ಪಿ.ಎಂ.ಎಸ್.ವೈ.ಎಂ. ಯೋಜನೆಯಡಿ ಫಲಾನುಭವಿಗಳಾಗಲು ನೋಂದಾಯಿಸಿಕೊಳ್ಳಿ – ಡಿಸಿ

ತುಮಕೂರು :       ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿ.ಎಂ-ಎಸ್.ವೈ.ಎಂ) ಯೋಜನೆಯಡಿ ಫಲಾನುಭವಿಗಳಾಗಲು ಹತ್ತಿರದ ಕಾಮನ್ ಸರ್ವೀಸ್ ಸೆಂಟರ್ (ಸಿ.ಎಸ್.ಸಿ.) ಗಳಲ್ಲಿ ನೋಂದಾಯಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದರು.       ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿಂದು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿ.ಎಂ-ಎಸ್.ವೈ.ಎಂ) ಯೋಜನೆ, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಹಾಗೂ ಬಾಲಕಾರ್ಮಿಕ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ವಿರುದ್ಧ ಜನ ಜಾಗೃತಿ ಮೂಡಿಸುವ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.       ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಗೃಹ ಆಧಾರಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ಸಿದ್ಧಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಸ್ವಯಂ ಉದ್ಯೊಗಿಗಳು,…

ಮುಂದೆ ಓದಿ...

ಅಭಿವೃದ್ಧಿ ಕಾರ್ಯಗಳ ಮೂಲಕ ಟೀಕೆಗಳಿಗೆ ಉತ್ತರ-ಸಚಿವ ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ :       ನಾವು ನಮಗೋಸ್ಕರ ಬದುಕಿದಾಗ ಅದು ಶ್ರೇಷ್ಟವಲ್ಲ .ಸಮಾಜಕ್ಕಾಗಿ ಬದುಕಿದಾಗ ಮಾತ್ರಶ್ರೇಷ್ಟ ಎಂದು ಕಾನೂನು ಸಚಿವಜೆ.ಸಿ.ಮಾಧುಸ್ವಾಮಿ ನುಡಿದರು.        ತಾಲೂಕಿನ ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಸಹಕಾರಿ ಕ್ಷೇತ್ರದಲ್ಲಿ ಕುಪ್ಪೂರು ಪತ್ತಿನ ಸಹಕಾರಿ ಬ್ಯಾಂಕ್ ಎಲ್ಲಾ ರೀತಿಯಲ್ಲಿ ಒಳ್ಳೆಯ ಸೌಲಭ್ಯವನ್ನು ಪಡೆದಿದೆ.ಇಲ್ಲಿನ ಯುವಜನಾಂಗ ಸಮರ್ಥವಾಗಿ ಕೆಲಸ ಮಾಡಿ ಉತ್ತಮ ಸಾಧನೆ ಮಾಡಿದ್ದಾರೆ. ಅವಧಿ ಮುಗಿದ ಮೇಲೂ ಸಹ ದಾಖಲೆಗಳನ್ನು ಪಡೆದು ರೈತರ ಸಾಲಮನ್ನಾ ಮಾಡಿಸಿದ್ದೇನೆ ಎಂದರು.ತಾಲೂಕಿನಲ್ಲಿ ರೈತರಿಗೆ ಹೆಚ್ಚಿನ ಮುಂಗಡ ನೀಡಿರುವ ಪ್ರಥಮ ಬ್ಯಾಂಕ್ ಇದಾಗಿದೆ ಎಂದರು.       ಚುರುಕುಗೊಂಡ ತಾಲೂಕು ಆಡಳಿತಃತಾಲೂಕಿನ ರೈತರು ಕಂದಾಯ ದಾಖಲೆಗಳನ್ನು ಪಡೆಯಲು ಪರದಾಡುವುದನ್ನು ತಪ್ಪಿಸಲು,ಕಂದಾಯ ಅದಾಲತ್,ಪವತಿವಾರಸು ಖಾತೆ ಆಂದೋಲನ,ಕಂದಾಯ ಅದಾಲತ್,ಭೂ ದಾಖಲಾತಿ ತಿದ್ದುಪಡಿ,ಬಗರ್ ಹುಕುಂ ಪ್ರಕರಣಗಳ ಖಾತೆಗಳ…

ಮುಂದೆ ಓದಿ...