ಕುಖ್ಯಾತ ಮನೆ ದೇವಸ್ಥಾನಗಳ ಕಳ್ಳನ ಬಂಧನ : 3,70,000 ಬೆಲೆ ಬಾಳುವ ಆಭರಣ ವಶ!!

 ತುಮಕೂರು :       ಮನೆ ಹಾಗೂ ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಪೊಲೀಸರು ಬಂಧಿಸಿ, 3,70,000 ರೂ.ಬೆಲೆಬಾಳುವ ಆಭರಣಗಳನ್ನು ವಶಪಡಿಸಿಕೊಂದಿದ್ದಾರೆ.        ಜುಲೈ 2 ರಂದು ರಾತ್ರಿ ವೇಳೆ ತುಮಕೂರು ತಾಲ್ಲೂಕು ಕಸಬಾ ಹೋಬಳಿ ಊರುಕೆರೆ ಬೋವಿಪಾಳ್ಯದ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬೀಗ ಮುರಿದು ದೇವರ ಗರ್ಭಗುಡಿಯಲ್ಲಿಟ್ಟಿದ್ದ 20 ಸಾಲಿಗ್ರಾಮಗಳು, ಸುಮಾರು 35 ಬೆಳ್ಳಿ ಮತ್ತು ತಾಮ್ರದ ದೇವರ ಪ್ರತಿಮೆಗಳು, 2 ಬೆಳ್ಳಿ ತಾಳಿಗಳು, 2 ಬೆಳ್ಳಿ ಲೋಟಗಳು, 2 ಬೆಳ್ಳಿ ಬಟ್ಟಲುಗಳು, 1 ತಾಮ್ರದ ಬಿಂದಿಗೆ, 1 ತಾಮ್ರದ ಗಂಗಳ, 5 ತಾಮ್ರದ ತಂಬಿಗೆಗಳನ್ನು ಕಳ್ಳರು ಕಳವು ಮಾಡಿದ್ದರು. ಎಂದು ದೇವಸ್ಥಾನದ ರಮೇಶ್ ಎಂಬುವರು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.       ದೂರಿನ ಮೇರೆಗೆ ಸಿಪಿಐ ಶ್ರೀ ಮಧುಸೂಧನ್ ರವರು ವಿಶೇಷ…

ಮುಂದೆ ಓದಿ...

ಸಕಲ ರೋಗಗಳಿಗೂ ಪ್ರಕೃತಿಯಲ್ಲಿ ಔಷಧವಿದೆ: ಸಚಿವ ಮಾಧುಸ್ವಾಮಿ

 ತುಮಕೂರು:       ಪ್ರಕೃತಿಯಲ್ಲಿ ಪ್ರತಿ ರೋಗಕ್ಕೂ, ರೋಗನಿರೋಧಕ ಶಕ್ತಿ ಇರುತ್ತದೆ, ಅದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಬೇಕಾದ ಹಾಗೂ ಬೆಳೆಸುವ ಮೂಲಕ ಎಲ್ಲ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಕಾನೂನು ಸಂಸದೀಯ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.       ನಗರದ ಸಿದ್ಧಾರ್ಥ ತಾಂತ್ರಿಕ ಕಾಲೇಜಿನಲ್ಲಿ ಕರ್ನಾಟಕ ಪಶುವೈದ್ಯಕೀಯ ಸಂಘ ಮತ್ತು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಪ್ರದಾಯಿಕ ಪಶುಚಿಕಿತ್ಸೆ ವಿಷಯದ ಕುರಿತ ವಿಚಾರ ಸಂಕಿರಣ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.       ಹಾಲು ಉತ್ಪಾದನೆ ರೈತರ ಉಪಕಸಬಾಗಿದ್ದು, ಪ್ರಮುಖ ಕಸುಬಿನಲ್ಲಿ ಹೂಡುತ್ತಿದ್ದ ಬಂಡವಾಳವನ್ನು ಕಡಿಮೆ ಮಾಡುತ್ತಿತ್ತು, ಗರಿಷ್ಠ ಬೆಲೆಯನ್ನು ಉಪಕಸುಬು ದೊರೆಕಿಸಿಕೊಡುತ್ತದೆ. ಹಾಗಾಗಿ ರೈತರಿಗೆ ಉಪಕಸುಬು ನೆಚ್ಚಿಕೊಂಡಿದ್ದಾರೆ, ತುಮಕೂರು ಜಿಲ್ಲೆ ಯಂತಹ ಅರೆ ಬರಪೀಡಿತ ಜಿಲ್ಲೆ 75 ಲಕ್ಷ ಲೀಟರ್…

ಮುಂದೆ ಓದಿ...