ಬಿಜೆಪಿ ಪಕ್ಷದಿಂದ ಸೇಡಿನ ರಾಜಕಾರಣ – ಜಿ.ಪರಮೇಶ್ವರ್ ಆರೋಪ

ಕೊರಟಗೆರೆ:       ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಐಟಿ ಮತ್ತು ಇಡಿ ಇಲಾಖೆಯನ್ನು ಬಳಸಿಕೊಂಡು ಕಾಂಗ್ರೇಸ್ ಪಕ್ಷದ ನಾಯಕರ ವಿರುದ್ದ ಸೇಡಿನ ರಾಜಕೀಯ ಮಾಡುತ್ತಾ ವಿರೋದ ಪಕ್ಷವನ್ನು ಹಣಿಯುವ ಪ್ರಯತ್ನ ಮಾಡುತ್ತೀದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಆಕ್ರೋಶ ವ್ಯಕ್ತಪಡಿಸಿದರು.       ಅವರು ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷದ ವತಿಯಿಂದ ಡಿ.ಕೆ.ಶಿವಕುಮಾರ ಬಂಧನವನ್ನು ವಿರೋದಿಸಿ ಗುರುವಾರ ಏರ್ಪಡಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.       ನಮ್ಮ ದೇಶದ ಜನರು ಕಾನೂನು ರೀತಿಯಲ್ಲಿ ಕೆಲಸ ನಿರ್ವಹಣೆ ಮಾಡುವಂತೆ ನರೇಂದ್ರ ಮೋದಿಗೆ ಜನಾದೇಶ ನೀಡಿದ್ದಾರೆ. ಆದರೇ ಇಲಾಖೆಗಳ ಮೂಲಕ ಪ್ರತಿಪಕ್ಷದ ನಾಯಕರನ್ನು ಹತ್ತೀಕ್ಕುವ ಕೆಲಸದಲ್ಲಿ ತೊಡಗಿದೆ. ದೇಶದ ಆರ್ಥಿಕತೆ ಕೆಳಮಟ್ಟಕ್ಕೆ ಇಳಿದಿದೆ. ಲಕ್ಷಾಂತರ ಜನರು ಇರುವ ಉದ್ಯೋಗ ಇಲ್ಲದೇ ನಿರುದ್ಯೋಗಿಗಳಾಗಿ ತಿರುಗಾಡುತ್ತೀದ್ದಾರೆ ಎಂದು ಆರೋಪ ಮಾಡಿದರು.  …

ಮುಂದೆ ಓದಿ...

ತುರುವೇಕೆರೆ : ಬಿಜೆಪಿ-ಜೆಡಿಎಸ್‍ಮುಖಂಡರ ನಡುವೆ ಮಾತಿನ ಚಕಮಕಿ!

ತುರುವೇಕೆರೆ:        ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿನ ಕಾಂಕ್ರಿಟ್ ರಸ್ತೆ ಕಾಮಗಾರಿ ವಿಚಾರದಲ್ಲಿ ಶಾಸಕ ಮಸಾಲ ಜಯರಾಮ್ ಮತ್ತು ಬಿಜೆಪಿ ಮುಖಂಡರು ಹಾಗೂ ತಾಲೂಕು ಪಂಚಾಯಿತಿ ಜೆಡಿಎಸ್ ಸದಸ್ಯ ರವಿ ಮತ್ತು ಸ್ಥಳೀಯ ಜೆಡಿಎಸ್ ಮುಖಂಡರ ನಡುವೆ ಮಾತಿನ ಚಕಮಕಿ ಗುರುವಾರ ನಡೆದಿದೆ.       ತಾಲೂಕಿನ ಕುರುಬರಹಳ್ಳಿ ಗ್ರಾಮಕ್ಕೆ ಮುಖ್ಯಮಂತ್ರಿ ಗ್ರಾಮ ವಿಕಾಸ್ ಯೋಜನೆಯಡಿ ಮುಂಜೂರಾಗಿರುವ ಕಾಂಕ್ರಿಟ್ ರಸ್ತೆ ಹಾಗೂ ಭೂಮಿಪೂಜೆ ಕಾಮಗಾರಿಗೆ ಶಾಸಕ ಮಸಾಲೆಜಯರಾಮ್ ಇತ್ತೀಚೆಗಷ್ಟೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದ್ದರು ಅದರಂತೆ ಸ್ಥಳೀಯ ಗುತ್ತಿಗೆದಾರರು ಕಾಮಗಾರಿ ಪ್ರಾರಂಬಿಸಿದ್ದರು. ಚರಂಡಿ ಮಾಡುವ ವಿಚಾರದಲ್ಲಿ ಸ್ಥಳಿಯ ಗ್ರಾಮಸ್ಥರು ಸಹಕರಿಸದೆ ರಾಜಕೀಯ ತಿರುವು ಪಡೆದು ಕಾಮಗಾರಿಯನ್ನು ನಿಲ್ಲಿಸಲಾಗಿತ್ತು.       ಈ ವಿಚಾರ ತಿಳಿದ ಶಾಸಕ ಮಸಾಲ ಜಯರಾಮ್ ಗುರುವಾರ ಸಂಜೆ ಸ್ಥಳ ಪರಿಶೀಲನಗೆ ಖುದ್ದು ಗ್ರಾಮಕ್ಕೆ ಆಗಮಿಸಿದ್ದಾಗ ತಾಲೂಕು ಪಂಚಾಯ್ತಿ ಸದಸ್ಯ…

ಮುಂದೆ ಓದಿ...

ವಿದ್ಯಾರ್ಥಿನಿಲಯಗಳಲ್ಲಿ ಶುಚಿತ್ವ ಕಾಪಾಡಲು ಸಿಇಓ ಸಲಹೆ

ತುಮಕೂರು:       ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ವಿದ್ಯಾರ್ಥಿ ನಿಲಯಗಳಲ್ಲಿ ಶುಚಿತ್ವ ಕಾಪಾಡಬೇಕು ಎಂದು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.       ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜರುಗಿದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡಗಳ ಕಲ್ಯಾಣ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚ್ಛತೆ ಕಾಪಾಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ಶುದ್ಧ ಕುಡಿಯುವ ನೀರು, ಆಟೋಟಗಳ ಬಗ್ಗೆ ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.       ಸಮಾಜ ಕಲ್ಯಾಣ ಇಲಾಖೆ ಮತ್ತು ಇನ್ನುಳಿದ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ವೇತನ ಪಾವತಿಯಾಗಿರುವ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ಕೈಗೊಂಡ ಅವರು ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳಿಗೆ ತಪ್ಪದೇ ನಿಗಧಿತ ಅವಧಿಯೊಳಗೆ…

ಮುಂದೆ ಓದಿ...

ರೈತರ ಪ್ರತಿಭಟನೆ : ಹೇಮಾವತಿ ಚಾನಲ್ ಗೇಟ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ

 ತುಮಕೂರು:       ಜಿಲ್ಲೆಯ ತುಮಕೂರು ತಾಲ್ಲೂಕು ಹೆಬ್ಬೂರು ವ್ಯಾಪ್ತಿ ಡಿ 23-ಅರಿಯೂರು, ಡಿ 24-ಬೊಮ್ಮನಹಳ್ಳಿ ಹಾಗೂ 153 ಎಸ್ಕೇಪ್‍ವಾಲ್ ಡಿ.ಎಸ್.ಪಾಳ್ಯ, ಕಣಕುಪ್ಪೆ ಗೇಟ್‍ವಾಲ್ ಬಳಿ ಹಾದು ಹೋಗಿರುವ ಹೇಮಾವತಿ ಚಾನೆಲ್ ಗೇಟ್‍ಗಳ ಸುತ್ತಮುತ್ತ 100 ಮೀಟರ್ ಪ್ರದೇಶದಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತುಮಕೂರು ತಾಲೂಕಿನ ತಾಲ್ಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಆರ್. ಯೋಗಾನಂದ ಆದೇಶ ಹೊರಡಿಸಿದ್ದಾರೆ.       ಕುಡಿಯುವ ನೀರಿಗಾಗಿ ಹರಿಸುತ್ತಿರುವ ಹೇಮಾವತಿ ನೀರನ್ನು ಏಕಾಏಕಿ ರೈತರು ಜಮಾಯಿಸಿ, ಕೆರೆಗಳಿಗೆ ತುಂಬಿಸಿಕೊಳ್ಳುವ ಸಲುವಾಗಿ ನಾಲೆಯ ತೂಬುಗಳ ಬಳಿ ಪ್ರತಿಭಟನೆ ನಡೆಸುತ್ತಿದ್ದು, ಹೇಮಾವತಿ ನಾಲೆಯ ಗೇಟ್‍ಗಳನ್ನು ಜಖಂಗೊಳಿಸುವ ಸಂಭವವಿರುವುದರಿಂದ ಈ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.       ನಿಷೇಧಾಜ್ಞೆಯು ಈಗಾಗಲೇ ಜಾರಿಯಲ್ಲಿದ್ದು, ಸೆಪ್ಟೆಂಬರ್ 10ರ ಸಂಜೆ 6 ಗಂಟೆಯವರೆಗೆ…

ಮುಂದೆ ಓದಿ...

ದೇಶದ ಶಿಕ್ಷಣ ಕ್ಷೇತ್ರದ ನೀತಿಗಳಿಂದ ಶಿಕ್ಷಣಕ್ಕೆ ಅಪಾಯ-ಶಾಸಕ ಪರಮೇಶ್ವರ್

ಕೊರಟಗೆರೆ:       ನಮ್ಮದೇಶದ ಶಿಕ್ಷಣ ಕ್ಷೇತ್ರದ ನೀತಿಗಳು ಪ್ರಾಥಮಿಕ ಶಾಲಾ ಶಿಕ್ಷಣವನ್ನು ಅಪಾಯದಅಂಚಿಗೆತಲುಪುವಂತೆ ಮಾಡಿದೆಎಂದು ಮಾಜಿಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ವಿಷಾದ ವ್ಯಕ್ತಪಡಿಸಿದರು.       ಪಟ್ಟಣದ ಮಾರುತಿಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದಡಾ.ಎಸ್.ರಾಧಕೃಷ್ಣನ್‍ರವರ 132ನೇ ಜಯಂತಿಯ ಪ್ರಯುಕ್ತ ಗುರುವಾರ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.       ಸರಕಾರ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದ್ದೇ ಸರಕಾರಿ ಶಾಲೆಗಳ ಅವನತಿಗೆ ಮೂಲ ಕಾರಣವಾಗಿದೆ. ಖಾಸಗಿ ಶಾಲೆಗಳ ವಾಹನಗಳು ಮನೆಯ ಬಾಗಿಲಿಗೆ ಬಂದು ಸರಕಾರಿ ಶಾಲೆಗಳು ಮುಚ್ಚುತ್ತೀವೆ. ಸರಕಾರಿ ಶಾಲೆಗಳಲ್ಲಿ ಉತ್ತಮಗುಣಮಟ್ಟದ ಶಿಕ್ಷಣ ಕಲ್ಪಿಸಿದರೇ ಖಾಸಗಿ ಶಾಲೆಗಳ ಅವಶ್ಯಕತೆಯೇ ಬರುವುದಿಲ್ಲ ಎಂದು ತಿಳಿಸಿದರು.       ತಂತ್ರಜ್ಞಾನದಲ್ಲಿಇಡೀ ವಿಶ್ವಕ್ಕೆ ಭಾರತಕೊಡುಗೆಅಪಾರವಾಗಿದೆ. ನಮ್ಮರಾಜಧಾನಿ ಬೆಂಗಳೂರಿನಲ್ಲಿ ದೇಶದ ಶೇ.60ರಷ್ಟು ಸಾಪ್ಟ್‍ವೇರ್ ಕಂಪನಿಗಳೇ ತಂತ್ರಾಂಶತಯಾರು ಮಾಡುತ್ತೀವೆ. ಇದರಿಂದದೇಶ ಮತ್ತುರಾಜ್ಯಕ್ಕೆ ನೂರಾರುಕೋಟಿ ಲಾಭ ಬರುತ್ತೀದೆ. ಶಿಕ್ಷಣ ಎಂಬುದು…

ಮುಂದೆ ಓದಿ...