ದೇವರಾಯನದುರ್ಗ ಜಾತ್ರೆ : ರಸ್ತೆ ಮತ್ತು ವಿದ್ಯುತ್ ಕಾಮಗಾರಿ ಪೂರ್ಣಗೊಳಿಸಲು ಗಡುವು!

ತುಮಕೂರು:      ತುಮಕೂರು ತಾಲ್ಲೂಕಿನ ದೇವರಾಯನದುರ್ಗ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ರಥೋತ್ಸವ ಮಾರ್ಚ್ 9ರಂದು ಸುಮಾರು ಒಂದೂವರೆ ಲಕ್ಷ ಜನರ ಸಮ್ಮುಖದಲ್ಲಿ ನಡೆಯಲಿದ್ದು, ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸುರಕ್ಷಿತ ರಸ್ತೆ ಸಂಪರ್ಕ ಹಾಗೂ ವಿದ್ಯುತ್ ಕಾಮಗಾರಿಗಳನ್ನು ಇನ್ನೂ 2-3 ದಿವಸಗಳಲ್ಲಿ ಪೂರ್ಣಗೊಳಿಸಿಕೊಡಲು ಲೋಕೋಪಯೋಗಿ ಇಲಾಖೆ ಹಾಗೂ ಬೆಸ್ಕಾಂ ಇಲಾಖೆಯ ಇಂಜಿನಿಯರ್‍ಗಳಿಗೆ ಉಪವಿಭಾಗಾಧಿಕಾರಿ ಅಜಯ್ ಗಡುವು ನೀಡಿರುತ್ತಾರೆ.       ತುಮಕೂರು ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಜಾತ್ರಾ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಊರ್ಡಿಗೆರೆ ಕಡೆಯಿಂದ ಕೈಗೊಂಡಿರುವ ರಸ್ತೆ ಕಾಮಗಾರಿ ಹಾಗೂ ರಥಬೀದಿಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎರಡು ಬದಿಯ ಚರಂಡಿಗಳ ಮೇಲೆ ಸ್ಲಾಬ್ ಹಾಕಲು ಅವರು ಸೂಚನೆ ನೀಡಿದರು. ಎರಡು ಇಲಾಖೆಗಳ ಇಂಜಿನಿಯರ್‍ಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಾಯಿಂಟ್ ಇನ್ಸ್ಪೆಕ್ಷನ್ ಮಾಡಿ ಕಾಮಗಾರಿಗಳ ಪ್ರಗತಿ ಮತ್ತು…

ಮುಂದೆ ಓದಿ...

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

ತುಮಕೂರು:       ತುಮಕೂರು ಜಿಲ್ಲೆಯ 34 ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ 4ರಿಂದ 2020ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದೆ.        ತುಮಕೂರು ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ತುಮಕೂರು, ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ಮತ್ತು ಕುಣಿಗಲ್ ತಾಲ್ಲೂಕುಗಳ 24 ಪರೀಕ್ಷಾ ಕೇಂದ್ರಗಳು, ಮಧುಗಿರಿ ವ್ಯಾಪ್ತಿಯಲ್ಲಿ ಬರುವ ಮಧುಗಿರಿ, ಶಿರಾ, ಪಾವಗಡ ಹಾಗೂ ಕೊರಟಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ 10 ಪರೀಕ್ಷಾ ಕೇಂದ್ರಗಳು ಸೇರಿ ಒಟ್ಟು 34 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ.       2020ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಪ್ರಥಮವಾಗಿ (ಫ್ರೆಶರ್ಸ್)-23492, ಪುನರಾವರ್ತಿತ (ರಿಪೀಟರ್ಸ್)-3387, ಖಾಸಗಿ ವಿದ್ಯಾರ್ಥಿಗಳು-581, ಕಲಾ ವಿಭಾಗ-7350, ವಾಣಿಜ್ಯ-11348, ವಿಜ್ಞಾನ-8762, ಆ ಪೈಕಿ ಬಾಲಕರು-12638, ಬಾಲಕಿಯರು-14822 ಸೇರಿ ಜಿಲ್ಲೆಯಲ್ಲಿ ಒಟ್ಟು 27460 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಲಿದ್ದಾರೆ.       ಮಾರ್ಚ್…

ಮುಂದೆ ಓದಿ...

ವಿಶ್ವ ಶ್ರವಣ ದಿನ/ರಾಷ್ಟ್ರೀಯ ಶ್ರವಣ ಜಾಗೃತಿ ಅಭಿಯಾನಕ್ಕೆ ಡಿಹೆಚ್‍ಒ ಚಾಲನೆ

ತುಮಕೂರು :       ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾಣಿ ಪೌಂಡೇಶನ್, ಸಾರ್ವಜನಿಕ ಶಿಕ್ಷಣ ಇಲಾಖೆ, ರೆಡ್‍ಕ್ರಾಸ್ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿಂದು ಎನ್‍ಪಿಪಿಸಿಡಿ ಕಾರ್ಯಕ್ರಮದಡಿಯಲ್ಲಿ ಜೀವನಕ್ಕಾಗಿ ಶ್ರವಣ: ಶ್ರವಣ ದೋಷವು ನಿಮ್ಮನ್ನು ಮಿತಿಗೊಳಿಸಲು ಬಿಡಬೇಡಿ ಎಂಬ ಘೋಷಣೆಯೊಂದಿಗೆ ವಿಶ್ವ ಶ್ರವಣ ದಿನ/ರಾಷ್ಟ್ರೀಯ ಶ್ರವಣ ಜಾಗೃತಿ ಅಭಿಯಾನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ. ಆರ್. ಚಂದ್ರಿಕಾ ಅವರು ನಗರದ ಟೌನ್‍ಹಾಲ್ ಬಳಿ ಹಸಿರು ನಿಶಾನೆ ತೋರಿದರು.       ಜಾಗೃತಿ ಅಭಿಯಾನದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ, ಡಾ. ಮಹಿಮಾ, ಡಾ. ಕೇಶವರಾಜ್, ಡಾ. ಸನತ್‍ಕುಮಾರ್, ಡಾ. ಮೋಹನ್‍ದಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.       ವಿಶ್ವ ಶ್ರವಣ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥವು ನಗರದ ಟೌನ್‍ಹಾಲ್‍ನಿಂದ ಸಾಗಿ ಜಿಲ್ಲಾಸ್ಪತ್ರೆಯಲ್ಲಿ…

ಮುಂದೆ ಓದಿ...