ತುಮಕೂರನ್ನು ಅಪಘಾತರಹಿತ ಜಿಲ್ಲೆಯಾಗಿಸುವುದೇ ನಮ್ಮ ಉದ್ದೇಶ – ಡಿಸಿ

ತುಮಕೂರು :       ತುಮಕೂರು ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ನಡೆಯದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು ತಿಳಿಸಿದರು.       ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಇದಕ್ಕೆ ಸರ್ವೋಚ್ಚ ನ್ಯಾಯಾಲಯವು ಕೂಡ ಪ್ರಶಂಸೆ ವ್ಯಕ್ತಪಡಿಸಿದೆ. ತಮಿಳುನಾಡಿನಲ್ಲಿ ಕೈಗೊಂಡಿರುವ ಮಾದರಿಯಂತೆ ಜಿಲ್ಲೆಯಲ್ಲಿ ಅಪಘಾತ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದರು.       ಜಿಲ್ಲೆಯಲ್ಲಿ ಅಪಘಾತ ನಿಯಂತ್ರಿಸುವುದೇ ನಮ್ಮ ಉದ್ದೇಶ. ಆದ್ದರಿಂದ ರಸ್ತೆ ಸುರಕ್ಷತಾ ಸಮಿತಿಯಲ್ಲಿರುವ ಇಲಾಖೆಗಳು ರಸ್ತೆಯ ಸುರಕ್ಷತೆ ಬಗ್ಗೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಮುಂದಿನ ಸಭೆಯಲ್ಲಿ ಅನುಪಾಲನಾ ವರದಿ ಸಲ್ಲಿಸುವಂತೆ ಅವರು ಸೂಚಿಸಿದರು.ಮಹಾಲೇಖಪಾಲರು ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಲೆಕ್ಕಪರಿಶೋಧನೆಯನ್ನು ಕೈಗೊಂಡಿದ್ದು, ಕೆಶಿಪ್, ಪಿಡಬ್ಲ್ಯೂಡಿ, ಆರ್‍ಟಿಒ, ಪೊಲೀಸ್, ರಾಷ್ಟ್ರೀಯ…

ಮುಂದೆ ಓದಿ...

ಜಿ.ಎಸ್.ಬಿ. ಗೆಲುವು ನನ್ನ ಸೋಲನ್ನು ಮರೆಸಿತು – ಕೆ.ಎನ್.ರಾಜಣ್ಣ

ಮಧುಗಿರಿ :       ಲೋಕಸಭಾ ಚುನಾವಣೆಯಲ್ಲಿ ಜಿ.ಎಸ್.ಬಿ.ಗೆಲುವು ನನ್ನ ಸೋಲನ್ನು ಮರೆಸಿ ಮತ್ತೆ ಜನ ಸೇವೆ ಮಾಡಲು ಪುಷ್ಟಿ ನೀಡಿತು. ಈ ಬಾರಿ ಕ್ಷೇತ್ರಕ್ಕೆ ಯಾವ ಪಕ್ಷದಿಂದ ಬರುತ್ತೇನೆ ಎಂದು ತೀರ್ಮಾನಿಸಿಲ್ಲ. ನಾನು ಯಾವುದೇ ಪಕ್ಷದಿಂದ ನಿಂತರೂ ನಿಮ್ಮ ಸಹಕಾರ ಹಾಗೂ ಆಶಿರ್ವಾದವೇ ಮುಖ್ಯ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.       ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನೂತನ ಟಿಡಿಸಿಸಿ ಬ್ಯಾಂಕಿನ 31ನೇ ಶಾಖೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಕಡೆ ಅಭಿಮಾನಿಗಳ ಅಭಿಮಾನ ಇನ್ನೊಂದು ಕಡೆ ಮುಖಂಡರ ಒತ್ತಾಯ ಮಧುಗಿರಿಗೆ ಬರಬೇಕೆಂದು ನನ್ನ ಮೆಚ್ಚಿನ ಜನತೆ ಇರುವ ಈ ಕ್ಷೇತ್ರಕ್ಕೆ ಬರುತ್ತೇನೆ. ಆದರೆ ಕಾಂಗ್ರೆಸ್ಸಾ , ಬಿಜೆಪಿನಾ, ಬಿಎಸ್‍ಪಿ ನಾ ಅಥವಾ ಜೆಡಿಎಸ್ ಈ…

ಮುಂದೆ ಓದಿ...