ಹೇಮಾವತಿ ನಾಲೆ ನೀರನ್ನು ಕಡೆಯ ಭಾಗದ ಕೆರೆಗಳ ಭರ್ತಿ ಮಾಡಲು ಸಂಸದರ ಸೂಚನೆ

ತುಮಕೂರು :        ಹೇಮಾವತಿ ನಾಲೆಯಲ್ಲಿ ಹರಿಯುವ ನೀರನ್ನು ನಾಲೆಯ ಕೊನೆಯ ಭಾಗದ ಪ್ರದೇಶದಲ್ಲಿರುವ ಕೆರೆಗಳನ್ನು ಭರ್ತಿ ಮಾಡಲು ಮೊದಲ ಆದ್ಯತೆ ನೀಡಬೇಕೆಂದು ಸಂಸದ ಜಿ.ಎಸ್.ಬಸವರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.       ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ನಡೆದ ದಿಶಾ (District Development Co-ordination and monitoring Committee) ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಗೊರೂರು ಜಲಾಶಯ ಪ್ರದೇಶದಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ಹೇಮಾವತಿ ನಾಲೆಗೆ ನೀರು ಹರಿಸಲಾಗುತ್ತಿದೆ. ನಾಲೆಯ ನೀರನ್ನು ನಾಲೆಗೆ ಸಂಪರ್ಕವಿರುವ ಎಲ್ಲಾ ಕೆರೆಗಳನ್ನು ತುಂಬಿಸಿಕೊಂಡರೆ ಮುಂದಿನ ಬೇಸಿಗೆಗೆ ನೀರಿನ ಬವಣೆ ತಲೆದೋರುವುದಿಲ್ಲ. ಕಳೆದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಜಿಲ್ಲೆಯ ಜನತೆ ತತ್ತರಿಸಿ ಹೋಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಕೆರೆಗಳನ್ನು ತುಂಬಿಸಬೇಕೆಂದು ಹೇಮಾವತಿ ನಾಲಾ ವಲಯದ ಇಂಜಿನಿಯರ್ ಮೋಹನ್ ಅವರಿಗೆ ನಿರ್ದೇಶನ ನೀಡಿದರು.       ನಾಲೆಗೆ ನೀರಿನ ಮಾಪಕವನ್ನು…

ಮುಂದೆ ಓದಿ...