ತುಮಕೂರು : ಸಮರ್ಪಕ ರಸ್ತೆ ಕಾಮಗಾರಿ ನಿರ್ವಹಿಸದ ಏಜೆನ್ಸಿಗಳಿಗೆ ದಂಡ!

ತುಮಕೂರು :      ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸದ 4 ಇಲಾಖೆ/ ಏಜೆನ್ಸಿಗಳಿಗೆ 1ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಭೂಬಾಲನ್ ತಿಳಿಸಿದ್ದಾರೆ.       ಅಗೆದಿರುವ ರಸ್ತೆಗಳನ್ನು ಪುನರ್‍ಸ್ಥಾಪಿಸದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ(ಕೆಯುಡಬ್ಲ್ಯುಎಸ್ ಅಂಡ್ ಡಿಬಿ) 60ಲಕ್ಷ ರೂ., ಬೆಸ್ಕಾಂ ಸಂಸ್ಥೆಗೆ 10 ಲಕ್ಷ ರೂ., ಮೆಘಾ ಗ್ಯಾಸ್ ಕಂಪನಿಗೆ 20ಲಕ್ಷ ರೂ. ಹಾಗೂ ರಿಲೆಯನ್ಸ್ ಜಿಯೋ ಕಂಪನಿಗೆ 10ಲಕ್ಷ ರೂ.ಗಳ ದಂಡವನ್ನು ವಿಧಿಸಲಾಗಿದೆ.      ವಿವಿಧ ಕಾಮಗಾರಿಗಾಗಿ ಅಗೆದಿರುವ ರಸ್ತೆಗಳನ್ನು ಸಮರ್ಪಕವಾಗಿ ಪುನರ್‍ಸ್ಥಾಪನೆ(Restoration) ಮಾಡದೆ ಇರುವುದರಿಂದ ನಗರದಲ್ಲಿ ಧೂಳು ಹೆಚ್ಚಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅನುಷ್ಠಾನಗೊಳಿಸಿರುವ ವಿವಿಧ ಕಾಮಗಾರಿಯ ಪುನರ್ ಸ್ಥಾಪನೆಯನ್ನು ತುರ್ತಾಗಿ ಯಥಾಸ್ಥಿತಿಯಲ್ಲಿ ನಿರ್ವಹಣೆ ಮಾಡಲು ಸಂಬಂಧಿಸಿದ ಇಲಾಖೆ/ ಏಜೆನ್ಸಿಗಳಿಗೆ ಹಲವಾರು ಬಾರಿ ಸೂಚಿಸಲಾಗಿದ್ದರೂ…

ಮುಂದೆ ಓದಿ...

ತುಮಕೂರು : ಒಂದೇ ದಿನ ಪಾಲಿಕೆಯಿಂದ 1 ಕೋಟಿ ಬಾಡಿಗೆ ಬಾಕಿ ವಸೂಲಿ!!

ತುಮಕೂರು :       ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಇರುವ ಮಹಾನಗರ ಪಾಲಿಕೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ಭರಿಸದೆ ನಾಲ್ಕಾರು ವರ್ಷಗಳಿಂದ ಠಿಕಾಣಿ ಹೂಡಿದ್ದ ವ್ಯಾಪಾರಿಗಳಿಗೆ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಶಾಕ್ ನೀಡಿದ್ದಾರೆ.       ಮಳಿಗೆಗಳಿಗೆ ದಿಢೀರನೆ ಭೇಟಿ ನೀಡಿ ಬಾಕಿ ಉಳಿಸಿಕೊಂಡಿದ್ದ ಸುಮಾರು 1 ಕೋಟಿ ಮೊತ್ತದ ಬಾಡಿಗೆಯನ್ನು ವಸೂಲಿ ಮಾಡಿದ್ದಾರೆ. ಸಕಾಲಕ್ಕೆ ಬಾಡಿಗೆ ಕಟ್ಟಲು ಹಿಂದೇಟು ಹಾಕಿದ 8 ಮಳಿಗೆಗಳ ಬಾಗಿಲನ್ನು ಬಂದ್ ಮಾಡಿಸಿದ್ದಾರೆ.       ಕೆಲವು ಮಳಿಗೆಗಳ ಬಾಡಿಗೆ ಮೊತ್ತವನ್ನು ಚೆಕ್ ಮೂಲಕ ಪಡೆದಿರುವ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು `ಮಾರ್ಚ್ 10ರ ಒಳಗೆ ಬಾಡಿಗೆಯು ಪಾಲಿಕೆಯ ಖಾತೆಗೆ ಸಂದಾಯ ಆಗಬೇಕು’ ಎಂದು ವ್ಯಾಪಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಕೆಲವರ ಬಳಿ ನಗದಿನ ರೂಪದಲ್ಲಿ ಬಾಡಿಗೆ ವಸೂಲಿ ಮಾಡಿದ್ದಾರೆ.ಪಾಲಿಕೆಯ ಮಳಿಗೆಗಳನ್ನು ಟೆಂಡರ್ ಮೂಲಕ ಪಡೆದಿರುವ…

ಮುಂದೆ ಓದಿ...