ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ತುಮಕೂರು :       ಮಹಾತ್ಮ ಗಾಂಧಿ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಮೇಯರ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ನಗರದ ಭದ್ರಮ್ಮ ಛತ್ರದ ಸರ್ಕಲ್‍ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.        ಮೇಯರ್ ಫರಿದಾ ಬೇಗಂ ಮಾತನಾಡಿ, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಸಂಸದ ಅನಂತ್‍ಕುಮಾರ್ ಹೆಗಡೆಯವರು ದೇಶಕ್ಕೆ ಸ್ವತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿ ಬಗ್ಗೆ ಅವಹೇಳನವಾಗಿದೆ ಹೇಳಿಕೆ ನೀಡಿರುವುದು ತಪ್ಪು. ಅನಂತ್ ಕುಮಾರ್ ಹೆಗಡೆ ಕೇವಲ ನಾಲ್ಕು ವರ್ಷಕ್ಕೆ ಮನೆಗೆ ಹೋಗುವವರು ಆದರೆ ಮಹಾತ್ಮ ಗಾಂಧಿ ಈ ಭೂಮಂಡಲ ಇರುವವರೆಗೂ ಅಜರಾಮರವಾಗಿರುವವರು. ಅವರ ವಿರುದ್ಧ ಹೇಳಿಕೆ ಮಾತನಾಡುವುದು ಖಂಡನೀಯ ಎಂದರು.       ಒಂದು ಪಕ್ಷ ಸಿಕ್ಕದೆ, ಸ್ಥಾನ ಸಿಕ್ಕದೆ ಎಂದು ಮನಸ್ಸಿಗೆ ಬಂದಂತೆ ಸಿಎಎ, ಎನ್‍ಆರ್ಸಿ ತಂದರೂ ನಮಗೆ ಭಯವಿಲ್ಲ. ನಾವೆಲ್ಲಾ ಭಾರತೀಯರು ಒಂದೇ,…

ಮುಂದೆ ಓದಿ...

ತುಮಕೂರು : ಶಿರಾಗೇಟ್ ಐಡಿಎಸ್‍ಎಂಟಿ ಲೇಔಟ್: ಕ್ರಮಕ್ಕೆ ತೀರ್ಮಾನ

ತುಮಕೂರು :       ನಗರದ ಶಿರಾಗೇಟ್‍ನ ಐ.ಡಿ.ಎಸ್.ಎಂ.ಟಿ. ಲೇಔಟ್‍ನಲ್ಲಿ ಆಗಿರುವ ಅಕ್ರಮಗಳ ಬಗ್ಗೆ ತುಮಕೂರು ಮಹಾನಗರ ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿಸಮಿತಿ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿದ್ದು, ಇವುಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಗಿದೆ. ಸಮಿತಿಯ ಹಿಂದಿನ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು (3 ನೇ ವಾರ್ಡ್-ಅರಳಿಮರದ ಪಾಳ್ಯ-ಜೆಡಿಎಸ್) ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಏರ್ಪಟ್ಟಿದ್ದ ಸಮಿತಿಯ ಸಭೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿದ್ದು, ಪ್ರತ್ಯೇಕ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.       ಐ.ಡಿ.ಎಸ್.ಎಂ.ಟಿ. ಯೋಜನೆಗಾಗಿ 108 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂಸ್ವಾಧೀನಗೊಂಡ ಜಮೀನಿನ ಮಾಲೀಕರಿಂದ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಖಾಲಿನಿವೇಶನಗಳನ್ನು ಪರಿಶೀಲಿಸಿ, ಭೂಮಾಲೀಕರಿಗೆ ಹಂಚಿಕೆ ಮಾಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.        ಸರೋಜಮ್ಮ ಎಂಬುವವರ ಹೆಸರಿನಲ್ಲಿ 2.38 ಎಕರೆ-ಗುಂಟೆ ಜಮೀನಿದ್ದು, ಅದರಲ್ಲಿ 2.35 ಎಕರೆ-ಗುಂಟೆ ಜಮೀನನ್ನು ಐಡಿಎಸ್‍ಎಂಟಿ ಯೋಜನೆಗೆ ಭೂಸ್ವಾಧಿನಪಡಿಸಿದ್ದು,…

ಮುಂದೆ ಓದಿ...

ಪೊಕ್ಸೊ ಕಾಯ್ದೆಯಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು – ಡಿಸಿ ಡಾ||ಕೆ.ರಾಕೇಶ್‍ಕುಮಾರ್

ತುಮಕೂರು :          ತುಮಕೂರು ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಪೊಕ್ಸೊ ಕಾಯ್ದೆಯಡಿ 105 ಪ್ರಕರಣಗಳು ದಾಖಲಾಗಿದ್ದು, ಅವುಗಳ ಪೈಕಿ 11 ಖುಲಾಸೆಯಾಗಿದ್ದು, 2 ಶಿಕ್ಷೆಯಾಗಿದೆ ಉಳಿದ 92 ಪ್ರಕರಣಗಳು ಬಾಕಿಯಿವೆ. ಒಮ್ಮೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದರೆ ಯಾರೇ ತಪ್ಪಿತಸ್ಥರಿದ್ದರೂ ಅವರಿಗೆ ಕಾನೂನಿನಡಿಯಲ್ಲಿ ಶಿಕ್ಷೆ ಆಗಬೇಕು ಆಗ ಮಾತ್ರ ಇಂತಹ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಜಿಲ್ಲಾಧಿಕಾರಿ ಡಾ||ಕೆ.ರಾಕೇಶ್‍ಕುಮಾರ್ ತಿಳಿಸಿದರು.        ಅವರು ಇಂದು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಹಾಗೂ ಜಿಲ್ಲಾಮಟ್ಟದ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಪೊಕ್ಸೊ ಕಾಯ್ದೆಯಡಿ ಪ್ರಕರಣಗಳ ಸರಿಯಾದ ತನಿಖೆಯಾಗಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಮತ್ತು ತೊಂದರೆಗೊಳಗಾದವರಿಗೆ ನ್ಯಾಯ ದೊರಕಿಸಬೇಕೆಂದು ಅವರು ಹೇಳಿದರು.       ಬಾಲಕಿಯರ ಬಾಲಮಂದಿರಗಳಲ್ಲಿ ಗೃಹಪಾಲಕರ ಪುರುಷ ಸಿಬ್ಬಂದಿಯ ಬದಲು ಮಹಿಳಾ ಸಿಬ್ಬಂದಿಯರವನ್ನು ನೇಮಿಸಬೇಕು…

ಮುಂದೆ ಓದಿ...