ಮಾರ್ಚ್ 11 ರಂದು ಅಂಗವಿಕಲರ ಜಿಲ್ಲಾ ಸಮ್ಮೇಳನ!!

ತುಮಕೂರು:        ಸಕ್ಷಮ ಜಿಲ್ಲಾ ಘಟಕವು ಮಾರ್ಚ್ 11 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಬಾಲಭವನದಲ್ಲಿ ಸಕ್ಷಮ ತುಮಕೂರು ಜಿಲ್ಲಾ ಘಟಕದ ದ್ವಿತೀಯ ಜಿಲ್ಲಾ ಸಮ್ಮೇಳನವನ್ನು ಹಮ್ಮಿಕೊಂಡಿದೆ.         ಕಾರ್ಯಕ್ರಮದ ಉದ್ಘಾಟನೆಯನ್ನು ಸಕ್ಷಮ ಅಖಿಲ ಭಾರತೀಯ ಕಾರ್ಯದರ್ಶಿ ಕಮಲಾ ಕಾಂತ್ ಪಾಂಡೆ ನೆರವೇರಿಸುವರು. ಬೆಳ್ಳಾವಿ ಕಾರದೇಶ್ವರ ಮಠದ ಶ್ರೀ ಕಾರದೇಶ್ವರಸ್ವಾಮೀಜಿಯವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅಥಿತಿಗಳಾಗಿ ಜಿಲ್ಲಾಧಿಕಾರಿ ಡಾ||ಕೆ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||ಬಿ.ಆರ್.ಚಂದ್ರಿಕಾ, ಅಂಗವಿಕಲರ ಹಕ್ಕುಗಳ ಕಾಯಿದೆ ರಾಜ್ಯ ಆಯುಕ್ತ ವಿ.ಎಸ್.ಬಸವರಾಜು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಸ್.ನಟರಾಜು ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.       ಕಾರ್ಯಕ್ರಮಕ್ಕೂ ಮುನ್ನ ಅಂದು ಬೆಳಿಗ್ಗೆ 9 ಗಂಟೆಗೆ ಟೌನ್‍ಹಾಲ್ ವೃತ್ತದಲ್ಲಿ ನಗರ…

ಮುಂದೆ ಓದಿ...

ಕೊರಟಗೆರೆ : ಕಸದ ಬುಟ್ಟಿ ವಿತರಿಸಿ ಕಸ ವಿಂಗಡಣೆ ಬಗ್ಗೆ ಜಾಗೃತಿ!

ಕೊರಟಗೆರೆ :       ಪರಿಸರ ಹಾನಿ ಹಾಗೂ ಭೂಮಾಲಿನ್ಯವನ್ನ ತಪ್ಪಿಸಲು ಕಸ ಸಂಗ್ರಹಣೆ ಕಾರ್ಯ ಪ್ರಾರಂಭಿಸಿದ್ದು, ಗ್ರಾಮವನ್ನ ಸ್ವಚ್ಛವಾಗಿ        ತಾಲೂಕಿನ ಹೊಳವನಹಳ್ಳಿ ಗ್ರಾಪಂಯಲ್ಲಿ ಸ್ವಚ್ಛಮೇವ ಜಯತೇ ಅಂದೋಲನದಡಿ ಕಸವನ್ನ ಸಂಗ್ರಹಣೆ ಮಾಡಲು ಕಸದ ಬುಟ್ಟಿಯನ್ನ ಹಂಚಿಕೆ ಮಾಡಿ ಮಾತನಾಡಿದರು.       ನಮ್ಮ ಗ್ರಾಪಂಯನ್ನ ಸ್ವಚ್ಛಮೇವ ಜಯತೇ ಅಂದೋಲನದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾಗಿದ್ದು, ಪ್ರತಿ ಮನೆಗಳಿಂದ ಕಸ ಸಂಗ್ರಹಣೆ ಆರಂಭಿಸಲಾಗಿದ್ದು. ಗ್ರಾಮದ ಪ್ರತಿ ಮನೆಗೂ ತೆರಳಿ ಕಸ ವಿಂಗಡಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಹೊಳವನಹಳ್ಳಿ ಗ್ರಾಮದ ಪ್ರತಿಯೊಂದು ವಾರ್ಡ್‍ಗಳಿಗೂ ಹಸಿ ಹಾಗೂ ಒಣ ಕಸವನ್ನ ತೆಗೆದುಕೊಳ್ಳಲು ವಾಹನ ಬರುತ್ತದೆ ವಾಹನ ಬಂದಾಗ ಆ ಕಸವನ್ನ ವಾಹನವನ್ನ ಹಾಕಬೇಕು ಎಂದು ತಿಳಿಸಿದರು. ಗ್ರಾಪಂ ಮಾಜಿ ಸದಸ್ಯ ಜಯರಾಮು ಮಾತನಾಡಿ ನಮ್ಮ ಹೊಳವನಹಳ್ಳಿ ಗ್ರಾಮ ಸುಮಾರು ಹತ್ತು…

ಮುಂದೆ ಓದಿ...

ತೆಂಗಿನ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡಲು ಆಗ್ರಹಿಸಿ ಪ್ರತಿಭಟನೆ

ತುಮಕೂರು:       ಕೊಬ್ಬರಿಗೆ ಕನಿಷ್ಠ 20 ಸಾವಿರ ಘೋಷಿಸಬೇಕು,ನೀರಾ ಇಳಿಸಲು ಅನುಮತಿ ನೀಡಬೇಕು,ತೆಂಗಿನ ಮೌಲ್ಯವರ್ಧಿತ ಉತ್ಪನಗಳ ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕೆಂದು ಆಗ್ರಹಿಸಿ ಇಂದು ಟೌನಾಹಾಲ್ ವೃತ್ತದಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿ,ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.       ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ,ಡಾ.ಎಸ್.ರಫೀಕ್ ಅಹಮದ್,ಅರೆ ಶಂಕರ ಮಠದ ಶ್ರೀಚೈತನ್ಯ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿದಂತೆ ಹಲವರು ಮುಖಂಡರು ಭಾಗವಹಿಸಿದ್ದ ಪ್ರತಿಭಟನೆಗೆ ಕರ್ನಾಟಕ ಪ್ರಾಂತ ರೈತ ಸಂಘ, ಹಲವು ಸಂಘ ಸಂಸ್ಥೆಗಳ ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು. ಧರಣಿ ನಿರಂತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ತೆಂಗು ಬೆಳೆಗಾರರು ಇಂದು ಅತ್ಯಂತ ಸಂಕಷ್ಟದಲ್ಲಿದೆ.ಕೇಂದ್ರ ಸರಕಾರ ತೆಂಗಿಗೆ 9200 ರೂ ಬೆಂಬಲ ಬೆಲೆ ಘೋಷಿಸಿದೆ. ಆದರೆ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಕೊಬ್ಬರಿ 9600 ರೂಗಳಿಗೆ ಮಾರಾಟವಾಗುವ ಮೂಲಕ ವ್ಯಾಪಾರಸ್ತರು ಹಾವು ಸಾಯಬಾರದು,…

ಮುಂದೆ ಓದಿ...