ರಾಕೇಶ್ ಸಿಂಗ್ ಅವರಿಗೆ ಅಧಿಕಾರಿಗಳಿಂದ ಮಾಹಿತಿ!!

ತುಮಕೂರು :       ಎತ್ತಿನಹೊಳೆ ಯೋಜನೆ ಹಾಗೂ ಹೇಮಾವತಿ ನಾಲೆಯ ಕುರಿತು ಜಿಲ್ಲೆಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಮಾಹಿತಿ ಪಡೆದರು.      ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಮಧ್ಯಾಹ್ನ ಎತ್ತಿನಹೊಳೆ ಹಾಗೂ ಹೇಮಾವತಿಯ ವಿಶೇಷ ಭೂಸ್ವಾದೀನ ಅಧಿಕಾರಿಗಳ ಸಭೆ ನಡೆಸಿದರು. ಜಿಲ್ಲೆಯಲ್ಲಿ ಎತ್ತಿನಹೊಳೆಗೆ ಅಗತ್ಯವಿರುವ ಜಮೀನು ಭೂಸ್ವಾದೀನಕ್ಕಾಗಿ ಅಗತ್ಯವಿರುವ ಹಣ ಹಾಗೂ ಬೈರಗೊಂಡ್ಲು ಜಲಾಶಯದ ಕುರಿತು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಹಾಗೂ ಭೂಸ್ವಾಧೀನಾಧಿಕಾರಿಯೊಂದಿಗೆ ಚರ್ಚಿಸಿದರು.       ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬಿಕ್ಕೆಗುಡ್ಡ-ಹಾಗಲವಾಡಿಯಲ್ಲಿ ಹೇಮಾವತಿ ನಾಲೆಯ ನಿರ್ಮಾಣಕ್ಕೆ ರೈತರು ನೇರವಾಗಿ ಜಮೀನು ನೀಡಲು ಮುಂದೆ ಬರುತ್ತಿದ್ದಾರೆ ಎಂದು ಹೇಮಾವತಿಯ ವಿಶೇಷ ಭೂಸ್ವಾಧೀನಾಧಿಕಾರಿ ಯಶೋಧ ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ತಿಳಿಸಿದರು. ಸಭೆಯಲ್ಲಿ ಎತ್ತಿನ ಹೊಳೆ…

ಮುಂದೆ ಓದಿ...

ತುಮಕೂರು : ಪೌರತ್ವ ಕಾಯ್ದೆ ಜಾಗೃತಿ ಜಾಥಾ!

ತುಮಕೂರು :      ಪೌರತ್ವ ಕಾಯ್ದೆ ಕುರಿತು ಜಾಗೃತಿ ಮೂಡಿಸಲೆಂದು ರಾಷ್ಟ್ರೀಯ ನಾಗರಿಕ ವೇದಿಕೆಯ ತುಮಕೂರು ಜಿಲ್ಲಾ ಘಟಕವು ನಗರದಲ್ಲಿ ಮಂಗಳವಾರ ಜಾಥಾ ನಡೆಸಿತು.       ನಗರದ ಬಿ.ಎಚ್.ರಸ್ತೆಯಿಂದ ಆರಂಭವಾದ ಜಾಥಾ ಈಗ ಎಂ.ಜಿ.ರಸ್ತೆ, ಗುಂಚಿ ಚೌಕದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಶಾಸಕ ಜಿ.ಬಿ.ಜ್ಯೋತಿಗಣೇಶ್ ನಡೆಸುತ್ತಿರುವ ಚನ್ನಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಬಸ್‍ನಿಂದ ಇಳಿದು ಜಾಥಾದಲ್ಲಿ ಹೆಜ್ಜೆ ಹಾಕಿದರು. ಪುರಭವನದ ಪಕ್ಕದಲ್ಲೆ ಇರುವ ಸಿದ್ಧಗಂಗಾ ಪಿಯು ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡರು.      ಕಾರ್ಯಕರ್ತರ ಕೈಯಲ್ಲಿ ರಾಷ್ಟ್ರಧ್ವಜಗಳು, ಓಂ ಚಿಹ್ನೆಯುಳ್ಳ ತ್ರಿಕೋನಾಕಾರದ ಕೇಸರಿ ಬಣ್ಣದ ಧ್ವಜಗಳು ರಾರಾಜಿಸುತ್ತಿದ್ದವು. ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎಂಬ ಘೋಷಣೆಗಳು ಮೊಳಗಿದವು.      ಜಿಲ್ಲೆಯ ವಿವಿಧ ತಾಲ್ಲೂಕು ಮತ್ತು ತುಮಕೂರು ನಗರದ ವಿವಿಧ ಪ್ರದೇಶಗಳಿಂದ ಬಂದಿರುವ…

ಮುಂದೆ ಓದಿ...