ಕಾಲೇಜು ಆವರಣದಲ್ಲಿ ಉರುಳಿದ ಭಾರೀ ಮರ : ತಪ್ಪಿದ ಅನಾಹುತ!!

ತುಮಕೂರು:       ನಗರ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಆವರಣದಲ್ಲಿದ್ದ ಬೃಹತ್ ಗಾತ್ರದ ಬೇವಿನ ಮರವೊಂದು ಉರುಳಿ ಬಿದ್ದು, ಸಿಬ್ಬಂದಿಯೊಬ್ಬರು ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.       ಗುರುವಾರ ಬೆಳಿಗ್ಗೆ 11.43ರ ಸಮಯದಲ್ಲಿ ಬೇವಿನ ಮರವು ಉರುಳಿ ಬಿದ್ದಿದ್ದರಿಂದ ಕಾಲೇಜಿನ ಸಿಬ್ಬಂದಿ ಬಬಿತಾ ಎಂಬುವರ ಭುಜಕ್ಕೆ ಗಾಯವಾಗಿದೆ, ಮರ ಅಪ್ಪಿತಪ್ಪಿ ಕಾಲೇಜಿನ ಗ್ರಂಥಾಲಯದ ಮೇಲಾಗಲಿ ಅಥವಾ ಸಿಬ್ಬಂದಿ ಕೊಠಡಿ ಮೇಲಾಗಲಿ ಉರುಳಿ ಬಿದ್ದಿದ್ದರೆ ಭಾರೀ ಅನಾಹುತ ನಡೆಯುವ ಸಾಧ್ಯತೆ ಇತ್ತು. ಗ್ರಂಥಾಲಯದಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು, ಸಿಬ್ಬಂದಿ ಕೊಠಡಿಯಲ್ಲಿ ಉಪನ್ಯಾಸಕರು ಇದ್ದರು, ಮರದ ಬಳಿ ಕುಳಿತು ಓದುತ್ತಿದ್ದ ವಿದ್ಯಾರ್ಥಿಗಳು ಇಂದು ಆ ಕಡೆ ಹೋಗದೇ ಇದ್ದರಿಂದ ಅನಾಹುತ ತಪ್ಪಿದಂತಾಗಿದೆ.         ಮರ ಉರುಳಿದ್ದರಿಂದ ಕಾಲೇಜಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಎಬಿಎಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.…

ಮುಂದೆ ಓದಿ...

ಅತ್ಯಾಚಾರ ಅಪರಾಧಿಗೆ 7 ವರ್ಷ ಕಠಿಣ ಶಿಕ್ಷೆ!!!

ತುಮಕೂರು :      ಕುರಿ ಕಾಯಲು ಹೋಗಿದ್ದ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿದ್ದ ಅಪರಾಧಿಗೆ ಇಲ್ಲಿನ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 7 ವರ್ಷಗಳ ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.       18.4.2005 ರಂದು ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ವ್ಯಾಪ್ತಿಯ ಹಂಚಿಪುರ ಗ್ರಾಮದ ಬಳಿ ಬಾಲಕಿ ಕುರಿ ಕಾಯುತ್ತಿದ್ದಾಗ ಗೋವಿಂದ ಎಂಬಾತ ಬಲತ್ಕಾರವಾಗಿ ಅತ್ಯಾಚಾರ ವೆಸಗಿದ್ದ. ಈ ಸಂಬಂಧ ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಅಂದಿನ ಸಿಪಿಐ ಎ.ಆರ್.ಬಲರಾಮೇಗೌಡ ದೂರು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.       ಪ್ರಕರಣದ ವಿಚಾರಣೆಯು ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಗೋವಿಂದನಿಗೆ ಮೇಲ್ಕಂಡಂತೆ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ದೇಶಪಾಂಡೆ ಅವರು ತೀರ್ಪು ಪ್ರಕಟಿಸಿದ್ದಾರೆ. ನೊಂದ ಬಾಲಕಿಗೆ ಕಾನೂನು ರೀತಿ…

ಮುಂದೆ ಓದಿ...

ತುರುವೇಕೆರೆಗೆ ಆಗಮಿಸಿದ ಸಿಎಂ ಯಡಿಯೂರಪ್ಪಗೆ ಭರ್ಜರಿ ಸ್ವಾಗತ!!

ತುರುವೇಕೆರೆ :       ತಾಲೂಕಿನ ತಹಶೀಲ್ದಾರ್ ಕಚೇರಿಯ ವೃತ್ತದ ಬಳಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನರವರನ್ನು, ಶಾಸಕ ಮಸಾಲೆಜಯರಾಮ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಹೂಮಾಲೆ ಹಾಕಿ ಸನ್ಮಾನಿಸಿದರು.       ತಿಪಟೂರಿನ ಹೊನ್ನವಳ್ಳಿ ಗ್ರಾಮದ ಉಡಿಸಲಮ್ಮ ದೇವಾಲಯದ ಪೂಜೆ ಮುಗಿಸಿ ಕುಣಿಗಲ್ ತಾಲೂಕಿನ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳುತ್ತಿದ್ದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ನೋಡಲು ಶಾಸಕ ಮಸಾಲೆಜಯರಾಮ್ ಆದಿಯಾಗಿ ನೂರಾರು ಕಾರ್ಯಕರ್ತರು ಪಟ್ಟಣದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ 11ಗಂಟೆಯಿಂದಲೇ ಜಮಾಯಿಸಿದ್ದರು, ನಮ್ಮ ನೆಚ್ಚಿನ ನಾಯಕನ ಬರುವಿಕೆಯನ್ನರಿತ ಬಿ.ಎಸ್.ವೈ ಅಭಿಮಾನಿ ಪಡೆ ಮಧ್ಯಾಹ್ನದ ವೇಳೆಗೆ ನೂರಾರು ಸಂಖ್ಯೆಯಲ್ಲಿ ತಾಲೂಕಿನ ತಹಶೀಲ್ದಾರ್ ಕಚೇರಿ ಆವರಣಕ್ಕೆ ಜಮಾಯಿಸಿದರು.       ಒಂದು ಗಂಟೆ ಮುಂಚಿತವಾಗಿಯೇ ಬ್ಯಾಂಡ್ ಸೆಟ್ ವಾದ್ಯದ ಮೂಲಕ ಆಗಮನದ ನಿರೀಕ್ಷೆಗೆ ಮೆರುಗು ತಂದ ಬಿಜೆಪಿ ಕಾರ್ಯಕರ್ತರು ಪಠಾಕಿ ಸಿಡಿಸಿ ಬಿಜೆಪಿ…

ಮುಂದೆ ಓದಿ...