ತಹಶೀಲ್ದಾರ್ ನಂದೀಶ್ ವರ್ಗಾವಣೆ ಆದೇಶಕ್ಕೆ ಕೋರ್ಟ್ ತಡೆಯಾಜ್ಞÉ

 ಮಧುಗಿರಿ :       ಅವಧಿಗೆ ಮುನ್ನ ತಹಶೀಲ್ದಾರ್ ವರ್ಗಾವಣೆ ಸರಿಯಾದ ಕಾನೂನು ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿರುವ ರಾಜ್ಯ ಆಡಳಿತ ನ್ಯಾಯ ಮಂಡಳಿಯು ಮಧುಗಿರಿ ತಹಶೀಲ್ದಾರ್ ನಂದೀಶ್ ರವರ ಅಕಾಲಿಕ ವರ್ಗಾವಣೆ ಆದೇಶಕ್ಕೆ ತಡೆ ನೀಡಿದ್ದು, ಹುದ್ದೆಯಲ್ಲಿ ಮುಂದುವರೆಯುವಂತೆ ಆದೇಶಿಸಿದೆ.       ಮಧುಗಿರಿ ತಹಶೀಲ್ದಾರ್ ನಂದೀಶ್‍ರವರನ್ನು ವರ್ಗಾವಣೆ ಮಾಡಿಸುವಂತೆ ಕ್ಷೇತ್ರದ ಕೆಲ ರಾಜಕಾರಣಿಗಳು ಮುಖ್ಯಮಂತ್ರಿಯಿಂದ ಬೇರೊಂದು ಇಲಾಖೆಯ ಅಧಿಕಾರಿಯನ್ನು ಶಿಫಾರಸ್ಸು ಮಾಡಿಸಿದ್ದರು. ಇದನ್ನು ಪ್ರಶ್ನಿಸಿ ತಹಶೀಲ್ದಾರ್ ನಂದೀಶ್ ಕೆಎಟಿ ಮೊರೆ ಹೋಗಿದ್ದರು. ಇವರ ವಾದವನ್ನು ಆಲಿಸಿದ ರಾಜ್ಯ ಆಡಳಿತ ನ್ಯಾಯ ಮಂಡಳಿಯು ಯಾವುದೇ ಅಧಿಕಾರಿಯನ್ನು ಒಂದು ಜಾಗಕ್ಕೆ ನೇಮಿಸಿದರೆ ಕನಿಷ್ಟ 2 ವರ್ಷ ವರ್ಗಾವಣೆ ಅಸಂಭವ. ಇದು ಅವಧಿಗೆ ಮುನ್ನವೇ ವರ್ಗಾವಣೆ ಮಾಡಿದ ಪ್ರಕರಣವಾಗಿದ್ದು ಕಾನೂನು ರೀತಿ ಸರಿಯಲ್ಲ.. ಮಾರುಕಟ್ಟೆಯ ಅಧಿಕಾರಿಯನ್ನು ಕಂದಾಯ ಇಲಾಖೆಯ ಅರಿವಿಲ್ಲದಂತಹ ತಹಶೀಲ್ದಾರ್ ಹುದ್ದೆಗೆ ನಿಯೋಜಿಸುವುದು ಅಕ್ಷಮ್ಯ ಎಂದು…

ಮುಂದೆ ಓದಿ...

ಜಿಲ್ಲೆಯಲ್ಲಿರುವ ದಲಿತರ ಸ್ಮಶಾನ ಭೂಮಿ ಅಭಿವೃದ್ಧಿಪಡಿಸಲಾಗುವುದು: ಡಿಸಿ

 ತುಮಕೂರು:       ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಸಮುದಾಯದವರ ಸ್ಮಶಾನ ಭೂಮಿಗಳನ್ನು ಗುರ್ತಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅವರು ತಿಳಿಸಿದರು.       ತುಮಕೂರು ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ಹಿತರಕ್ಷಣಾ ಹಾಗೂ ಕುಂದುಕೊರತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.       ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿರುವ ಪರಿಶಿಷ್ಟ ಜಾತಿ/ವರ್ಗದ ಜನಾಂದವರಿಗೆ ಸ್ಮಶಾನ ಭೂಮಿ ಒದಗಿಸುವುದು ಮೊದಲ ಆದ್ಯತೆ. ಸುಮಾರು 75 ಗ್ರಾಮಗಳಲ್ಲಿ ಸ್ಮಶಾನ ಭೂಮಿಗಳಿಲ್ಲ. ಭೂ-ಲಭ್ಯತೆ ಪಟ್ಟಿ ಆಧಾರದ ಮೇಲೆ ಭೂಮಿ ನೀಡಲಾಗುವುದು. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದಲ್ಲಿ ಖಾಸಗೀ ಜಮೀನನ್ನು ಖರೀದಿ ಮಾಡಿ ಜಾಗ ನೀಡಲಾಗುವುದು ಎಂದು ಅವರು ತಿಳಿಸಿದರು.       ಗೂಳೂರು, ಹೆಗ್ಗೆರೆ, ಹರಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ…

ಮುಂದೆ ಓದಿ...