ಕಾಯಮಾತಿಗೆ ಆಗ್ರಹ – 10ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

ತುಮಕೂರು :       ತಾತ್ಕಾಲಿಕ ಆಧಾರದ ಮೇಲೆ ದುಡಿಯುತ್ತಿರುವ ಕಾರ್ಮಿಕರ ಕೆಲಸ ಕಾಯಂಗೊಳಿಸಬೇಕು, ಸೇವಾ ಭದ್ರತೆ ನೀಡಬೇಕು ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫಿಟ್‍ವೆಲ್ ಟೂಲ್ಸ್ ಅಂಡ್ ಫೋರ್ಜಿಂಗ್ ಕಾರ್ಮಿಕರ ಸಂಘ ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಸತ್ಯಾಗ್ರಹ 10ನೇ ದಿನಕ್ಕೆ ಕಾಲಿಟ್ಟಿದೆ ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ 5 ಕೆಎಚ್‍ಟಿ ಫೇಸ್‍ನ ಕಾರ್ಖಾನೆ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಕಾರ್ಮಿಕರು ಕಳೆದ 9 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಆಡಳಿತ ಮಂಡಳಿ ತಿರುಗಿಯೂ ನೋಡುತ್ತಿಲ್ಲ. ಕಾರ್ಮಿಕರ ಬಗ್ಗೆ ಆಡಳಿತ ಮಂಡಳಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಕಾರ್ಮಿಕ ಅಧಿಕಾರಿಗಳು ಬಂದು ಆಡಳಿತ ಮಂಡಳಿಯವರ ಜೊತೆ ಮಾತುಕತೆ ನಡೆಸಿದರೂ ಅವರ ಮಾತಿಗೂ ಕಿಮ್ಮತ್ತು ಇಲ್ಲವಾಗಿದೆ. ಅಧಿಕಾರಗಳೆಂದರೆ ಆಡಳಿತ ಮಂಡಳಿ ಅಸಡ್ಡೆ ತೋರುತ್ತಿದ್ದಾರೆ ಎಂದು ಧರಣಿನಿರತರು ದೂರಿದರು.    …

ಮುಂದೆ ಓದಿ...

ತುಮಕೂರು : ಕೆರೆಯಲ್ಲಿ ಈಜಲು ಹೋಗಿ 3 ಬಾಲಕರ ಸಾವು

ತುಮಕೂರು :       ಶಾಲೆಗೆ ಗೈರು ಹಾಜರಾಗಿ ಗುಬ್ಬಿ ಕೆರೆಯಲ್ಲಿ ಈಜಲು ಹೋದ ಮೂವರು ಶಾಲಾ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.        ಗುಬ್ಬಿ ಪಟ್ಟಣದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯದಲ್ಲಿದ್ದ ವಿದ್ಯಾರ್ಥಿಗಳ ಪೈಕಿ 5 ವಿದ್ಯಾರ್ಥಿಗಳು ಬಯೋಮೆಟ್ರಿಕ್ ನೀಡಿದ ನಂತರ ಬೆಳಗಿನ ತಿಂಡಿಯನ್ನು ಸೇವಿಸಿ ಶಾಲೆಗೆ ತೆರಳುವಾಗಿ ಹೊರಟ ವಿದ್ಯಾರ್ಥಿಗಳು ಶಾಲೆಗೆ ಹೋಗದೇ ಗುಬ್ಬಿ ಕೆರೆಗೆ ಹೊಂದಿಕೊಂಡಿರುವ ಕೋಡಿಹಳ್ಳಿಯ ಕೆರೆಕೋಡಿಯ ಮಗ್ಗುಲಲ್ಲೇ ಈಜಲು ನೀರಿಗೆ ಇಳಿದ 3 ವಿದ್ಯಾರ್ಥಿಗಳು ಈಜಾಡುತ್ತ ಮುಂದೆ ಸಾಗಿದಾಗ ಜೆ.ಸಿ.ಬಿ.ಯಿಂದ ಮಣ್ಣನ್ನು ಅಗೆದ ಹಳ್ಳದಲ್ಲಿ ಬಿದ್ದು ಈಜಲಾಗದೇ ಸಾವನ್ನಪ್ಪಿರುತ್ತಾರೆ. ಜೊತೆಗೆ ತೆರಳಿದ 2 ವಿದ್ಯಾರ್ಥಿಗಳು ತಮಗೆ ಈಜಲು ಬರುವುದಿಲ್ಲ ಎಂಬ ಕಾರಣದಿಂದ ಪಕ್ಕದಲ್ಲೇ ಇರುವ ಆಂಜನೇಯ ದೇವಾಲಯಕ್ಕೆ ತೆರಳಿದ್ದು ನೀರಿನಲ್ಲಿ ಮುಳುಗುತ್ತಿದ್ದ ಗೆಳೆಯರನ್ನು ನೋಡಿ ಭಯಭೀತರಾಗಿ ಕೂಗಾಡುತ್ತಿದ್ದನ್ನು ಗ್ರಾಮಸ್ಥರು ಕಂಡು…

ಮುಂದೆ ಓದಿ...