ಸಿದ್ದಾಪುರ ಕೆರೆಗೆ ಹರಿದ ಹೇಮಾವತಿ ನೀರು!

ಮಧುಗಿರಿ:       3 ತಿಂಗಳ ಕಾಲ ಹೇಮಾವತಿ ನಾಲೆಯಿಂದ ಸಿದ್ದಾಪುರ ಕೆರೆಗೆ ನೀರು ಹರಿಸಲಾಗುವುದು, ಯಾವುದೇ ಕಾರಣಕ್ಕೂ ಮಧುಗಿರಿಯ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಸಂಸದರಾದ ಜಿ.ಎಸ್.ಬಸವರಾಜು ತಿಳಿಸಿದರು.       ತಾಲೂಕಿನ ಕಸಬಾ ಹೋಬಳಿಯ ಸಿದ್ದಾಪುರ ಕೆರೆಗೆ ಹೇಮಾವತಿ ನಾಲೆಯಿಂದ ಹರಿದು ಬರುತ್ತಿರುವ ನೀರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಹೇಮಾವತಿ ನಾಲೆಯಿಂದ ಜಿಲ್ಲೆಗೆ 24.5 ಟಿಎಂಸಿ ನೀರು ಸರಬರಾಜು ಮಾಡಲಾಗುವುದು. ಸಿದ್ಧಾಪುರ ಕೆರೆಗೆ 03 ಮೋಟಾರ್ ಮೂಲಕ ನೀರು ಹರಿಸಲು ಉದ್ದೇಶಿಸಿದ್ದು, ಸತತವಾಗಿ ಎರಡು ಮೋಟಾರುಗಳು ಕಾರ್ಯನಿರ್ವಹಿಸುತ್ತವೆ ಎಂದರು.       ಇಲ್ಲಿನ ಅಶಕ್ತ ಶಾಸಕರು ನೀರು ಹರಿಸುವ ನಿಟ್ಟಿನಲ್ಲಿ ಜವಾಬ್ದಾರಿ ವಹಿಸದೆ ಮತ್ತು ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದರಿಂದ ನೀರು ಹರಿಸಲು ತಡವಾಯಿತು.  ಇಪ್ಪತ್ತೈದು ಲಕ್ಷ ರೂ ಮೌಲ್ಯದ ಪರಿಕರಗಳು ಪಂಪ್‍ಹೌಸ್‍ನಲ್ಲಿ ಕಾಣೆಯಾಗಿರುವುದು ವಿಪರ್ಯಾಸ…

ಮುಂದೆ ಓದಿ...

ಮಹಿಳೆ ಮತ್ತು ವೃದ್ದೆಯ ಕೈಕಾಲು ಕಟ್ಟಿ ಮನೆಯಲ್ಲಿ ಕಳ್ಳತನ!!

ಕೊರಟಗೆರೆ:       ವಯೋವೃದ್ದೆ ಮತ್ತು ಮಹಿಳೆಯ ಕೈಕಾಲುಗಳನ್ನು ಟೈನ್‍ದಾರದಿಂದ ಕಟ್ಟಿ ಬಾಯಿಯೊಳಗೆ ಬಟ್ಟೆ ತೂರಿಸಿ ಕಿರುಚಿದರೇ ಅತ್ಯಾಚಾರ ಮಾಡುವ ಬೆದರಿಕೆ ಹಾಕಿ ಮನೆಯಲ್ಲಿದ್ದ ಬೆಳ್ಳಿ ಮತ್ತು ಬಂಗಾರವನ್ನು ದೋಚಿ ಸಿನಿಮೀಯ ರೀತಿಯಲ್ಲಿ ಪರಾರಿ ಆಗಿರುವ ಘಟನೆ ನಡೆದಿದೆ.       ತಾಲೂಕಿನ ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಮದ ಶಾರದಮ್ಮ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಅರಸಾಪುರ ಗ್ರಾಮದ ಸರಕಾರಿ ಶಾಲೆಯ ಹಿಂಭಾಗ ಇರುವ ಒಂಟಿ ಮನೆಯಲ್ಲಿ ಶಾರದಮ್ಮ ಮತ್ತು ತಾಯಿ ಲಕ್ಕಮ್ಮ ಇಬ್ಬರು ವಾಸವಿದ್ದಾರೆ. ಏಕಾಏಕಿ ಐದು ಜನರ ತಂಡ ಮನೆಯ ಒಳಗೆ ಪ್ರವೇಶ ಮಾಡಿ ಬೆದರಿಕೆ ಹಾಕಿ ಕಳ್ಳತನ ಮಾಡಿದ್ದಾರೆ.       ಟೀಶರ್ಟು ಧರಿಸಿದ್ದ ಐದು ಜನ ಕಳ್ಳರ ತಂಡ ಕೊಠಡಿಯಲ್ಲಿದ್ದ ವೃದ್ದೆಗೆ ಬೆದರಿಕೆ ಹಾಕಿ ಬಾಗಿಲು ಹಾಕಿದ್ದಾರೆ. ನಂತರ ಅಡುಗೆ ಮನೆಯಲ್ಲಿದ್ದ ಶಾರದಮ್ಮ ಎಂಬುವರ ಮುಖಕ್ಕೆ ಹೊಡೆದು…

ಮುಂದೆ ಓದಿ...

ಕರ್ತವ್ಯ ಲೋಪ : ಶಿಕ್ಷಕನ ಅಮಾನತ್ತು!

ತುಮಕೂರು :       ಜಿಲ್ಲೆಯ ಪಾವಗಡ ತಾಲೂಕು ಕೋಮಾರ್ಲಹಳ್ಳಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ನಾಗೇಂದ್ರಪ್ಪ ಟಿ.ಎಸ್. ಎಂಬ ಸಹ ಶಿಕ್ಷಕ ಅವರು ಆಗಸ್ಟ್ 7ರಂದು ಮದ್ಯಪಾನ ಮಾಡಿ ಶಾಲೆಗೆ ಹಾಜರಾಗಿ ಶಾಲಾ ಶೈಕ್ಷಣಿಕ ವಾತಾವರಣ ಕಲುಷಿತಗೊಳಿಸುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳಲು ಕಾರಣರಾಗಿರುತ್ತಾರೆ.          ಇವರು ಕರ್ತವ್ಯ ಲೋಪ ಎಸಗಿರುವುದರಿಂದ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957ರ ನಿಯಮ 10ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಶಿಸ್ತು ಕ್ರಮ ಕೈಗೊಂಡು ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ ಎಂದು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ(ಆಡಳಿತ) ರವಿಶಂಕರ ರೆಡ್ಡಿ ತಿಳಿಸಿದ್ದಾರೆ.

ಮುಂದೆ ಓದಿ...

ಇಂಟಿಗ್ರೆಟೆಡ್ ಕಮಾಂಡಿಂಗ್ ಕೇಂದ್ರಕ್ಕೆ ಸಂಸದ ಬಸವರಾಜು ಚಾಲನೆ!

ತುಮಕೂರು:       ಸಿಗ್ನಲ್ ಜಂಪ್ ಮಾಡುವುದು ಸೇರಿದಂತೆ ತುಮಕೂರು ನಗರದಲ್ಲಿ ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡುವ ವಾಹನಗಳನ್ನು ಪತ್ತೆ ಹಚ್ಚುವುದು ಸೇರಿದಂತೆ ವಿವಿಧ 7 ಅತ್ಯಾಧುನಿಕ ಕೆಲಸಗಳನ್ನು ನಿರ್ವಹಿಸುವ ಇಂಟಿಗ್ರೆಟೆಡ್ ಸಿಟಿ ಕಮಾಂಡಿಂಗ್ ಅಂಡ್ ಕಂಟ್ರೋಲಿಂಗ್ ಕೇಂದ್ರವು ಮಹಾನಗರ ಪಾಲಿಕೆ ಆವರಣದಲ್ಲಿ ಇಂದಿನಿಂದ (ಗುರುವಾರ) ಕಾರ್ಯಾರಂಭ ಮಾಡಿದೆ.       ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ ಈ ಕೇಂದ್ರವನ್ನು ಸಂಸದರಾದ ಜಿ.ಎಸ್. ಬಸವರಾಜು ಅವರು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು, ಈ ಕೇಂದ್ರದ ಮೂಲಕ ತುಮಕೂರು ನಗರದ 8 ಜಂಕ್ಷನ್‍ಗಳಲ್ಲಿ ರಸ್ತೆ ನಿಯಮ ಉಲ್ಲಂಘಿಸುವ ವಾಹನಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಇದರಿಂದಾಗಿ ಶಿಸ್ತುಬದ್ಧ ಸಾರಿಗೆ ವ್ಯವಸ್ಥೆ ನಗರದಲ್ಲಿ ಅನುಷ್ಟಾನಗೊಳ್ಳಲಿದೆ. ಈ ಯೋಜನೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗಿದೆ. ಇಂದು ಈ ಕೇಂದ್ರವನ್ನು ಆರಂಭಿಸಿದ್ದು, ಈ ಬಗ್ಗೆ ನಗರದ ಜನತೆಗೆ ವ್ಯಾಪಕ ಅರಿವು ಮೂಡಿಸಬೇಕಾಗಿದೆ.…

ಮುಂದೆ ಓದಿ...