ತುಮಕೂರು: ನಾಳೆ ನಗರಕ್ಕೆ ಸಿಎಂ ಆಗಮನ : ವಾಹನಗಳಿಗೆ ಅಮಾನಿಕೆರೆ ಬಳಿ ಪಾರ್ಕಿಂಗ್ ವ್ಯವಸ್ಥೆ!

ತುಮಕೂರು:      ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ನವೆಂಬರ್ 14 ರಂದು ಮಧ್ಯಾಹ್ನ 12 ಗಂಟೆಗೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ 66ನೇ ಅಖಿಲ ಭಾರತ ಸಹಕಾರಿ ಸಪ್ತಾಹ 2019ರ ಸಮಾರಂಭಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ವಾಹನಗಳಿಗೆ ನಗರದ ಅಮಾನಿಕೆರೆ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.      ಗುಬ್ಬಿ, ಶಿರಾ, ಕುಣಿಗಲ್, ಕೊರಟಗೆರೆ ತಾಲ್ಲೂಕಿನಿಂದ ಕಾರ್ಯಕ್ರಮಕ್ಕೆ ಆಗಮಿಸುವ ಬಸ್ಸುಗಳು ಹಾಗೂ ಇತರೆ ವಾಹನಗಳು ಸಾರ್ವಜನಿಕರನ್ನು ಜೂನಿಯರ್ ಕಾಲೇಜು ಮೈದಾನದಲ್ಲಿ ಇಳಿಸಿ ನಂತರ ಶಂಕರಮಠ-ಎಸ್.ಎಸ್.ಸರ್ಕಲ್-ಕೋತಿತೋಪು ಮಾರ್ಗವಾಗಿ ಹಾಗೂ ಬೆಂಗಳೂರು ಮಾರ್ಗದಿಂದ ಆಗಮಿಸುವ ಬಸ್ಸುಗಳು ಸಾರ್ವಜನಿಕರನ್ನು ಶಂಕರಮಠದ ಬಳಿ ಇಳಿಸಿ ನಂತರ ಟೌನ್‍ಹಾಲ್-ಅಶೋಕ ರಸ್ತೆ-ಕೋಡಿ ಸರ್ಕಲ್ ಮೂಲಕ ಅಮಾನಿಕೆರೆ ಬಳಿ ಪಾರ್ಕಿಂಗ್ ಮಾಡಬೇಕು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಮುಂದೆ ಓದಿ...

ವಕೀಲರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ!!

ತುಮಕೂರು:       ಬೆಂಗಳೂರು ನಗರ, ಜ್ಞಾನ ಭಾರತಿ ಪೊಲೀಸ್ ಠಾಣಾ ಪಿಎಸ್‍ಐ ಬವರಾಜ್ ಅವರಿಂದ ವಕೀಲರಾದ ನವೀನ್ ಕುಮಾರ್ ಅವರ ಮೇಲೆ ಹಲ್ಲೆ ಮಾಡಿ ದೌರ್ಜನ್ಯವೆಸಗಿರುವುದನ್ನು ಖಂಡಿಸಿ ತುಮಕೂರು ಜಿಲ್ಲಾ ವಕೀಲರ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪಿಎಸ್‍ಐ ಬಸವರಾಜು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಲಾಯಿತು.       ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಕಕ್ಷಿದಾರರ ಜೊತೆ ದೂರು ನೀಡಲು ಹೋದಾಗ ಪಿಎಸ್‍ಐ ಬಸವರಾಜು ಅವರು ವಕೀಲರಾದ ನವೀನ್ ಕುಮಾರ್ ಅವರೊಂದಿಗೆ ಅನುಚಿತವಾಗಿ ವರ್ತಿಸಿ ಹಿಗ್ಗಾಮುಗ್ಗ ಥಳಿಸಿ ಅವಾಶ್ಚ್ಯ ಶಬ್ದಗಳನ್ನು ಬಳಸಿ ನಿಂದಿಸಿ ದೈಹಿಕ ಹಲ್ಲೆ ಮಾಡಿರುತ್ತಾರೆ. ಸದರಿ ಘಟನೆಯನ್ನು ನಮ್ಮ ತುಮಕೂರು ಜಿಲ್ಲಾ ವಕೀಲರ ಸಂಘವು ತೀವ್ರವಾಗಿ ಖಂಡಿಸುತ್ತದೆ.       ಸದರಿ ವಿಚಾರವಾಗಿ ನ.12 ರಂದು ತುಮಕೂರಿನ ಜಿಲ್ಲಾ ವಕೀಲರ ಸಂಘದ ಕಾರ್ಯಕಾರಿ…

ಮುಂದೆ ಓದಿ...

ಕೇಂದ್ರ ಸರ್ಕಾರದ ಅವ್ಯವಸ್ಥಿತ ಆರ್ಥಿಕ ನೀತಿ ವಿರೋಧಿಸಿ ಕಾಂಗ್ರೆಸ್‍ನಿಂದ ಪ್ರತಿಭಟನೆ!!

ತುಮಕೂರು:       ದೇಶದಲ್ಲಿ ಆರ್ಥಿಕತೆ ಕುಸಿತಕ್ಕೆ ಹಾಗೂ ಉದ್ಯೋಗ ಕುಸಿತವಾಗಿರುವುದಕ್ಕೆ ಕೇಂದ್ರ ಸರ್ಕಾರದ ದೂರದೃಷ್ಟಿ ಇಲ್ಲದ ನೀತಿಗಳು ಹಾಗೂ ಜನವಿರೋಧಿ ನೀತಿಗಳೇ ಕಾರಣ, ದೇಶದಲ್ಲಿ ಆರ್ಥಿಕತೆ ಕುಸಿಯಲು ಕಾರಣವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಒತ್ತಾಯಿಸಿದರು.       ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕೇಂದ್ರ ಸರ್ಕಾರದ ವೈಫಲ್ಯ ಹಾಗೂ ಜನವಿರೋಧಿ ನೀತಿಗಳನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, 2014ರಲ್ಲಿ ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ ಭರವಸೆಗಳನ್ನು ಈಡೇರಿಸ ಮೋದಿ ಸರ್ಕಾರ, 2019ರ ಲೋಕಸಭಾ ಚುನಾವಣೆಯಲ್ಲಿ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಅಧಿಕಾರವನ್ನು ಗಿಟ್ಟಿಸಿಕೊಂಡಿದೆ, ದೇಶದಲ್ಲಿ ನಿರುದ್ಯೋಗ ನಿವಾರಣೆ, ಕೃಷಿ, ಶಿಕ್ಷಣ, ಕೈಗಾರಿಕೆಯ ವಿಚಾರಗಳಲ್ಲಿ ದೇಶ ನಿರೀಕ್ಷಿತ ಪ್ರಗತಿ ಸಾಧಿಸಲು ವಿಫಲವಾಗಿದೆ ಎಂದು ಆರೋಪಿಸಿದರು.       ಮೋದಿ…

ಮುಂದೆ ಓದಿ...