ತುಮಕೂರು : ಸಿದ್ದಗಂಗಾ ಮಠಕ್ಕೆ ನೂತನ ಸಚಿವರ ಭೇಟಿ!!

ತುಮಕೂರು:        ಚುನಾವಣೆ ಮುಂಚೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊಟ್ಟಿದ್ದ ಮಾತಿನಂತೆ 10 ಮಂದಿಯನ್ನು ಮೊದಲನೇ ಹಂತದಲ್ಲಿ ಸಚಿವರನ್ನಾಗಿ ಮಾಡಿದ್ದಾರೆ, ಉಳಿದವರನ್ನು ಮುಂದಿನ ದಿನಗಳಲ್ಲಿ ಸಚಿವರನ್ನಾಗಿ ಮಾಡುತ್ತಾರೆ ಎಂದು ನೂತನ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.        ಪ್ರಮಾಣವಚನ ಸ್ವೀಕರಿಸಿದ ನಂತರ ಇಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆರ್ಶೀವಾದ ಪಡೆದ ಅವರು, ಪ್ರತಿ ಸಂದರ್ಭದಲ್ಲಿಯೂ ಶ್ರೀಗಳ ಆರ್ಶೀವಾದ ಪಡೆಯುತ್ತಿದ್ದೇನೆ, ಚುನಾವಣೆ ಮುಂಚೆಯೂ ಮಠಕ್ಕೆ ಆಗಮಿಸಿ, ಶ್ರೀಗಳ ಆರ್ಶೀವಾದವನ್ನು ಪಡೆದಿದ್ದೇ, ಈಗ ಸಚಿವನಾಗಿ ಬಂದು ಶ್ರೀಗಳ ಆರ್ಶೀವಾದವನ್ನು ಪಡೆದಿದ್ದೇನೆ ಎಂದು ಹೇಳಿದರು.        ಬಿಜೆಪಿ ಸರ್ಕಾರ ರಚನೆಯಾಗಲು ಸಹಕರಿಸಿದವರಿಗೆ ಸಿಎಂ ನೀಡಿದ್ದ ಮಾತಿನಂತೆ ನಡೆದುಕೊಂಡಿದ್ದಾರೆ, 17 ಮಂದಿಯಲ್ಲಿ 10 ಮಂದಿಗೆ ಈಗ ಸಚಿವ ಸ್ಥಾನ ಸಿಕ್ಕಿದ್ದು, ಉಳಿದವರಿಗೆ ಮೇ-ಜೂನ್‍ಗೆ ಸಚಿವ ಸ್ಥಾನ ದೊರಕಲಿದೆ, ಸಚಿವ ಸ್ಥಾನ ತಡವಾಗಲು ಹಲವಾರು…

ಮುಂದೆ ಓದಿ...

6 ತಿಂಗಳಲ್ಲಿ ತುಮಕೂರಿಗೆ ನಿರಂತರ ನೀರು ಪೂರೈಕೆ-ಶಾಸಕ

ತುಮಕೂರು:       ನಗರಕ್ಕೆ ದಿನದ 24 ಗಂಟೆಗಳೂ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಕಾಮಗಾರಿ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ನೀರು ಶುದ್ಧೀಕರಣ ಘಟಕದಿಂದ ನೇರವಾಗಿ ನೀರು ಪೂರೈಸಲಾಗುವುದು ಎಂದು ಶಾಸಕ ಬಿ.ಜಿ.ಜ್ಯೋತಿಗಣೇಶ್ ತಿಳಿಸಿದರು.       ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  196 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಈಗಾಗಲೇ 2 ವಾರ್ಡ್‍ಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಲಾಗಿದೆ. ಇದರಿಂದ ಶೇ 90ರಷ್ಟು ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ’ ಎಂದರು.       44 ಓವರ್‍ಹೆಡ್ ಟ್ಯಾಂಕ್‍ಗಳನ್ನು ತುಂಬಿಸಿ ಅಲ್ಲಿಂದ ವಾಲ್‍ಮೆನ್‍ಗಳ ಸಹಾಯವಿಲ್ಲದೆ ನೀರು ಹರಿಸಲಾಗುವುದು. ಈ ಯೋಜನೆಯಿಂದ ಮುಂದಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಅಗತ್ಯ ಇಲ್ಲದಂತೆ ಆಗುತ್ತದೆ. ಪಾಲಿಕೆ ಎಂಜಿನಿಯರ್‍ಗಳು ಈ ಬಗ್ಗೆ ನಿಗಾವಹಿಸಬೇಕು ಎಂದರು.       ಸ್ಮಾರ್ಟ್‍ಸಿಟಿಯಿಂದ ಜೂನಿಯರ್ ಕಾಲೇಜು ಮೈದಾನದಲ್ಲಿ ಕ್ರೀಡಾ ಸಂಕೀರ್ಣ,…

ಮುಂದೆ ಓದಿ...

ವಿದ್ಯಾರ್ಥಿಗಳ ಫಲಿತಾಂಶ ಶೇ. 90ರಷ್ಟು ಹೆಚ್ಚಿಸಲು ಆಯುಕ್ತರ ಸೂಚನೆ

ತುಮಕೂರು:       ತುಮಕೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಎಸ್.ಎಸ್.ಎಲ್.ಸಿ./ಪಿ.ಯುಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರ, ಭಾನುವಾರ ವಿಶೇಷ ಭೋದನಾ ತರಗತಿಗಳನ್ನು ನಡೆಸಿ ಶೇ. 90ರಷ್ಟು ಫಲಿತಾಂಶ ಹೆಚ್ಚಿಸಲು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾದ ಆರ್.ಎಸ್. ಪೆದ್ದಪ್ಪಯ್ಯ ತಿಳಿಸಿದರು.       ತುಮಕೂರಿನ ಬಾಲಭವನದಲ್ಲಿಂದು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಸಮಾಜಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳು ಅನ್ನ, ವಸತಿ ನೀಡುವ ಗಂಜಿಕೇಂದ್ರಗಳಾಗದೇ ವಿದ್ಯಾರ್ಥಿಗಳಿಗೆ ಕಠಿಣ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ವಿಷಯಗಳ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಬೇತಿ ಕೇಂದ್ರಗಳನ್ನು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಆಯಾ ವಿದ್ಯಾರ್ಥಿನಿಲಯಗಳ ಮೇಲ್ವೀಚಾರಕರ ನೇತೃತ್ವದಲ್ಲಿ ನಡೆಸಿ ಪ್ರಸಕ್ತ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ…

ಮುಂದೆ ಓದಿ...