ಕರ್ತವ್ಯಕ್ಕೆ ಶಿಕ್ಷಕ ಗೈರು ಪೋಷಕರಿಂದ ಶಾಲೆಗೆ ಬೀಗ!

ಮಧುಗಿರಿ:       ಶಾಲೆಯಲ್ಲಿ ಸುಮಾರು 6 ತಿಂಗಳಿಂದ ಶಿಕ್ಷಕ ಕರ್ತವ್ಯಕ್ಕೆ ಹಾಜರಾಗದ ಕಾರಣ ಗ್ರಾಮ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿ ಪೋಷಕರು ಬೀಗ ಹಾಕಿ ಪ್ರತಿಭಟಿಸಿದರು.       ತಾಲೂಕಿನ ಪುರವರ ಹೊಬಳಿಯ ಕೊಂಡವಾಡಿ ಗ್ರಾಪಂನ ಕಂಸಾನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 40 ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಇಬ್ಬರು ಶಿಕ್ಷಕರಿದ್ದು ಕಳೆದ 3 ತಿಂಗಳ ಹಿಂದೆ ರಜೆಯಲ್ಲಿ ಹೋದ ಶಿಕ್ಷಕರೊಬ್ಬರು ರಜೆಗೆ ಹೋದವರು ಮತ್ತೆ ಇತ್ತ ಕಳೆ ಸುಳಿದಿಲ್ಲಾ, ಇಲ್ಲಿ ಏಕೈಕ ಶಿಕ್ಷಕರಿದ್ದಾರೆ, ಇಲಾಖೆಯ ಮೀಟಿಂಗ್, ಅಕ್ಷದಾಸೋಹ, ಇದರ ಜತೆ ಬಿಎಲ್‍ಓ ಹೊಣೆಯನ್ನು ನಿಭಯಿಸುತಿದ್ದು ಈ ಭಾಗಗ ಮಕ್ಕಳು ಶಿಕ್ಷಣ ವಂಚಿತರಾಘುತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.       ಕಳೆದ ಆರು ತಿಂಗಳಿಂದ ಗೈರಾಗುತ್ತಿರುವ ಶಿಕ್ಷಕರನ್ನು ತೆಗೆದು ಬೇರೆ ಶಿಕ್ಷಕರನ್ನು ನಿಯೋಜಿಸುವಂತೆ ಹಲವು ಬಾರಿ ಮನವಿ ಪತ್ರ ನೀಡಿದದ್ದೇವೆ, ಆದರೆ…

ಮುಂದೆ ಓದಿ...

ಅನಧಿಕೃತ ಕಟ್ಟಡದ ಮೇಲೆ ದುಪ್ಪಟ್ಟು ತೆರಿಗೆ ವಿಧಿಸುವ ನಿಯಮ ಕೈಬಿಡಿ – ಪಾಲಿಕೆ ಸದಸ್ಯರ ಆಗ್ರಹ

ತುಮಕೂರು:       ಪಾಲಿಕೆ ವ್ಯಾಪ್ತಿಯಲ್ಲಿರುವ 35 ವಾರ್ಡು ಹಾಗೂ 22 ಹಳ್ಳಿಗಳಲ್ಲಿರುವ ಅನಧಿಕೃತ ಆಸ್ತಿ/ಸ್ವತ್ತು/ಕಟ್ಟಡಗಳ ಮೇಲೆ ವಿಧಿಸಲಾಗುತ್ತಿರುವ ದುಪ್ಪಟ್ಟು ತೆರಿಗೆ ನಿಯಮವನ್ನು ಕೈಬಿಡಬೇಕೆಂದು ಪಾಲಿಕೆ ಸದಸ್ಯರೆಲ್ಲಾ ಒಕ್ಕೊರಲಿನಿಂದ ಆಗ್ರಹಿಸಿದರು.       ಪಾಲಿಕೆ ಸಭಾಂಗಣದಲ್ಲಿಂದು ಜರುಗಿದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಪಾಲಿಕೆಯಿಂದ ದುಪ್ಪಟ್ಟು ತೆರಿಗೆ ವಸೂಲಿ ಮಾಡುವುದರಿಂದ ಬಡಜನರಿಗೆ ಹೊರೆಯಾಗುತ್ತಿದೆ. ಈ ನಿಯಮವನ್ನು ಕೈಬಿಡಬೇಕೆಂದು ಹಿಂದಿನ ತುರ್ತು ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದರೂ ಇದುವರೆಗೂ ಕ್ರಮಕೈಗೊಂಡಿಲ್ಲದಿರುವುದು ಅಧಿಕಾರಿಗಳ ಬೇಜವಾಬ್ದಾರಿತನ. ಕೂಡಲೇ ನಿಯಮವನ್ನು ಕೈಬಿಡಬೇಕೆಂದು ಸದಸ್ಯರೆಲ್ಲ ಒಮ್ಮತದಿಂದ ಪಟ್ಟು ಹಿಡಿದರು.       ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಮಾತನಾಡಿ, ಅನಧಿಕೃತ ಆಸ್ತಿಗಳಿಂದ ವಸೂಲಿ ಮಾಡುತ್ತಿರುವ ದುಪ್ಪಟ್ಟು ತೆರಿಗೆ ನಿಯಮವನ್ನು ಕೈಬಿಡುವುದರೊಂದಿಗೆ ಪಾಲಿಕೆ ವ್ಯಾಪ್ತಿಯಲ್ಲಿರುವ ಅನಧಿಕೃತ ಆಸ್ತಿಗೆ ಸಂಬಂಧಿಸಿದ ಖಾತಾ ನಕಲ(ನಮೂನೆ 3)ನ್ನು ನೀಡಬೇಕು ಹಾಗೂ…

ಮುಂದೆ ಓದಿ...

ಜಿಲ್ಲೆಯಲ್ಲಿ ರಸ್ತೆ ಸುರಕ್ಷಾ ನಿಯಮ ಉಲ್ಲಂಘನೆ 257 ಚಾಲನ ಹಾಗೂ 45 ವಾಹನ ಪರವಾನಗಿ ಅಮಾನತ್ತು!

ತುಮಕೂರು:        ಜಿಲ್ಲೆಯಲ್ಲಿ ರಸ್ತೆ ಸುರಕ್ಷಾತಾ ನಿಯಮಗಳನ್ನ ಉಲ್ಲಂಘಿಸಿರುವ 257 ವಾಹನ ಸವಾರರ ಚಾಲನಾ ಪರವಾನಗಿ(ಡಿ.ಎಲ್) ಹಾಗೂ 45 ವಾಹನ ಪರವಾನಗಿಯನ್ನು ಅಮಾನತ್ತು ಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಅವರು ತಿಳಿಸಿದರು.       ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ರಸ್ತೆ ಸುರಕ್ಷಾತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತೀ ಹೆಚ್ಚು ಸಂಖ್ಯೆಯ ಅಪಘಾತಗಳು ಹಾಗೂ ಮರಣಗಳು ಸಂಭವಿಸುತ್ತಿವೆ. ಅಪಘಾತಗಳನ್ನು ತಡೆಗಟಲು ಆರ್.ಟಿ.ಒ ಹಾಗೂ ಹೆದ್ದಾರಿ ಪ್ರಾಧಿಕಾರ, ಪೊಲೀಸ್, ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.       ಅಪಘಾತ ತಡೆಗಟ್ಟಲು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಿರ್ಮಾಣಗೊಂಡಿರುವ ಕಿರು ಚಿತ್ರವನ್ನು ಎಲ್ಲಾ ಶಾಲಾ-ಕಾಲೇಜು, ಸಂಸ್ಥೆಗಳಲ್ಲಿ ಅರಿವು ಮೂಡಿಸಬೇಕು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ,…

ಮುಂದೆ ಓದಿ...