ತುಮಕೂರು : ಸ್ಮಾಟ್‍ಸಿಟಿ ವಿರುದ್ಧ ಸಾರ್ವಜನಿಕರ ಆಕ್ರೋಶ!!

ತುಮಕೂರು :       ನಗರದ ಸೋಮೇಶ್ವರ 15ನೇ ಕ್ರಾಸ್‍ನಲ್ಲಿ ಸ್ಮಾರ್ಟ್‍ಸಿಟಿಯಿಂದ ನಡೆಯುತ್ತಿರುವ ಕಾಮಗಾರಿಯ ವಿರುದ್ಧ ಸಾರ್ವಜನಿಕರು, ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿ, ಸ್ಮಾರ್ಟ್‍ಸಿಟಿ ಎಂಜಿನಿಯರ್ ದರ್ಶನ್ ಅವರನ್ನು ಮೇಯರ್ ಫರೀದಾಬೇಗಂ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.       ನಗರದ ಸೋಮೇಶ್ವರನ 15ನೇ ಅಡ್ಡರಸ್ತೆಯಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿಯಿಂದ ನೀರು, ವಿದ್ಯುತ್ ಹಾಗೂ ಯುಜಿಡಿ ಸಂಪರ್ಕ ಕಡಿತಗೊಂಡಿತ್ತು, ಕಾಮಗಾರಿಯಿಂದ ಫಣೀಂದ್ರ(ಸುರಭಿ) ಅವರ ಮನೆಯಲ್ಲಿ ಶಾರ್ಟ್‍ಸಕ್ರ್ಯೂಟ್ ಸಂಭವಿಸಿದೆ, ಸುರಕ್ಷ ಕ್ರಮಗಳನ್ನು ಅನುಸರಿಸದೇ ಅವೈಜ್ಞಾನಿಕವಾಗಿ ಕಾಮಗಾರಿಯನ್ನು ನಿರ್ವಹಿಸಲಾಗಿದ್ದು, ಸ್ಮಾರ್ಟ್‍ಸಿಟಿ ಎಂಜನಿಯರ್‍ಗಳು ಸ್ಪಂದಿಸುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.        15ನೇ ವಾರ್ಡ್ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ಮಾತನಾಡಿ, ಸ್ಮಾರ್ಟ್‍ಸಿಟಿ ಅಧಿಕಾರಿಗಳು ಜನಪ್ರತಿನಿಧಿಗಳ ಮಾತಿಗೆ ಗೌರವ ಕೊಡುತ್ತಿಲ್ಲ, ಕಾಮಗಾರಿ ಪ್ರಾರಂಭಿಸದಂತೆ ಸೂಚಿಸಿದ್ದರು, ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಈ ಕಾಮಗಾರಿಯಿಂದ ಹೇಮಾವತಿ ಪೈಪ್‍ಲೈನ್ ಕಡಿತಗೊಂಡಿದ್ದು, ನೀರು ಪೋಲಾಗಿದೆ, ಜನರು…

ಮುಂದೆ ಓದಿ...

ದೆಬ್ಬೇಘಟ್ಟ ರಸ್ತೆ ಕಾಮಗಾರಿಗೆ ಶೀಘ್ರ ಚಾಲನೆಗೆ ಶಾಸಕರ ಭರವಸೆ

ತುರುವೇಕೆರೆ :        ಪಟ್ಟಣದ ಪ್ರಮುಖ ರಸ್ತೆಯಾದ ದೆಬ್ಬೇಘಟ್ಟ ರಸ್ತೆಯನ್ನು ಜಿಲ್ಲಾ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಿದ್ದು, ಶೀಘ್ರದಲ್ಲಿಯೇ 25 ಮೀಟರ್ ಅಳತೆಯುಳ್ಳ ಸುಸಜ್ಜಿತ ರಸ್ತೆ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.          ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಬೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಈ ಹಿಂದೆ ದಬ್ಬೇಘಟ್ಟ ರಸ್ತೆಯನ್ನು 13.50 ಮೀಟರ್ ಮಾಡಲು ತಿರ್ಮಾನಿಸಲಾಗಿತ್ತು ಅದರಂತೆ ರಸ್ತೆ ಕಾಮಗಾರಿ ಪ್ರಾರಂಬಿಸಲಾಗಿತ್ತು ನಂತರ ಕೆಲವು ಕಟ್ಟಡದ ಮಾಲೀಕರು ಮಾಡಿದ ಗೊಂದಲದಿಂದಾಗಿ ರಸ್ತೆ ಅರ್ದಕ್ಕೆ ನಿಂತಿದೆ. ಜಿಲ್ಲಾದಿಕಾರಿಗಳ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ಈಗಾಗಲೆ ನಡೆದಿದ್ದು, ದಬ್ಬೇಘಟ್ಟ ರಸ್ತೆಯ ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿಮಳಿಗೆಗಳ ತೆರವುಗೊಳಿಸುವ ಕಾರ್ಯವನ್ನು ಶೀಘ್ರ ಮಾಡಲಾಗುವುದು ಎಂದು ತಿಳಿಸಿದರು.        ಸರಿಯಾದ ಮಾಹಿತಿ ಇಲ್ಲದೆ ಮೀಟಿಂಗ್…

ಮುಂದೆ ಓದಿ...