ತುಮಕೂರಿನಲ್ಲಿ ಕರೋನ ವೈರಸ್ ಭೀತಿ – ಡಿಹೆಚ್‍ಓ ಸ್ಪಷ್ಟನೆ!!

ತುಮಕೂರು :       ಜಿಲ್ಲೆಯಲ್ಲಿ ಈವರೆಗೂ ಯಾವುದೇ ನೋವಲ್ ಕರೋನಾ ವೈರಸ್ ಪ್ರಕರಣಗಳು ಧೃಢಪಟ್ಟಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಬಿ.ಆರ್. ಚಂದ್ರಿಕಾ ಸ್ಪಷ್ಟನೆ ನೀಡಿದ್ದಾರೆ.       ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಚೀನಾ ದೇಶದಿಂದ ಬಂದಿದ್ದ ಯುವಕನಿಗೆ ಗಂಟಲು ದ್ರಾವ ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‍ಐವಿ)ಗೆ ಕಳುಹಿಸಲಾಗಿದ್ದು, ಸದರಿ ರಕ್ತದ ಮಾದರಿಯ ಫಲಿತಾಂಶದಲ್ಲಿ ಕರೋನಾ ವೈರಸ್ ಕಂಡುಬಂದಿರುವುದಿಲ್ಲ ಎಂದು ಬೆಂಗಳೂರಿನ ಎನ್‍ಐವಿ ಧೃಢಪಡಿಸಿದೆ. ಈ ಯುವಕನು ಜಿಲ್ಲಾ ಆಸ್ಪತ್ರೆಯಲ್ಲಾಗಲೀ ಖಾಸಗಿ ಆಸ್ಪತ್ರೆಗಳಲ್ಲಾಗಲೀ ದಾಖಾಲಾಗಿರುವುದಿಲ್ಲ.       ಜಿಲ್ಲೆಯಲ್ಲಿ ಬೇರೆ ಯಾವುದೇ ಹೊಸ ಶಂಕಿತ ಕರೋನಾ ವೈರಸ್ ರೋಗಿಗಳು ಇರುವುದಿಲ್ಲ ಹಾಗೂ ಯಾವುದೇ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿರುವುದಿಲ್ಲ. ಸಾರ್ವಜನಿಕರು ಅನಾವಶ್ಯಕವಾಗಿ ಭಯ ಪಡುವ ಹಾಗೂ ಊಹಾಪೋಹಗಳಿಗೆ ಆತಂಕಪಡುವ…

ಮುಂದೆ ಓದಿ...

ಹುಳಿಯಾರು : ಜಮೀನಿನಲ್ಲಿ ಆಕಸ್ಮಿಕ ಬೆಂಕಿ

ಹುಳಿಯಾರು :        ಹುಳಿಯಾರು ಸಮೀಪದ ಮತಿಘಟ್ಟದ ಪೆಟ್ರೋಲ್ ಬಂಕ್ ಬಳಿ ನೂರಾರು ಎಕರೆ ಜಮೀನಲ್ಲಿ ಬೆಂಕಿ ತಗುಲಿದ ಘಟನೆ ಮಂಗಳವಾರ ನಡೆದಿದೆ.ಪೆಟ್ರೋಲ್ ಬಂಕ್ ಹತ್ತಿರ ಇದಕಿದ್ದ ಹಾಗೆ ಜಮೀನಿನಲ್ಲಿ ರಾಗಿ ಕಟಾವು ಮಾಡಿ ಬಿಟ್ಟಿದ್ದ ರಾಗಿ ಕೂಳೆಗೆ ಬೆಂಕಿ ತಗುಲಿದೆ. ಮೊದಲೆ ಬಿಸಿಲಿಗೆ ರಾಗಿ ಕೂಳೆ ಒಣಗಿದ್ದ ಕ್ಷಣಾರ್ಧದಲ್ಲಿ ನೂರಾರು ಎಕರೆ ಜಮೀನನ್ನು ಆವರಿಸಿಕೊಂಡಿದೆ.       ಬೈಕ್‍ಗೆ ಪೆಟ್ರೋಲ್ ಹಾಕಿಸಲು ಬಂದಿದ್ದ ಬೈಕ ಸವಾರರೊಬ್ಬರು ಇದನ್ನು ಗಮನಿಸಿ ಹಂದನಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪರಿಣಾಮ ಪಿಎಸ್‍ಐ ಶಿವಕುಮಾರ್ ಸ್ಥಳಕೆ ಆಗಮಿಸಿ ಅಗ್ನಿಶಾಮಕ ದಳದವರನ್ನು ಕರೆಸಿ ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿ ಮುಂದಿನ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ. Share

ಮುಂದೆ ಓದಿ...

ಅಧಿಕಾರಿಗಳ ಎದುರೇ ಆತ್ನಹತ್ಯೆಗೆ ಯತ್ನಿಸಿದ ಕೆಎಸ್‍ಆರ್ಟಿಸಿ ಚಾಲಕ!!

ತುಮಕೂರು :       ಅಧಿಕಾರಿಗಳ ಕಿರುಕುಳಕ್ಕೆ ನೊಂದ ಕೆಎಸ್‍ಆರ್ಟಿಸಿ ಚಾಲಕ ಅಧಿಕಾರಿಗಳೆದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಪ್ರಕರಣ ನಗರದ ಕೆಎಸ್‍ಆರ್ಟಿಸಿ ಕಚೇರಿಯಲ್ಲಿ ನಡೆದಿದೆ. ವಿಷ ಸೇವಿಸಿದ ಚಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.       ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲಕ ಮಹಮದ್ ಕಮ್ಮಾರ್, ವಿಷ ಸೇವನೆಗೆ ಮೊದಲು ಅಧಿಕಾರಿಗಳ ಕಿರುಕುಳದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.ಗುಬ್ಬಿ ತಾಲ್ಲೂಕು ಕೆ.ಜಿ.ಟೆಂಪಲ್ ಗ್ರಾಮದ ಮಹಮದ್ ಕಮ್ಮಾರ್ ಕೆಎಸ್‍ಆರ್ಟಿಸಿಯಲ್ಲಿ ಚಾಲಕರಾಗಿ ಸೇವೆಯಲ್ಲಿದ್ದಾರೆ. ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ರಜೆ ಕೋರಿದ್ದಕ್ಕೆ ಅಧಿಕಾರಿಗಳು ರಜೆ ನಿರಾಕರಿಸಿದ್ದರು ಎನ್ನಲಾಗಿದೆ.       ಇದರ ಜೊತೆ ಅಧಿಕಾರಿಗಳ ಕಿರುಕುಳ ನೀಡುತ್ತಿದ್ದರೆಂದು ಆರೋಪ ಮಾಡಿ ಪತ್ರದಲ್ಲಿ ವಿವರಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ಕೆಎಸ್‍ಆರ್ಟಿಸಿ ಕಚೇರಿಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ಎದುರೇ ಮಹಮದ್‍ಕಮ್ಮಾರ್…

ಮುಂದೆ ಓದಿ...