ಪಾವಗಡ : ತಾಲ್ಲೂಕಿನ ಗಡಿ ಭಾಗದ ನಕ್ಸಲ್ ಪೀಡಿತ ಪ್ರದೇಶವಾದ ಎನ್.ಅಚ್ಚಮ್ಮನಹಳ್ಳಿ ಗ್ರಾಮದಲ್ಲಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಡಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಗುರುವಾರ ರಾತ್ರಿ ಶಾಲಾ ವಾಸ್ತವ್ಯ ಹೂಡಿದರು. ಸಂಜೆ 6.30 ಕ್ಕೆ ಆಗಮಿಸಿದ ಸಚಿವರಿಗೆ ಗ್ರಾಮದ ಹೆಬ್ಬಾಗಿಲಲ್ಲಿ ಗ್ರಾಮಸ್ಥರು ಹಾಗೂ ಮಕ್ಕಳು ಕುಂಭಮೇಳದೊಂದಿಗೆ ಸ್ವಾಗತ ಕೋರಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಜೊತೆ ಅಮೂಲಾಗ್ರವಾಗಿ ಮಾತುಕತೆ ನಡೆಸಿದ್ದೇನೆ. ಪ್ರಮುಖವಾಗಿ ಗ್ರಾಮಾಂತರ ಭಾಗಗಳ ಶಾಲೆಗಳಲ್ಲಿ ಇರುವ ಸಮಸ್ಯೆಗಳು ಗಮನಕ್ಕೆ ಬಂದಿವೆ. ಪ್ರತಿಯೊಂದು ಶಾಲೆಯಲ್ಲಿ ದೈಹಿಕ ಶಿಕ್ಷಕರ ನೇಮಕಮಾಡಬೇಕು ಎನ್ನುವ ಬೇಡಿಕೆ ಬಂದಿದ್ದು ಮಾನ್ಯ ಪ್ರಧಾನ ಮಂತ್ರಿಗಳು ಫಿಟ್ ಇಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಇದೇ ಉದ್ದೇಶದಿಂದ ಎಂದರು. ಇಂಗ್ಲೀಷ್ ಮಿಡಿಯಂ ಶಾಲೆಗಳನ್ನು ಹೆಚ್ಚಿಸಲು ಗಮನಹರಿಸಲಾಗುವುದು. ವರ್ಗಾವಣೆಯಲ್ಲಿ…
ಮುಂದೆ ಓದಿ...Day: September 20, 2019
ಮಾಜಿ ಶಾಸಕ ಸುರೇಶ್ಗೌಡ ವಿರುದ್ಧ ಆಕ್ರೋಶ
ತುಮಕೂರು: ತಾಲ್ಲೂಕಿನ ಹೆಬ್ಬೂರಿಗೆ ಮಂಜೂರಾಗಿದ್ದ ಎಂಎಸ್ಐಎಲ್ ಅನ್ನು ರದ್ದುಗೊಳಿಸಿರುವ ಮುಖ್ಯಮಂತ್ರಿಗಳ ಕ್ರಮ ವಿರೋಧಿಸಿ ಹಾಗೂ ಬಿಜೆಪಿ ದ್ವೇಷ ರಾಜಕಾರಣವನ್ನು ಖಂಡಿಸಿ, ನಾಗರೀಕರು ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜೆಡಿಎಸ್ ಗ್ರಾಮಾಂತರ ಅಧ್ಯಕ್ಷ ಹಾಲನೂರು ಅನಂತ್ಕುಮಾರ್ ಮಾತನಾಡಿ ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಹೆಬ್ಬೂರಿನಲ್ಲಿ ಆರಂಭಗೊಂಡಿದ್ದ ಎಂಎಸ್ಐಎಲ್ ಅನ್ನು ಮುಚ್ಚಿಸಲು ಮಾಜಿ ಶಾಸಕರು ಹಣ ಪಡೆದಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಸರ್ಕಾರಿ ಸಂಸ್ಥೆಯನ್ನು ಮುಚ್ಚಿಸುವ ಮೂಲಕ ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ದೂರಿದರು. ಹೆಬ್ಬೂರಿನಲ್ಲಿರುವ ಖಾಸಗಿ ವೈನ್ ಸೆಂಟರ್ಗಳಲ್ಲಿ ಕಳಪೆ ಗುಣಮಟ್ಟದ ಮದ್ಯ ಹಾಗೂ ದುಬಾರಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ, ಹೋಬಳಿಗೆ ಒಂದು ಎಂಎಸ್ಐಎಲ್ ಇರಬೇಕು ಎನ್ನುವುದು ಸರ್ಕಾರಿ ನಿಯಮವಾಗಿದ್ದು, ಅದರಂತೆ ಹೆಬ್ಬೂರಿಗೆ ಶಾಸಕ ಗೌರಿಶಂಕರ್ ಅವರು ಎಂಎಸ್ಐಎಲ್ ಅಧ್ಯಕ್ಷರಾಗಿದ್ದಾಗ…
ಮುಂದೆ ಓದಿ...