ಕೇಂದ್ರದ ಬಿಜೆಪಿ ಸರ್ಕಾರ ಒಕ್ಕಲಿಗರನ್ನು ತುಳಿಯುವ ಪ್ರಯತ್ನಕ್ಕೆ ಮುಂದಾಗಿದೆ – ಎಂ.ಟಿ.ಕೃಷ್ಣಪ್ಪ ಕಿಡಿ

ತುರುವೇಕೆರೆ :       ಮಾಜಿ ಸಚಿವ ಡಿ.ಶಿವಕುಮಾರ್‍ರವರನ್ನು ಭಂದಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಒಕ್ಕಲಿಗರನ್ನು ತುಳಿಯ ಪ್ರಯತ್ನಕ್ಕೆ ಮುಂದಾಗಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಕಿಡಿಕಾರಿದರು.       ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಫ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‍ಶಾ ದ್ವೇಶ ರಾಜಕಾರಣಕ್ಕೆ ಮುಂದಾಗಿ ಸಂವಿಧಾನ ಭದ್ದವಾಗಿ ರೂಪಿತಗೊಂಡಿರುವ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಇ.ಡಿ, ಐ.ಟಿ ಹಾಗೂ ಸಿ.ಬಿ.ಐ.ಗಳ ಮೂಲಕ ಪ್ರಜಾಫೃಭುತ್ವದ ಕಗ್ಗೊಲೆಗೆ ಮುಂದಾಗಿದ್ದಾರೆ.         ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಭಂದಿಸುವ ಮೂಲಕ ಗುಜರಾತ್ ಚುನಾವಣೆಯ ಮುಖಭಂಗದ ಸೇಡನ್ನು ತೀರಿಸಿಕೊಂಡಿದ್ದಾರೆ. ಇದು ಸಂವಿಧಾನದ ಕಗ್ಗೊಲೆ ಇ.ಡಿ.ವಿಚಾರಣೆಗೆ ಒಂದು ದಿನವೂ ತಪ್ಪಿಸಿಕೊಳ್ಳದೆ ಪ್ರಾಮಾಣಿಕವಾಗಿ ಹಾಜರಾದ ಡಿ.ಕೆ.ಶಿವಕುಮಾರ್ ಭಂದನದ ಹಿಂದೆ ಕೇಂದ್ರದ ಕೈವಾಡವಿದೆ. ಇದು ಕನಾಟಕದಲ್ಲಿ ಒಕ್ಕಲಿಗ ನಾಯಕರನ್ನು ತುಳಿಯುವ ಪ್ರಯತ್ನಕ್ಕೆ ಬಿಜೆಪಿ…

ಮುಂದೆ ಓದಿ...

ಡಿಕೆಶಿ ಅವರಿಗೆ ಹೀಗಾಗಬಾರದಿತ್ತು – ಶಾಸಕ ಮಸಾಲಾ ಜಯರಾಮ್

ಗುಬ್ಬಿ :       ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಂಧನದ ಬಗ್ಗೆ ನನಗೂ ಅನುಕಂಪವಿದೆ. ರಾಷ್ಟ್ರೀಯ ಪಕ್ಷದ ಮುಂಚೂಣಿ ನಾಯಕರಾಗಿದ್ದ ಡಿಕೆಶಿ ಅವರಿಗೆ ಹೀಗಾಗಬಾರದಿತ್ತು ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಮೃದುಧೋರಣೆ ತೋರಿದರು. ತಾಲ್ಲೂಕಿನ ಸಿ.ಎಸ್.ಪುರ ಮತ್ತು ಜನ್ನೇನಹಳ್ಳಿ ಗ್ರಾಮದಲ್ಲಿ ಎಸ್‍ಸಿಪಿ ಮತ್ತು ಟಿಎಸ್‍ಪಿ ಅನುದಾನದ 16 ಲಕ್ಷ ರೂಗಳ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಒಂದು ಸಮುದಾಯದ ಪ್ರಬಲ ನಾಯಕರಾಗಿ ಇಡಿ ತನಿಖೆಗೆ ಒಳಪಟ್ಟಿರುವ ಡಿಕೆಶಿ ಅವರ ಬಗ್ಗೆ ವೈಯಕ್ತಿಕ ಅಭಿಮಾನವಿದೆ. ತನಿಖೆಯು ಕಾನಿನ ಚೌಕಟ್ಟಿನಲ್ಲಿ ನಡೆಯಲಿದೆ. ಕಾನೂನಿಗೆ ತಲೆ ಬಾಗಬೇಕಿದೆ ಎಂದರು.       ತುರುವೇಕೆರೆ ಕ್ಷೇತ್ರಕ್ಕೆ ಈ ಮೊದಲು ಅಭಿವೃದ್ದಿಗೆ ಕೆಲಸಕ್ಕೆ ಶ್ರಮಪಟ್ಟು ತಂದಿದ್ದ 200 ಕೋಟಿ ರೂಗಳ ಅನುದಾನಕ್ಕೆ ಸುಖಾಸುಮ್ಮನೇ ಅಡ್ಡಿಪಡಿಸಲಾಗಿತ್ತು. ಮೈತ್ರಿ ಸರ್ಕಾರದ ತಡೆಯಿಂದ…

ಮುಂದೆ ಓದಿ...

ಡಿ.ಕೆ.ಶಿವಕುಮಾರ್ ಬಂಧನ ವಿಚಾರದಲ್ಲಿ ಬಿಜೆಪಿಯ ಪಾತ್ರವಿಲ್ಲ – ಡಿಸಿಎಂ ಡಾ:ಅಶ್ವಥ್ಥನಾರಾಯಣ

ತುರುವೇಕೆರೆ:       ಡಿ.ಕೆ.ಶಿವಕುಮಾರ್ ಭಂದನದ ವಿಚಾರದಲ್ಲಿ ತನಿಖೆ ಕಾನೂನು ಚೌಕಟ್ಟಿನಲ್ಲಿಯೇ ಸಾಗುತ್ತಿದ್ದು, ಇದರಲ್ಲಿ ಬಿಜೆಪಿಯ ಪಾತ್ರವಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ:ಅಶ್ವಥ್ಥನಾರಾಯಣ ತಿಳಿಸಿದರು.       ತುರುವೇಕೆರೆ ಮಾರ್ಗವಾಗಿ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿ ನಿರ್ಮಿತವಾಗಿರುವ ಶ್ರೀ ಕಾಲಭೈರವೇಶ್ವರ ಸಮುದಾಯ ಭವನದ ಲೋಕಾರ್ಪಣಾ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಪಟ್ಟಣದ ಪ್ರವಾಸಿ ಮಂದಿರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ ಎದುರು ಎಲ್ಲರೂ ಸಮಾನರು, ಕಾನೂನನ್ನು ಎಲ್ಲರೂ ಗೌರವಿಸಬೇಕು, ಡಿ.ಕೆ.ಶಿವಕುಮಾರ್ ತಪ್ಪು ಮಾಡಿಲ್ಲದಿದ್ದರೆ ಹೊರಬರುತ್ತಾರೆ, ಆದರೆ ಈ ವಿಚಾರಕ್ಕೆ ರಾಜಕೀಯ ಲೇಪನ ಹಚ್ಚುವ ಅವಶ್ಯಕತೆಯಿಲ್ಲ, ನಮ್ಮ ದೇಶದ ಕಾನೂನು ಸಾಮಾನ್ಯನಿಂದ ಹಿಡಿದು ಕೋಟ್ಯಾಧಿಪತಿಗೂ ಒಂದೇಯಿದೆ ಕಾನೂನನ್ನು ನಾವುಗಳು ಗೌರವಿಸಬೇಕು ಎಂದರು.       ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು ಮುಂದಿನ ಎರಡು ತಿಂಗಳಲ್ಲಿ ಸಂಪುಟ ವಿಸ್ತರಣೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ ಎಂದರು.  …

ಮುಂದೆ ಓದಿ...