ಮಧುಗಿರಿ : ಮನುಷ್ಯ ರೂಪ ಹೋಲುವ ಮೇಕೆ ಮರಿ ಪತ್ತೆ!

ಮಧುಗಿರಿ:       ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಕಾಳೇನಹಳ್ಳಿ ಗ್ರಾಮದ ಜಾನಕಿರಾಮಯ್ಯ ಎಂಬುವವರ ಮನೆಯ ಮೇಕೆಯೊಂದು ಮನುಷ್ಯನ ರೂಪ ಹೋಲುವ ಮೇಕೆ ಮರಿಗೆ ಜನ್ಮ ನೀಡಿರುವ ವಿಚಿತ್ರ ಘಟನೆ ನಡೆದಿದೆ.       ಅವರ ಮನೆಯ ಮೇಕೆಯೊಂದು ಶನಿವಾರ ಎರಡು ಮರಿಗಳಿಗೆ ಜನ್ಮನೀಡಿದ್ದು ಒಂದು ಗಂಡು ಮರಿ ಆರೋಗ್ಯವಾಗಿದೆ, ಮತೊಂದು ಮರಿ ಮೃತಪಟ್ಟಿದ್ದು ಮೃತಪಟ್ಟ ಮರಿಯ ದೇಹ ಮನುಷ್ಯನ ಆಕಾರಹೊಂದಿದೆ. ವಿಷಯ ತಿಳಿದ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಜನ ತಂಡೋಪ ತಂಡವಾಗಿ ಬಂದು ವೀಕ್ಷಿಸಿದರು.

ಮುಂದೆ ಓದಿ...

ನಗರದಲ್ಲಿ ತಂಬಾಕು ನಿಯಂತ್ರಣ ತಂಡದಿಂದ ದಾಳಿ

ತುರುವೇಕೆರೆ:       ಜಿಲ್ಲಾತಂಬಾಕು ನಿಯಂತ್ರಣ ಕೋಶ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತುಮಕೂರು ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಪೊಲೀಸ್ ಇಲಾಖೆ ತುರುವೇಕರೆ ಇವರುಗಳು ಜಂಟಿಯಾಗಿ ತಂಬಾಕು ನಿಯಂತ್ರಣ ಕಾರ್ಯಾಚರಣೆಯನ್ನು ಪಟ್ಟಣದಲ್ಲ್ಲಿ ಹಮ್ಮಿಕೊಂಡು ಅಂಗಡಿ ಮುಂಗಟ್ಟು ಹಾಗೂ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧಿತ ಪ್ರದೇಶದಲ್ಲಿ ಧೂಮಪಾನ ಮಾಡುವುದು ಅಪರಾಧ ಎಂಬ ನಾಮಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಲು ತಿಳಿಸಿದರಲ್ಲದೇ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಿದರು.       ಒಟ್ಟು 50 ಪ್ರಕರಣಗಳನ್ನು ದಾಖಲಿಸುವ ಮುಖೇನ ರೂ.4560 ಗಳನ್ನು ದಂಡದ ರೂಪದಲ್ಲಿ ವಸೂಲು ಮಾಡಲಾಯಿತು.ಸದರಿಕಾರ್ಯಾಚರಣೆಯಲ್ಲಿ ಜಿಲ್ಲಾ ಸಲಹೆಗಾರರಾದ ರವಿಪ್ರಕಾಶ್, ಎಂ.ಆರ್.ಪುಂಡಲೀಕ ಲಕಾಟಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಂ.ಬಿ. ಚಂದ್ರಶೇಖರ್, ಎ.ಎಸ್.ಐ. ವೆಂಕಟೇಶ್ ಹಾಜರಿದ್ದರು.ಸದರಿ ಕಾರ್ಯಾಚರಣೆ ಮಾಡುವ ಮುಖೇನ ತುರುವೇಕೆರೆಯನ್ನು ತಂಬಾಕು ಮುಕ್ತ ಪ್ರದೇಶವಾಗಿ ಮಾರ್ಫಡಿಸಲು ಶ್ರಮಸುತ್ತಿರುವುದಾಗಿ ಜಿಲ್ಲಾ ಸಲಹೆಗಾರ ರವಿಪ್ರಕಾಶ್ ತಿಳಿಸಿದರಲ್ಲದೆ ಸಾರ್ವಜನಿಕರ…

ಮುಂದೆ ಓದಿ...

ಸಕಾಲ ಸೇವೆಯಲ್ಲಿ ವಿಳಂಬ ಮಾಡಿದರೆ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್

 ತುಮಕೂರು :       ವಿವಿಧ ಸರ್ಕಾರಿ ಇಲಾಖೆಗಳು ಸಾರ್ವಜನಿಕರಿಗಾಗಿ ಒದಗಿಸುತ್ತಿರುವ 640 ನಾಗರಿಕ ಸೇವೆ ಹಾಗೂ 320 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೇವೆ ಸೇರಿದಂತೆ ಒಟ್ಟು 960 ಸಕಾಲ ಸೇವೆಗಳ ವಿಲೇವಾರಿಯಲ್ಲಿ ವಿಳಂಬ ಮಾಡುವ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ಸಕಾಲ ಮಿಷನ್ ನಿರ್ದೇಶಕರು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲ ಸೂಚನೆ ನೀಡಿದರು.       ಜಿಲ್ಲಾಧಿಕಾರಿಗಳ ಕಛೇರಿ ಕೆಸ್ವಾನ್ ಸೆಂಟರ್‍ನಲ್ಲಿಂದು ಸಕಾಲ ಸೇವೆಗಳ ಅಧಿನಿಯಮದ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಕಾನ್ಫರೆನ್ಸ್‍ನಲ್ಲಿ ಅವರು ಈ ಸೂಚನೆ ನೀಡಿದರು. ಸಂಬಂಧಿಸಿದ ನೋಡಲ್ ಅಧಿಕಾರಿಗಳು ಸಕಾಲ ಅರ್ಜಿಗಳ ವಿಲೇವಾರಿ ವರದಿಯನ್ನು ಸಕಾಲ ಪೋರ್ಟಲ್‍ನಲ್ಲಿ ಪ್ರತೀದಿನ ಅಪ್‍ಡೇಟ್ ಮಾಡಬೇಕು. ಪ್ರತಿ 15 ದಿನಗಳಿಗೊಮ್ಮೆ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ…

ಮುಂದೆ ಓದಿ...