ಮಳೆನೀರುಗಾಲುವೆಗಳಿಗೆ ಪರಿಸರಸ್ನೇಹಿ ರೂಪಕ್ಕೆ ಮುಂದಾದ ಸ್ಮಾರ್ಟ್‍ಸಿಟಿ

      ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಹಲವಾರು ಸ್ಮಾರ್ಟ್ ಕಾಮಗಾರಿಗಳಲ್ಲಿ ಮಳೆನೀರುಗಾಲುವೆಗಳಿಗೆ ಪರಿಸರಸ್ನೇಹಿ ರೂಪ ನೀಡುವ ಕಾಮಗಾರಿಯೂ ಒಂದಾಗಿದ್ದು, ಸ್ಮಾರ್ಟ್ ಸಿಟಿ ಲಿಮಿಟೆಡ್ ಈ ಪ್ರಯತ್ನಕ್ಕೆ ಮುಂದಾಗಿದೆ.       ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಅವರ ಪರಿಕಲ್ಪನೆಯಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಯೋಜನಾ ನಿರ್ವಹಣಾ ಸಲಹೆಗಾರ ಸಂಸ್ಥೆಯಾದ ಐಪಿಇ ಗ್ಲೋಬಲ್ ಉಸ್ತುವಾರಿಯಲ್ಲಿ ರೂಪುಗೊಳ್ಳುತ್ತಿರುವ ಈ ಕಾಮಗಾರಿಯು ಈಗಾಗಲೇ ಚಾಲನೆಯಲ್ಲಿದೆ. ತ್ಯಾಜ್ಯ ನೀರು ಸೇರದ ನೀರ್ಗಾಲುವೆ ನಿರ್ಮಾಣ:       ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ರಿಂಗ್ ರಸ್ತೆಯ ಎರಡೂ ಬದಿ(14.2 ಕಿ.ಮೀ ಉದ್ದ)ಯಲ್ಲಿ ಈ ಪರಿಸರಸ್ನೇಹಿ ರೂಪ ಪಡೆಯಲು ಮಳೆನೀರುಗಾಲುವೆಗಳು ಸಿದ್ಧವಾಗಿವೆ. ಸದ್ಯ ಈ ಮಳೆನೀರುಗಾಲುವೆಗಳಲ್ಲಿ ತ್ಯಾಜ್ಯನೀರು ಹರಿಯುತ್ತಿದ್ದು, ಮಳೆಗಾಲದಲ್ಲೂ ಸ್ವಚ್ಛ ನೀರು ಹರಿಯುವ ದೃಶ್ಯ ಕಾಣಸಿಗದಾಗಿದೆ. ಅಲ್ಲದೆ ಮಳೆ ನೀರಿನೊಂದಿಗೆ ತ್ಯಾಜ್ಯ ನೀರು…

ಮುಂದೆ ಓದಿ...

ಕೆರೆಯಂಗಳದಲ್ಲಿ ಕಸ ಸುರಿಯಲು ಬಂದ ವಾಹನಗಳ ವಶ

ತುಮಕೂರು:       ನಗರದ ಹೊರವಲಯದ ಗಾರೆನರಸಯ್ಯನಕಟ್ಟೆ ಹಾಗೂ ಅಕ್ಕತಂಗಿಯರ ಕೆರೆಯಂಗಳದಲ್ಲಿ ಕಸ ಸುರಿಯಲು ಯತ್ನಿಸುತ್ತಿದ್ದ 2 ಲಗೇಜ್ ಆಟೋಗಳನ್ನು ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆದು ದಂಡ ವಿಧಿಸಿರುವ ಘಟನೆ ನಡೆದಿದೆ.       ನಗರದ ಅಕ್ಕತಂಗಿಯರ ಕೆರೆಯಂಗಳದಲ್ಲಿ ತರಕಾರಿ ಕಸ ಹಾಕಲು ತೆರಳಿದ್ದ ಲಗೇಜ್ ಆಟೋವನ್ನು ವಶಕ್ಕೆ ಪಡೆದು ಪಾಲಿಕೆ ಅಧಿಕಾರಿಗಳು 2 ಸಾವಿರ ರೂ. ದಂಡ ವಿಧಿಸಿದ್ದಾರೆ.        ಇದೇ ರೀತಿ ಗಾರೆನರಸಯ್ಯನಕಟ್ಟೆ ಬಳಿ ಖಾಸಗಿ ಬ್ಯಾಂಕ್‍ವೊಂದರ ಸಿಬ್ಬಂದಿ ಲಗೇಜ್ ಆಟೋದಲ್ಲಿ ಪೇಪರ್ ಸೇರಿದಂತೆ ಇತರೆ ಕಸವನ್ನು ತುಂಬಿಕೊಂಡು ಬಂದು ಕಸ ಹಾಕಲು ಮುಂದಾಗಿದ್ದರು. ಈ ಬಗ್ಗೆ ಮಾಹಿತಿ ಅರಿತ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಸದರಿ ಆಟೋವನ್ನು ವಶಪಡಿಸಿಕೊಂಡು ಎರಡೂ ಆಟೋಗಳನ್ನು ಪಾಲಿಕೆ ಕಚೇರಿಗೆ ಕರೆ ತಂದು ಆಯುಕ್ತರ ಮುಂದೆ ಹಾಜರುಪಡಿಸಿದ್ದಾರೆ.        ಎರಡೂ…

ಮುಂದೆ ಓದಿ...

ಸ್ಕೀಂ ನೌಕರರಿಗೆ ಖಾಯಂ ಹಾಗೂ ಕನಿಷ್ಠ ಕೂಲಿಗೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ

ತುಮಕೂರು :       ಸಾರ್ವಜನಿಕ ವಲಯದ ರೈಲು, ಭದ್ರಾವತಿ ಉಕ್ಕು ಕಾರ್ಖಾನೆ ಖಾಸಗೀಕರಣ ವಿರೋಧಿಸಿ ಕಾರ್ಮಿಕರಿಗೆ ಕನಿಷ್ಟ ಕೂಲಿ 24,000 ನಿಗದಿ ಮಾಡುವಂತೆ ಹಾಗೂ ಸ್ಕೀಂ ನೌಕರರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ತುಮಕರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.       ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಕಾರ್ಮಿಕ ಕಾನೂನುಗಳನ್ನು ಸಂಹಿತೆಗಳಾಗಿ ಪರಿವರ್ತಿಸುವುದು ಸಾಮಾಜಿಕ, ಸ್ವಭಾವಿಕ ನ್ಯಾಯಕ್ಕೆ ವಿರುದ್ದವಾಗಿದೆ. ದೇಶದ ಜನರ ಶ್ರಮದ ದುಡ್ಡಿನಲ್ಲಿ ಕಟ್ಟಿದ ಸಾರ್ವಜನಿಕ ವಲಯದ ರೈಲ್ವೆ, ಬಿಎಸ್‍ಎನ್‍ಎಲ್, ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.        ಎಲ್ಲಾ ಕಾರ್ಮಿಕರಿಗೆ ಕಡ್ಡಾಯ ಖಾತ್ರಿ ಪಿಂಚಣಿ ಯೋಜನೆ ರೂಪಿಸಬೇಕು. ಕನಿಷ್ಠ ಪಿಂಚಣಿ ಮಾಸಿಕ 6000 ರೂಪಾಯಿ…

ಮುಂದೆ ಓದಿ...