ಮತದಾರರಿಗೆ ಹಂಚಲು ತಂದಿದ್ದ 1.75 ಲಕ್ಷ ರೂಪಾಯಿಗಳ ಮದ್ಯ ನಾಶ!!

ಪಾವಗಡ:       ತಾಲ್ಲೂಕಿನಾದ್ಯಂತ ಅಕ್ರಮವಾಗಿ ಸಾಗಾಣಿಕೆ , ಮಾರಾಟ ಹಾಗೂ ಲೋಕಸಭಾ ಮತ್ತು ವಿಧಾನಸಭಾ  ಚುನಾವಣೆ ವೇಳೆಯಲ್ಲಿ ಮತದಾರರಿಗೆ ಅಕ್ರಮವಾಗಿ ಹಂಚಲು ತಂದಿದ್ದ ಸಂದರ್ಭದಲ್ಲಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದ್ದ ಅಕ್ರಮ ಮದ್ಯವನ್ನು ಅಬಕಾರಿ ಉಪಯುಕ್ತರು  ಆದೇಶದ ಮೇರೆಗೆ ಅಧಿಕಾರಿಗಳು ಇಂದು ನಾಶಪಡಿಸಿದರು.       ಅಬಕಾರಿ ಉಪ ಅಧೀಕ್ಷಕರಾದ ಸುಭಾಸ್ ಚಂದ್ರ ಜೆ ರವರ ಸಮ್ಮುಖದಲ್ಲಿ  ಮದ್ಯ 487.980 ಲೀಟರ್ ಬಿಯರ್ 10.550 ಲೀಟರ್ ಸೇಂದಿ 99.600 ಲೀಟರ್  ಸುಮಾರು 1.75 ಲಕ್ಷ ರೂಪಾಯಿಗಳ ಮದ್ಯ ಮತ್ತು ಬಿಯರ್ ಬಾಟಲಿಗಳನ್ನು ನಾಶಮಾಡಲಾಯಿತು.        ಇದೇ ವೇಳೆ ಪಾವಗಡ ವಲಯ ವಿಭಾಗದ ಅಬಕಾರಿ ನಿರೀಕ್ಷಕ  ನಾಗರಾಜ್ ಹೆಚ್ ಕೆ , ಸಹಾಯಕ ಅಬಕಾರಿ ನಿರೀಕ್ಷಕರು ಶಿವಬಸವಯ್ಯ. ಪೃಥ್ವಿ ರಾಜು. ಕೆ . ಎಸ್.ಬಿ.ಸಿ.ಎಲ್. ಡಿಪೋ ಚಳ್ಳಕೆರೆ ಮೇನೆಜರ್ ‌ ಬಸವರಾಜು.…

ಮುಂದೆ ಓದಿ...

ರಾಜ್ಯದ ಅಭಿವೃದ್ಧಿಗಾಗಿ ಶ್ರೀರಾಮುಲುಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ – ಶಾಸಕ

ತುರುವೇಕೆರೆ:       ರಾಜ್ಯ ಬಿಜೆಪಿ ಪಕ್ಷದ ಅಭಿವೃದ್ದಿಗಾಗಿ ಸಚಿವ ಶ್ರೀರಾಮುಲುರವರಿಗೆ ರಾಜ್ಯದ ಉಪಮುಖ್ಯ ಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಶಾಸಕ ಮಸಾಲಜಯರಾಮ್ ಸರ್ಕಾರಕ್ಕೆ ಮನವಿ ಮಾಡಿದರು.        ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಾಲ್ಮೀಕಿ ಸಮುದಾಯದ ಮುಖಂಡರ ಮನವಿಯ ಮೇರೆಗೆ ಪಟ್ಟಣದಲ್ಲಿ ನಿರ್ಮಾಣವಾಗುವ ವಾಲ್ಮೀಕಿ ಸಮುದಾಯ ಭವನಕ್ಕೆ ಶಾಸಕರ ಅನುದಾನದಿಂದ 10 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಭರವಸೆ ನೀಡಿದರು. ವಾಲ್ಮೀಕಿ ಸಮುದಾಯದ ಪರಂಪರೆ ಅತ್ಯಂತ ಪ್ರಾಚೀನವಾಗಿದ್ದು ರಾಜ್ಯದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿ ಜಗತ್ತಿನಾದ್ಯಂತ ನಾಡಿನ ಕೀರ್ತಿಯನ್ನು ಪಸರಿಸುವಂತೆ ಮಾಡಿದವರು ವಾಲ್ಮೀಕಿ ವಂಶಸ್ಥರೆ ಎಂಬುದನ್ನು ಚರಿತ್ರೆ ಹೇಳುತ್ತದೆಂದು ಅಭಿಪ್ರಾಯಪಟ್ಟರು.       ಎಪಿಎಂಸಿ ನಿರ್ದೇಶಕ…

ಮುಂದೆ ಓದಿ...