ಉತ್ತಮ ಸೇವೆ ಒದಗಿಸಲು 3 ಹೊಸ ಮೊಬೈಲ್ ಅಪ್ಲಿಕೇಶನ್‍ಗಳ ಪ್ರಾರಂಭ!

ತುಮಕೂರು:       ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಖಿಖಂI)ವು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಸಲುವಾಗಿ ಮೈಕಾಲ್, ಮೈಸ್ಪೀಡ್ ಹಾಗೂ ಡಿಎನ್‍ಡಿ ಎಂಬ ಮೂರು ಹೊಸ ಮೊಬೈಲ್ ಅಪ್ಲಿಕೇಶನ್‍ಗಳನ್ನು ಪ್ರಾರಂಭಿಸಿದೆ ಎಂದು ಕಾರ್ಯದರ್ಶಿ ಸುನಿಲ್ ಕೆ ಗುಪ್ತಾ ತಿಳಿಸಿದರು.       ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ನಗರದ ಕನ್ನಡ ಭವನದಲ್ಲಿಂದು ಏರ್ಪಡಿಸಿದ್ದ ಗ್ರಾಹಕರ ಸಂಪರ್ಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಹಲವಾರು ಉತ್ತಮ ದೂರಸಂಪರ್ಕ ಸೇವೆಗಳನ್ನು ಪ್ರಾಧಿಕಾರ ಒದಗಿಸುತ್ತಾ ಬಂದಿದ್ದು, ಈಗ ಹೊಸದಾಗಿ 3 ಅಪ್ಲಿಕೇಶನ್‍ಗಳನ್ನು ಪ್ರಾರಂಭಿಸಿದೆ. ದೂರವಾಣಿ ಕರೆಯ ಗುಣ ಮಟ್ಟ ತಿಳಿಯಲು ಮೈಕಾಲ್, ಮೊಬೈಲ್ ನೆಟ್‍ವರ್ಕ್ (ಡೌನ್‍ಲೋಡಿಂಗ್ ಹಾಗೂ ಅಪ್‍ಲೋಡಿಂಗ್)ವೇಗವನ್ನು ತಿಳಿಯಲು ಮೈ ಸ್ಪೀಡ್ ಹಾಗೂ ಅನಪೇಕ್ಷಿತ ವಾಣಿಜ್ಯಾತ್ಮಕ ಸಂದೇಶ/ಕರೆಗಳನ್ನು ನಿಷ್ಕ್ರಿಯಗೊಳಿಸಲು ಡಿಎನ್‍ಡಿ ಅಪ್ಲಿಕೇಶನ್‍ಗಳೊಂದಿಗೆ ಹೊಸ ವೆಬ್ ಪೋರ್ಟಲ್ ಅನ್ನು ಪರಿಚಯಿಸಲಾಗಿದೆ. ಹೊಸ ಅಪ್ಲಿಕೇಶನ್‍ಗಳನ್ನು ಗೂಗಲ್ ಪ್ಲೇಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ…

ಮುಂದೆ ಓದಿ...

ಲೆಕ್ಕ ಕೊಡದ ಡೇರಿ ಕಾರ್ಯದರ್ಶಿ ವಿರುದ್ಧ ಆರೋಪ

ತುಮಕೂರು :       ನಗರದ ಹೊರವಲಯದ ಊರುಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಸದಸ್ಯರಿಗೆ ಹಾಗೂ ಸಂಘದ ನಿರ್ದೇಶಕರಿಗೂ ಸಹ ವಹಿವಾಟಿನ ಲೆಕ್ಕವನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.       ಸಂಘದ ಅಧ್ಯಕ್ಷ ಸುರೇಶ್ ಹಾಗೂ ಕಾರ್ಯದರ್ಶಿ ಶ್ರೀನಿವಾಸ್ ಅವರು ಹಾಲು ಉತ್ಪಾದಕರ ಸಂಘದ ವಹಿವಾಟಿನ ಮಾಹಿತಿಯನ್ನು ನೀಡುತ್ತಿಲ್ಲ, ಡೇರಿಗೆ ಹಾಕುವ ಹಾಲಿನ ಸಂಬಂಧಿಸಿದ ಚೀಟಿಯನ್ನು ನೀಡುತ್ತಿಲ್ಲ, ಹಾಲಿನ ಬಡವಾಡೆಯಲ್ಲಿಯೂ ಮೋಸ ಮಾಡುತ್ತಿದ್ದಾರೆ, ವಹಿವಾಟಿನ ಬಗ್ಗೆ ಲೆಕ್ಕ ಹೇಳುವಂತೆಯೇ ಇಲ್ಲ ಎಂದು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಮಂಜುನಾಥ್ ದೂರಿದರು.       ಹಾಲು ಉತ್ಪಾದಕರ ಸಂಘವನ್ನು ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ, ಬಹುತೇಕ ಹಾಲು ಉತ್ಪಾದಕರ ಅನಕ್ಷರಸ್ಥರಾಗಿದ್ದು, ಅವರಿಗೆ ಯಾವುದೇ ಚೀಟಿಯನ್ನು ನೀಡುತ್ತಿಲ್ಲ, ಪ್ರತಿ ಬಟವಾಡೆಯಲ್ಲಿ ಮೂರು, ನಾಲ್ಕು ಲೀಟರ್ ಹಾಲಿನ ಹಣ ವ್ಯತ್ಯಾಸ ಬರುತ್ತಿದ್ದು, ಈ…

ಮುಂದೆ ಓದಿ...

ನಾಗವಲ್ಲಿ-ಹೊನ್ನುಡಿಕೆ ಕೆರೆಗಳ ತುಂಬಿಸಿಕೊಡುವುದಾಗಿ ಶಾಸಕ ಗೌರೀಶಂಕರ್ ಭರವಸೆ!

ತುಮಕೂರು :       ಏನೇ ಕಷ್ಟ ಎದುರಾದರೂ ಸರಿ ಗ್ರಾಮಾಂತರ ಭಾಗದ ನಾಗವಲ್ಲಿ ಹಾಗು ಹೊನ್ನುಡಿಕೆ ಕೆರೆಗಳನ್ನು ಶೇ 80 ರಷ್ಟು ತುಂಬಿಸಿಕೊಡುವುದಾಗಿ ಗ್ರಾಮಾಂತರ ಶಾಸಕ ಡಿ ಸಿ ಗೌರೀಶಂಕರ್ ಭರವಸೆ ನೀಡಿದರು.       ಅವರು ಗೂಳೂರು,ಹೊನ್ನುಡಿಕೆ,ನಾಗವಲ್ಲಿ,ಹೆಬ್ಬೂರು ,ತೊಂಡಗೆರೆ,ಹೊನಸಿಗೆರೆ ಗೂಳರಿವೆ ಸರ್ಕಾರಿ ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಿ ಮಾತನಾಡುತ್ತಿದ್ದರು, ಏತನೀರಾವರಿ ವ್ಯಾಪ್ತಿಗೊಳಪಡುವ ಕೆರೆಗಳನ್ನು ತುಂಬಿಸಲು 300 ಎಂಸಿಎಫ್ಟಿ ನೀರು ನಿಗದಿ ಮಾಡಲಾಗಿದೆ ,ಇದು ಸಂಪೂರ್ಣಅವೈಜ್ಞಾನಿಕವಾದುದು,ನಾಗವಲ್ಲಿ ಕೆರೆ ತುಂಬಿಸಲು 300 ಎಂಸಿಎಪ್ಟಿ ನೀರು ಬೇಕು, ಏತನೀರಾವರಿ ಯೋಜನೆ ವ್ಯಾಪ್ತಿಗೊಳಪಡುವ ಎಲ್ಲಾ ಕೆರೆ ತುಂಬಿಸಲು ಒಂದು ಟಿಎಂಸಿ ಗೂ ಅಧಿಕ ಪ್ರಮಾಣದ ನೀರು ಬೇಕು,ಈ ನೀರಿನ ಮಿತಿಯನ್ನು ಒಂದು ಟಿಎಂಸಿ ಗೆ ಹೆಚ್ಚಿಸಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿತ್ತು,ಇದರ ದಾಖಲೆಯನ್ನು ಕ್ಷೇತ್ರದ ಜನತೆಯ ಮುಂದಿಡುವುದಾಗಿ ತಿಳಿಸಿದರು.       ಚಿಕ್ಕಣ್ಣ ಸ್ವಾಮಿ…

ಮುಂದೆ ಓದಿ...