ಸಿದ್ದಾಪುರ ಕೆರೆಗೆ ಹರಿದ ಹೇಮಾವತಿ ನೀರು!

ಮಧುಗಿರಿ:

      3 ತಿಂಗಳ ಕಾಲ ಹೇಮಾವತಿ ನಾಲೆಯಿಂದ ಸಿದ್ದಾಪುರ ಕೆರೆಗೆ ನೀರು ಹರಿಸಲಾಗುವುದು, ಯಾವುದೇ ಕಾರಣಕ್ಕೂ ಮಧುಗಿರಿಯ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಸಂಸದರಾದ ಜಿ.ಎಸ್.ಬಸವರಾಜು ತಿಳಿಸಿದರು.

      ತಾಲೂಕಿನ ಕಸಬಾ ಹೋಬಳಿಯ ಸಿದ್ದಾಪುರ ಕೆರೆಗೆ ಹೇಮಾವತಿ ನಾಲೆಯಿಂದ ಹರಿದು ಬರುತ್ತಿರುವ ನೀರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಹೇಮಾವತಿ ನಾಲೆಯಿಂದ ಜಿಲ್ಲೆಗೆ 24.5 ಟಿಎಂಸಿ ನೀರು ಸರಬರಾಜು ಮಾಡಲಾಗುವುದು. ಸಿದ್ಧಾಪುರ ಕೆರೆಗೆ 03 ಮೋಟಾರ್ ಮೂಲಕ ನೀರು ಹರಿಸಲು ಉದ್ದೇಶಿಸಿದ್ದು, ಸತತವಾಗಿ ಎರಡು ಮೋಟಾರುಗಳು ಕಾರ್ಯನಿರ್ವಹಿಸುತ್ತವೆ ಎಂದರು.

      ಇಲ್ಲಿನ ಅಶಕ್ತ ಶಾಸಕರು ನೀರು ಹರಿಸುವ ನಿಟ್ಟಿನಲ್ಲಿ ಜವಾಬ್ದಾರಿ ವಹಿಸದೆ ಮತ್ತು ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದರಿಂದ ನೀರು ಹರಿಸಲು ತಡವಾಯಿತು.  ಇಪ್ಪತ್ತೈದು ಲಕ್ಷ ರೂ ಮೌಲ್ಯದ ಪರಿಕರಗಳು ಪಂಪ್‍ಹೌಸ್‍ನಲ್ಲಿ ಕಾಣೆಯಾಗಿರುವುದು ವಿಪರ್ಯಾಸ ಎಂದ ಅವರು ಇನ್ನು ಮುಂದೆ ಇಲ್ಲಿನ ಜನತೆ ನೀರಿಗಾಗಿ ಪರಿತಪಿಸುವ ಅಗತ್ಯವಿಲ್ಲ ಎಂದು ತಿಳಿಸಿದರು .

       ಈ ಸಂಧರ್ಭದಲ್ಲಿ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ, ತಹಶೀಲ್ದಾರ್ ನಂದೀಶ್, ಜಿ.ಪಂ ಸದಸ್ಯ ಜಿ.ಜೆ ರಾಜಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ, ಸದಸ್ಯ ಸೊಸೈಟಿ ರಾಮಣ್ಣ, ಎಪಿಎಂಸಿ ಅಧ್ಯಕ್ಷ ಮರಿಯಣ್ಣ, ತಾ.ಪಂ ಇಓ ದೊಡ್ಡಸಿದ್ದಯ್ಯ, ಪುರಸಭಾ ಮುಖ್ಯಾಧಿಕಾರಿ ಡಿ. ಲೋಹಿತ್, ಗ್ರಾ.ಪಂ ಅಧ್ಯಕ್ಷ ವಿ.ಆರ್.ಭಾಸ್ಕರ್, ಪುರಸಭಾ ಸದಸ್ಯರಾದ ತಿಮ್ಮರಾಯಪ್ಪ. ಎಂ.ವಿ.ಗೋವಿಂದರಾಜು. ಲಾಲಪೇಟೆ ಮಂಜುನಾಥ್, ಅಲೀಂ, ನಾಗಲತಾಲೋಕೇಶ್. ರಾಧಿಕಾಆನಂದ್. ಸುಜಾತಶಂಕರನಾರಾಯಣ, ಶೋಭಾ ಎಂಜಿರಾಮು, ಮುಖಂಡರಾದ ಎಂ.ಎಸ್ ಮಲ್ಲಿಕಾರ್ಜುನಯ್ಯ, ರಮೇಶ್ ರೆಡ್ಡಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಕ್ಷಿತ್, ಸುರೇಶ್, ಬಸವರಾಜು ಅಯ್ಯ, ಸಾಧಿಕ್, ಷಕೀಲ್. ಪಿ.ಸಿ.ಕೃಷ್ಣರೆಡ್ಡಿ, ಚಂದ್ರಶೇಖರ್. ಯುವ ಕಾಂಗ್ರೇಸ್ ಅಧ್ಯಕ್ಷ ಕೃಷ್ಣಮೂರ್ತಿ, ನಾಗೇಂದ್ರ, ವಿನೇಶ್, ದೀಪಕ್, ಭೀಮರಾಜು ಮತ್ತಿತರರು ಇದ್ದರು.

(Visited 6 times, 1 visits today)

Related posts

Leave a Comment