ಸಿದ್ಧಗಂಗಾ ಶ್ರೀಗಳ ಗದ್ದುಗೆ ದರ್ಶನ ಪಡೆದ ಈಶ್ವರ ಖಂಡ್ರೆ

ತುಮಕೂರು:       ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಅವರು 57ನೇ ಹುಟ್ಟು ಹಬ್ಬದ ಅಂಗವಾಗಿ ಬುಧವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಪಡೆದರು.       ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ಧಿಕ ಶುಭಾಶಯಗಳನ್ನು ಕೋರುತ್ತೇನೆ. ಇಂದು ನಾನು ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಾಡುವ ದೇವರು ತ್ರಿವಿಧ ದಾಸೋಹಿಗಳಾದ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಮಾಡಿದ್ದೇನೆ. ಲಿಂ.ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ. ಅವರ ಆಶೀರ್ವಾದ, ಬಸವಣ್ಣನವರ ಆಶೀರ್ವಾದಿಂದ ನಮ್ಮ ರಾಜ್ಯ, ದೇಶದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲಸಿದೆ. ಸಾಮಾಜಿಕ ನ್ಯಾಯ ಪ್ರತಿಯೊಬ್ಬರಿಗೂ ಸಿಗಲಿ ಎಂದು ಆಶಿಸುತ್ತೇನೆ ಎಂದರು.       ಕೆಪಿಸಿಸಿ ಅಧ್ಯಕ್ಷ…

ಮುಂದೆ ಓದಿ...

ಸಿಎಎ, ಎನ್‍ಆರ್‍ಸಿ ವಿರುದ್ಧ ಬೃಹತ್ ಸಮಾವೇಶ!!

ತುಮಕೂರು :       ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ನಡೆಯುತ್ತಿದ್ದು ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಜನ ಬೀದಿಗೆ ಇಳಿದಿದ್ದಾರೆ. ಜನವಿರೋಧಿ ಸಿಎಎ, ಎನ್‍ಅರ್‍ಸಿ ಮತ್ತು ಎನ್‍ಪಿಆರ್‍ಗಳನ್ನು ವಾಪಸ್ ಪಡೆಯುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಜನವಾದಿ ಮಹಿಳಾ ಸಂಘಟನೆಯ ನಾಯಕಿ ಕೆ.ಎಸ್.ವಿಮಲ ಹೇಳಿದ್ದಾರೆ.       ತುಮಕೂರು ನಗರದ ಟೌನ್‍ಹಾಲ್‍ನಲ್ಲಿ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದಿಂದ ಸಿಎಎ, ಎನ್‍ಆರ್ಸಿ ಮತ್ತು ಎನ್‍ಪಿಆರ್ ವಿರೋಧಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಜನರಿಗೆ ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್‍ನ ಎಬಿಸಿಡಿ ಕಲಿಸಲು ಹೊರಟಿದೆ, ನಾವು ಕೇಂದ್ರ ಸರ್ಕಾರಕ್ಕೆ ಎಕ್ಸ್-ವೈ ಕಲಿಸಬೇಕಾದ ತುರ್ತು ಅಗತ್ಯವಿದೆ ಎಂದು ತಿಳಿಸಿದರು.ನಮ್ಮ ಸಂವಿಧಾನವನ್ನು ಭಾರತೀಯರಾದ ನಾವು ಒಪ್ಪಕೊಂಡಿದ್ದು ನಮಗೆ ನಾವೇ ಸಮರ್ಪಿಸಿಕೊಂಡಿದ್ದೇವೆ. ಜಾತಿ, ಧರ್ಮ, ಲಿಂಗ, ಭಾಷೆ,…

ಮುಂದೆ ಓದಿ...

ಗ್ರಾ.ಪಂ.ವಿರುದ್ದ ಆಕ್ರೋಶ : ಅಧಿಕಾರಿಗಳಿಗೆ ದಿಗ್ಬಂಧನ!!

ಗುಬ್ಬಿ:       ಬಿದರೆ ಗ್ರಾಮಕ್ಕೆ ನೀರು ಒದಗಿಸುವ ಎರಡು ಬೋರ್‍ವೆಲ್‍ಗಳು ಇರುವ ಜಮೀನು ಒಡೆತನದ ವಿವಾದದಿಂದ ಇಡೀ ಗ್ರಾಮಕ್ಕೆ ಕುಡಿಯುವ ನೀರು ಏಕಾಏಕಿ ನಿಲ್ಲಿಸಿದ ಗ್ರಾಮ ಪಂಚಾಯಿತಿ ವಿರುದ್ದ ಆಕ್ರೋಶ ಹೊರಹಾಕಿದ ನೂರಾರು ಗ್ರಾಮಸ್ಥರು ಖಾಲಿ ಕೊಡ ಪ್ರದರ್ಶನ ಪ್ರತಿಭಟನೆ ಜತೆಗೆ ಕಚೇರಿ ಮುಚ್ಚಿ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ ಘಟನೆ ಸೋಮವಾರ ನಡೆಯಿತು.       ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನವಾದ ಬಿದರೆ ಗ್ರಾಮ ದೊಡ್ಡ ಗ್ರಾಮವಾಗಿದೆ. ಇಲ್ಲಿನ ಸಾವಿರಕ್ಕೂ ಅಧಿಕ ಮನೆಗಳಿಗೆ ನೀರು ಒದಗಿಸುವ ಎರಡು ಬೋರ್‍ವೆಲ್‍ಗಳು ಇರುವ ಜಮೀನು ಸರ್ವೆ ನಂ.114 ರಲ್ಲಿನ 20 ಗುಂಟೆಯು ನಮ್ಮದು ಎನ್ನುತ್ತಿರುವ ಗ್ರಾಮದ ರಘುನಾಥ ಅವರು ಇಲ್ಲಿನ ಬೋರ್‍ವೆಲ್‍ಗಳಲ್ಲಿ ಪಂಪ್‍ಪೋಟಾರ್ ಎತ್ತಿಕೊಳ್ಳಲು ಸೂಚಿಸಿರುತ್ತಾರೆ ಎಂದು ಪಂಚಾಯಿತಿ ಈ ಹಿಂದೆ ಸಭೆ ನಡೆಸಿ ಈ ಜಮೀನು ರಘುನಾಥ ಅವರ ಪೂರ್ವಿಕರು ದಾನವಾಗಿ ನೀಡಿದ್ದ ಸ್ಥಳವಾಗಿದೆ.…

ಮುಂದೆ ಓದಿ...