಈ ಮುಂಚೆ ಕೆಲ ರೈತರ ಜಮೀನುಗಳು ವಿವಿಧ ಯೋಜನೆಗಳಿಗೆ ಹೋಗಿದ್ದು, ಅದಕ್ಕೆ…

ಮುಂದೆ ಓದಿ...