ಬಸ್-ಆಟೋಗಳ ನಡುವೆ ಡಿಕ್ಕಿ : ಓರ್ವ ಮಹಿಳೆ ಸಾವು!

ಚಿಕ್ಕನಾಯಕನಹಳ್ಳಿ:

      ಖಾಸಗಿ ಬಸ್ ಹಾಗೂ ಆಟೋಗಳ ನಡುವೆ ನಡೆದ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಪಟ್ಟಣದ ದುಗಡಿಹಳ್ಳಿ ಬಳಿ ನಡೆದಿದೆ.

      ತಿಪಟೂರಿನಿಂದ ಚಿ.ನಾ. ಹಳ್ಳಿಯಕಡೆ ಬರುತ್ತಿದ್ದ ಖಾಸಗಿ ಬಸ್ ದುಗಡಿಹಳ್ಳಿ ಕಟ್ಟೆಯ ಬಳಿ ಎದುರಿನಿಂದ ಬರುತ್ತಿದ್ದ ಆಟೋಗೆ ಡಿಕ್ಕಿಹೊಡೆದ ಪರಿಣಾಮ ಆಟೋದಲಿದ್ದ ಪಟ್ಟಣದ ಲತಾಮಣಿ (35) ಎಂಬುವರಿಗೆ ತಲೆಗೆ ತೀವ್ರಪೆಟ್ಟುಬಿದ್ದು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ತನ್ನ ಮಗುವಿನ ಚಿಕಿತ್ಸೆಗಾಗಿ ತಿಪಟೂರಿಗೆ ತೆರಳುತ್ತಿದ್ದಾಗ ಈಘಟನೆ ನಡೆದಿದೆ. ಪ್ರಕರಣ ಪಟ್ಟಣದ ಠಾಣೆಯಲ್ಲಿ ದಾಖಲಾಗಿದೆ.

(Visited 6 times, 1 visits today)

Related posts

Leave a Comment