ತುಮಕೂರು : ಅಮಾನಿಕೆರೆ ಕಾಮಗಾರಿ ವೀಕ್ಷಿಸಿದ ಅಧಿಕಾರಿಗಳ ತಂಡ

ತುಮಕೂರು:       ದಶಕದ ಹಿಂದೆ ಹೂಳು ತುಂಬಿಕೊಂಡು ಹಾಳಾಗಿದ್ದ ಅಮಾನಿಕೆರೆ ಅಭಿವೃದ್ಧಿ ಕಾಮಗಾರಿಯು ಸ್ಮಾರ್ಟ್ ಸಿಟಿ ಯೋಜನೆಯಡಿ ಭರದಿಂದ ಸಾಗಿದ್ದು, ಶನಿವಾರ ತಾಂತ್ರಿಕ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿತು.       ಭೇಟಿ ಸಂದರ್ಭದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಅಧ್ಯಕ್ಷೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಮಾತನಾಡಿ, ತುಮಕೂರಿನ ಹೆಮ್ಮೆ ಎಂದೇ ಬಿಂಬಿತವಾಗಿರುವ ಅಮಾನಿಕೆರೆಯನ್ನು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (TSCL) ಅಭಿವೃದ್ಧಿ ಕಾಮಗಾರಿ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಡಿ ಕೆರೆಯ ಬಂಡ್ ಅಭಿವೃದ್ಧಿ, ಬೋಟಿಂಗ್ ಕೊಳದ ಅಭಿವೃದ್ಧಿ, ಸೈಕಲ್ ಟ್ರ್ಯಾಕ್, ಫುಟ್ಪಾತ್ ಮತ್ತು ಮೋನೋರೈಲ್, ಕಾರ್ ಪಾತ್‍ವೇ ಅಭಿವೃದ್ಧಿ, ವಾಕಿಂಗ್‍ಪಾತ್, ವಾರಾಂತ್ಯದ ಸಂಗೀತ ಕಾರಂಜಿ, ಮಕ್ಕಳ ಆಟಿಕೆ ಜಾಗ, ಮಕ್ಕಳಿಗೆ ಉದ್ಯಾನವನ, ಯೋಗಕೇಂದ್ರ, ಉದ್ಯಾನವನಕ್ಕೆ ಬಂದ ಪ್ರವಾಸಿಗರು ದೂರದಲ್ಲೇ…

ಮುಂದೆ ಓದಿ...