ಮೊಬೈಲ್ ಕಳ್ಳನ ಬಂಧನ!

 ತುರುವೇಕೆರೆ:       ಪಟ್ಟಣದ ಸಂತೆಗೆ ಬರುತ್ತಿದ್ದ ಗ್ರಾಹಕರ ಕಿಸೆಯಲ್ಲಿದ್ದ ಮೊಬೈಲನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪಟ್ಟಣದ ಪೊಲೀಸರು ಶುಕ್ರವಾರ ಬಂದಿಸಿದ್ದಾರೆ.       ಬಂದಿತ ಆರೋಪಿ ರಾಮು ಭದ್ರಾವತಿ ನಗರದ ಬೋವಿ ಕಾಲೋನಿಯಲ್ಲಿ ಮನೆಗಳ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದವನು ಎನ್ನಲಾಗಿದೆ. ನಿನ್ನೆ ಪಟ್ಟಣದಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಆರೋಪಿ ಎಪಿಎಂಸಿ ಯಾರ್ಡ್‍ನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತಿದ್ದು ಪೊಲೀಸ್ ಸಿಬ್ಬಂದಿಗಳು ಈತನ್ನು ಠಾಣೆಗೆ ಕರೆ ತಂದು ವಿಚಾರಿಸಲಾಗಿ ಪಟ್ಟಣದ ಸಂತೆಯಲ್ಲಿ ಹಲವು ತಿಂಗಳುಗಳಿಂದ ಮೊಬೈಲ್ ಕಳವು ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.       ಬಂದಿತನಿಂದ 35 ಸಾವಿರ ರೂಪಾಯಿಗಳ 14 ಬೆಲೆ ಬಾಳುವ ಮೊಬೈಲ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು ಆರೋಪಿ ರಾಮುವನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪಟ್ಟಣದ ಪೊಲೀಸರು ತಿಳಿಸಿದ್ದಾರೆ.

ಮುಂದೆ ಓದಿ...

ಡಿಸಿಸಿ ಬ್ಯಾಂಕ್ ಸೂಪರ್‍ಸೀಡ್‍ಗೆ ತಡೆಯಾಜ್ಞೆ : ಕೆ.ಎನ್.ರಾಜಣ್ಣ ಅಭಿಮಾನಿಗಳ ಸಂಭ್ರಮ

ತುಮಕೂರು:       ಬಿಜೆಪಿ ಸರ್ಕಾರ ರಚನೆ ಹಾಗೂ ಡಿಸಿಸಿ ಬ್ಯಾಂಕ್ ಸೂಪರ್‍ಸೀಡ್‍ಗೆ ತಡೆಯಾಜ್ಞೆ ಹೊರಬಂದ ಹಿನ್ನೆಲೆಯಲ್ಲಿ ಕೆ.ಎನ್.ರಾಜಣ್ಣ ಅಭಿಮಾನಿಗಳು ನಗರದ ಟೌನ್‍ಹಾಲ್‍ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.       ಈ ವೇಳೆ ಮಾತನಾಡಿದ ಊರುಕೆರೆ ವಿಎಸ್‍ಎಸ್‍ಎನ್ ಅಧ್ಯಕ್ಷ ಷಣ್ಮುಖ ಅವರು, ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸಾಕಷ್ಟು ಶ್ರಮಿಸಿದ್ದಾರೆ, ಬ್ಯಾಂಕ್‍ನಿಂದ ಎಲ್ಲ ವರ್ಗದ ಜನರಿಗೂ ಅನುಕೂಲ ಮಾಡಿದ್ದಾರೆ, ಅಂತವರಿಗೆ ಬ್ಯಾಂಕ್ ಸೂಪರ್‍ಸೀಡ್ ಮಾಡುವ ಮೂಲಕ ತೊಂದರೆ ನೀಡಿದರು, ತೊಂದರೆ ನೀಡಿದವರೇ ಇಂದು ಅಧಿಕಾರವನ್ನು ಕಳೆದುಕೊಂಡಿದ್ದಾರೆ, ರಾಜಣ್ಣ ಅವರು ನುಡಿದಂತೆ ಒಂದು ವಾರದೊಳಗೆ ಡಿಸಿಸಿ ಬ್ಯಾಂಕ್‍ನಲ್ಲಿ ಅಧಿಕಾರವನ್ನು ಸ್ಥಾಪಿಸಿದ್ದಾರೆ ಎಂದರು.       ಜಿಲ್ಲೆಯ ಜನರು ಝೀರೋ ಟ್ರಾಫಿಕ್‍ನಿಂದ ಬೇಸತ್ತಿದ್ದರು, ಸರ್ಕಾರ ಬಿದ್ದು ಝೀರೋ ಟ್ರಾಫಿಕ್ ಕಳೆದುಕೊಂಡಿರುವುದರಿಂದ ತುಮಕೂರು ಜಿಲ್ಲೆಗೆ ಒಳಿತಾಗಿದೆ ಎಂದು ಪರೋಕ್ಷವಾಗಿ ಡಾ.ಜಿ.ಪರಮೇಶ್ವರ್…

ಮುಂದೆ ಓದಿ...