ಪ್ಲಾಸ್ಟಿಕ್ ಮುಕ್ತ ಕೊರಟಗೆರೆ ಕನಸಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ : ಜಗ್ಗೇಶ್ ಅಭಿಮತ

ಕೊರಟಗೆರೆ:         ಪ್ರೇಂಡ್ಸ್‍ಗ್ರೂಪ್ ಮತ್ತು ಜಗ್ಗೇಶ್ ಅಭಿಮಾನಿ ಬಳಗದ ಕನಸಾದ ಪ್ಲಾಸ್ಟಿಕ್ ಮುಕ್ತ ಕೊರಟಗೆರೆ ಗುರುರಾಯರ ಕೃಪೆಯಿಂದ ನನಸಾಗಲಿ ಎಂದು ನಾಯಕನಟ ಜಗ್ಗೇಶ್ ತಿಳಿಸಿದರು.       ಪಟ್ಟಣದ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಪ್ರೇಂಡ್ಸ್‍ಗ್ರೂಪ್ ಮತ್ತು ಜಗ್ಗೇಶ್ ಅಭಿಮಾನಿ ಬಳಗದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಪ್ಲಾಸ್ಟಿಕ್ ಮುಕ್ತ ಕೊರಟಗೆರೆ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.       ಮಹಿಳೆ ಪ್ರತಿಯೊಂದು ಮನೆಯ ಶಕ್ತಿ ದೇವತೆ. ತಾಯಿತಂದೇ ಅಷ್ಟೆ ಶ್ರೇಷ್ಟರು ಗುರುದೇವ. ಪ್ರಸ್ತುತ ಸಮಾಜದಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಅಡ್ಡದಾರಿ ಆಗಿದೆ. ಪೋಷಕರ ಜವಾಬ್ದಾರಿ ಇದ್ದಲ್ಲಿ ಮಾತ್ರ ಮಕ್ಕಳ ಭವಿಷ್ಯ ಉಜ್ವಲ ಆಗಲಿದೆ. ಹಿಂದು ಗ್ರಂಥದಲ್ಲಿ ತಾಯಿ ಮತ್ತು ಗುರುವಿಗೆ ಪವಿತ್ರ ಸ್ಥಾನ ನೀಡಲಾಗಿದೆ ಎಂದು ಹೇಳಿದರು.       ನಾಯಕನಟಿ ಪರಿಮಳ ಮಾತನಾಡಿ, ಸಾಮಾಜಿಕ ಕಳಕಳಿಯ ಕೆಲಸಕ್ಕೆ ಪ್ರತಿಯೊಬ್ಬರ ಸಹಕಾರ…

ಮುಂದೆ ಓದಿ...

ಅತಿಕ್ರಮಿಸಿಕೊಂಡ ಪುಟ್‍ಪಾತ್ ರಸ್ತೆ ಮತ್ತು ಸಮಿತಿಯ ಜಾಗ ತೆರವು

ತುಮಕೂರು :       ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಂತರಸನಹಳ್ಳಿ ಹೂವು, ಹಣ್ಣು, ತರಕಾರಿ ಮಾರುಕಟ್ಟೆ ಉಪಪ್ರಾಂಗಣದಲ್ಲಿ ಅಂಗಡಿ ಮಳಿಗೆಗಳ ಮುಂಭಾಗದ ಪುಟ್ ಪಾತ್ ರಸ್ತೆ ಮತ್ತು ಸಮಿತಿಯ ಜಾಗವನ್ನು ಅತಿಕ್ರಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ, ರೈತರಿಗೆ, ಓಡಾಡಲು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದರಿಂದ ವರ್ತಕರುಗಳನ್ನು ತಮ್ಮ ತಮ್ಮ ಅಂಗಡಿಗಳ ಒಳಭಾಗದಲ್ಲಿಯೇ ವ್ಯಾಪಾರ ವಹಿವಾಟು ನಡೆಸುವಂತೆ ತಿಳಿಸಿ ಅತಿಕ್ರಮಿಸಿದ ಜಾಗವನ್ನು ಎ.ಪಿ.ಎಂ.ಸಿ ಕಾರ್ಯದರ್ಶಿಯಾದ ಡಿ.ಆರ್.ಪುಷ್ಪ ಹಾಗೂ ನಗರ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ವಿಜಯಲಕ್ಷ್ಮೀ, ಸಂಚಾರಿ ಠಾಣೆಯ ಎಸ್‍ಎಸ್‍ಐ ಆನಂದಯ್ಯ ಇವರುಗಳು ದಿನಾಂಕ:12-03-2020 ಬೆಳಿಗ್ಗೆ 7 ರಿಂದ ಕಾರ್ಯಾಚರಣೆ ಕೈಗೊಂಡು ತೆರವುಗೊಳಿಸಿದರು.       ಈ ಸಮಯದಲ್ಲಿ ಸಮಿತಿಯ ಸಹಾಯಕ ಕಾರ್ಯದರ್ಶಿಗಳಾದ ವೈ.ಎಂ.ಲಕ್ಷ್ಮೀಕಾಂತ, ಹೆಚ್.ಜಿ.ಶ್ರೀನಿವಾಸ, ಡಿ.ಆರ್.ಉಷಾ, ಹಾಗೂ ಸಿಬ್ಬಂದಿಗಳಾದ ರಾಜಲಕ್ಷ್ಮಿ, ಶಂಕರ, ಹನುಮಂತರಾಜು.ಟಿ.ಎಂ, ಎ.ಆನಂದಕುಮಾರ್, ಜಿ.ನಂದೀಶಯ್ಯ, ಮತ್ತು ಪೋಲೀಸ್ ಸಿಬ್ಬಂದಿಗಳು…

ಮುಂದೆ ಓದಿ...