ತುಮಕೂರು : ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಘೋಷಣೆ

ತುಮಕೂರು :       ಯೂನಿಸೆಫ್ ವತಿಯಿಂದ ಹೈದರಾಬಾದ್‍ನಲ್ಲಿ 2019ರ ಡಿಸೆಂಬರ್ 18 ರಿಂದ 20ರವರೆಗೆ ದಕ್ಷಿಣ ಭಾರತ ರಾಜ್ಯ(ತೆಲಂಗಾಣ, ಕರ್ನಾಟಕ, ಆಂದ್ರಪ್ರದೇಶ)ಗಳಿಗಾಗಿ ಆಯೋಜಿಸಲಾಗಿದ್ದ 6ನೇ ವರ್ಷದ ನೀರು, ನೈರ್ಮಲ್ಯ ಮತ್ತು ಶುಚಿತ್ವ ಸಮಾವೇಶದಲ್ಲಿ ತುಮಕೂರು ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯದ ರಾಜ್ಯಪಾಲ ತಮಿಳ್‍ಸೇ ಸೌಂದರ್‍ರಾಜನ್ ಅವರು ಜಿಲ್ಲೆಯನ್ನು ಅಭಿನಂದಿಸಿ ಪ್ರಶಂಸನಾ ಪತ್ರವನ್ನು ನೀಡಿದ್ದಾರೆ.       ಸಮಾವೇಶದಲ್ಲಿ ಸ್ವಚ್ಛ ಭಾರತ ಮಿಷನ್(ಗ್ರಾ) ಜಿಲ್ಲಾ ನೋಡಲ್ ಅಧಿಕಾರಿಯಾದ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಬಸನಗೌಡ ಅವರು ಸ್ವೀಕರಿಸಿದ ಪ್ರಶಂಸನಾ ಪತ್ರವನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅವರಿಗೆ ಇಂದು ಹಸ್ತಾಂತರಿಸಿದರು.

ಮುಂದೆ ಓದಿ...

ರೈತರಿಂದ ರಾಷ್ಟ್ರಪತಿಗಳಿಗೆ ಮುಷ್ಕರದ ನೋಟೀಸ್!

ತುಮಕೂರು :      ಸುಮಾರು 200ಕ್ಕೂ ಹೆಚ್ಚಿನ ರೈತ ಸಂಘಟನೆಗಳನ್ನು ಒಳಗೊಂಡ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (AIKSCC) ನೇತೃತ್ವದಲ್ಲಿ ದೇಶದಾದ್ಯಂತ ಹೋರಾಟ ನಡೆಸಿ ಪಾರ್ಲಿಮೆಂಟ್ ಚಲೋ ನಂತರ ವಿಶೇಷ ಸಂಸತ್ ನಡೆಸಲು ಒತ್ತಾಯಿಸಿ, ಭಾರತೀಯ ರೈತರ ಪ್ರನಾಳಿಕೆಯನ್ನು ಅಂಗೀಕರಿಸಿ ರೈತರ ಋಣಮುಕ್ತ ಮಸೂದೆ-2018 ಮತ್ತು ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಮಸೂದೆ-2018ನ್ನು ಜಾರಿಗೊಳಿಸಲು ಒತ್ತಾಯಿಸಿ ನಡೆದ ಹೋರಾಟವನ್ನು ಕೇಂದ್ರ ಸರ್ಕಾರ ಪರಿಗಣಿಸದೇ ಇರುವುದನ್ನು ಖಂಡಿಸಿ ಜನವರಿ 3ರಂದು ರಾಷ್ಪ್ರಪತಿಗಳಿಗೆ ಮುಷ್ಕರದ ನೋಟೀಸ್ ನೀಡಿ ಈ ಬೇಡಿಕೆಗಳು ಈಡೇರದಿದ್ದಲ್ಲಿ ಜನವರಿ 8ರಂದು ದೇಶಾದ್ಯಂತ ಗ್ರಾಮೀಣಾ ಭಾರತ್ ಬಂದ್ ನಡೆಸಲಾಗುವುದು ಎಂದು ತೀರ್ಮಾನಿಸಲಾಗಿದೆ.        ಇಂದು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆದ ಸಭೆಯನ್ನುದ್ದೇಶಿಸಿ ಜಿಲ್ಲಾ ಸಂಚಾಲಕ ಸಿ.ಯತಿರಾಜು ಮಾತನಾಡಿ, ರೈತರ ಆತ್ಮಹತ್ಯೆಗಳು ಕರ್ನಾಟಕದಲ್ಲಿ ಹೆಚ್ಚಾಗಿದ್ದು ರೈತರು…

ಮುಂದೆ ಓದಿ...

ಸಿರಾಗೆ ಹೇಮಾವತಿ ನೀರು ಹರಿಸಲು ಒತ್ತಾಯ!

ತುಮಕೂರು :      ಸಿರಾ ತಾಲ್ಲೂಕಿನ ಮದಲೂರು ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ ಮುಖಂಡರು ಸಿರಾದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬೈಕ್ ರ್ಯಾಲಿ ನಡೆಸಿ ಪ್ರತಿಭಟಿಸಿದರು.       ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಿರಾ ತಾಲ್ಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಸ್.ಬಿ.ರಮೇಶ್ ಅವರು, ಸಿರಾ ತಾಲ್ಲೂಕಿಗೆ ಹಂಚಿಕೆಯಾಗಿರುವ ಹೇಮಾವತಿ ನೀರನ್ನು ಹರಿಸಲು ತಾರತಮ್ಯ ಮಾಡಲಾಗುತ್ತಿದ್ದು, ಮದಲೂರು ಕೆರೆಗೂ ನೀರು ಹಂಚಿಕೆಯಾಗಿದ್ದರು, ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಸಲ್ಲದ ನೆಪ ಹೇಳುತ್ತಾ, ಸಿರಾಗೆ ನೀರು ಹರಿಸುವುದಕ್ಕೆ ತಡೆ ಹಾಕಲಾಗಿದೆ ಎಂದು ಆರೋಪಿಸಿದರು.       ಕಳೆದ ನಲ್ವತ್ತು ದಿನಗಳಲ್ಲಿ ಹೇಮಾವತಿ ಹರಿಸುವಂತೆ ಒತ್ತಾಯಿಸಿ ಶಿರಾದಲ್ಲಿ ರೈತರು ಹೋರಾಟ ನಡೆಸುತ್ತಿದ್ದರು, ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಅವರತ್ತ ನೋಡಿಲ್ಲ, ಸಿರಾ ಏನಾದರೂ ಪಾಕಿಸ್ತಾನದಲ್ಲಿ ಇದೆಯೇ? ಇದೇ ಜಿಲ್ಲೆಯಲ್ಲಿರುವ ಸಿರಾಕ್ಕೆ ನೀರು ಹರಿಸಲು ರಾಜಕೀಯ ಮಾಡುತ್ತಿರುವುದಾದರೂ ಏತಕ್ಕೆ ಎಂದ…

ಮುಂದೆ ಓದಿ...