ಮೊದಲು ನಾವು ಬದಲಾಗಿ, ದೇಶ ಬದಲಾಯಿಸೋಣ-ಶಾಸಕ ಜ್ಯೋತಿಗಣೇಶ್

ತುಮಕೂರು:       ಮೊದಲು ನಮ್ಮ ಮನಸ್ಥಿತಿ ಬದಲಾಯಿಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಜಿ.ಬಿ ಜ್ಯೋತಿಗಣೇಶ್ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಂಘ(ರಿ) ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾ ಬಾಲಭವನದಲ್ಲಿಂದು ಏರ್ಪಡಿಸಿದ್ದ “ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ”ಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಾತ್ಮರ ದಿನವನ್ನು ಆಚರಣೆಗಷ್ಟೇ ಸೀಮಿತಗೊಳಿಸಬಾರದು. ಅವರ ಜೀವನಾದರ್ಶಗಳನ್ನು ನಾವೆಲ್ಲಾ ಅಳವಡಿಸಿಕೊಂಡಾಗ ಮಾತ್ರ ಆಚರಣೆ ಸಾರ್ಥಕವಾಗುತ್ತದೆ ಎಂದರಲ್ಲದೆ, ಕನಿಷ್ಟ ಚಿಂತನೆಗಳು ಸಮಾಜದ ಬೆಳವಣಿಗೆಯನ್ನು ಕುಗ್ಗಿಸುತ್ತದೆ. ತತ್ವ ರಹಿತ ರಾಜಕೀಯ, ಕೆಲಸವಿಲ್ಲದ ಸಂಪಾದನೆ, ಪ್ರಜ್ಞೆಯಿಲ್ಲದ ಸುಖ, ಗುಣವಿಲ್ಲದ ಜ್ಞಾನ, ನೈತಿಕತೆಯಿಲ್ಲದ ವಾಣಿಜ್ಯ, ತ್ಯಾಗವಿರದ ಪೂಜೆಯು ಮೌಲ್ಯರಹಿತ ಸಮಾಜವನ್ನು ಸೃಷ್ಟಿ ಮಾಡುತ್ತದೆ ಎಂಬ ಗಾಂಧೀ ವಿಚಾರ ಧಾರೆಗಳ ಮೇಲೆ ಬೆಳಕು ಚೆಲ್ಲಿದರು.…

ಮುಂದೆ ಓದಿ...

ಬದುಕಿನ ಪ್ರತಿ ಕ್ಷಣವನ್ನು ದೇಶಕ್ಕಾಗಿ ಮುಡಿಪಾಗಿಟ್ಟವರು ಮಹಾತ್ಮ ಗಾಂಧೀಜಿ

ತುಮಕೂರು:        ರಾಷ್ಟ್ರಪಿತ ಮಹಾತ್ಮಗಾಂಧಿಜೀಯವರ 150ನೇ ಜನ್ಮ ಜಯಂತಿಯನ್ನು ಜಿಲ್ಲಾ ಕಾಂಗ್ರೆಸ್ ಕಛೇರಿ ಹಾಗೂ ತುಮಕೂರು ನಗರದ ಎನ್.ಆರ್.ಕಾಲೋನಿಯಲ್ಲಿ ‘ಸ್ವಚ್ಚತಾ ಅರಿವು’ ಎಂಬ ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು.       ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್. ರಾಮಕೃಷ್ಣರವರು ಮಾತನಾಡುತ್ತಾ ದೇಶದ ಸ್ವತಂತ್ರಕ್ಕಾಗಿ ಹೋರಾಡಿದ ಧುರೀಣ ವ್ಯಕ್ತಿಗಳಲ್ಲಿ ಗಾಂಧೀಜಿಯವರ ಕೊಡುಗೆ ಅಪಾರವೆಂದರು, ಅವರಿಗೆ ಮಿಗಿಲಾದವರು ಯಾರು ಇಲ್ಲ. ತಮ್ಮ ಬದುಕಿನ ಪ್ರತಿ ಕ್ಷಣವನ್ನು ದೇಶಕ್ಕಾಗಿ ಮುಡಿಪಿಟ್ಟು ಕೊನೆಗೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಸತ್ಯ ಹಾಗೂ ಅಹಿಂಸಾ ತತ್ವ ಬಳಸಿ ಆಂಗ್ಲರನ್ನು ಕಟ್ಟಿ ಹಾಕಿದ ಗಾಂಧಿಜೀಯವರು ಭ್ರಿ‍ಟಿ‍‍ಷರ ವಿರುದ್ದ ದಂಡಿ ಸತ್ಯಾಗ್ರಹವನ್ನೊಳಗೊಂಡಂತೆ ಅನೇಕ ಬಾರಿ ಸೆರೆವಾಸವನ್ನು ಅನುಭವಿಸಿದ್ದಾರೆ. ಇವರ ಪ್ರಯತ್ನದಿಂದ ಭಾರತ ಸ್ವತಂತ್ರಗೊಂಡಿತು. ಇವರ ತ್ಯಾಗಕ್ಕಾಗಿ ವಿಶ್ವಸಂಸ್ಥೆಯು ಗಾಂಧಿಯವರ ಜನ್ಮದಿನವನ್ನು `ವಿಶ್ವ ಅಹಿಂಸಾ ದಿನ’ವೆಂದು ಘೋಷಿಸಿದೆ. ದೀನದಲಿತರ ಬಡವರ ಪರವಾಗಿ ಹೋರಾಡಿದ…

ಮುಂದೆ ಓದಿ...