ತಹಶೀಲ್ದಾರ್ ವರ್ಗಾವಣೆ ಹಿಂದೆ ಸಂಸದರ ಕೈವಾಡ – ಆರೋಪ

ತುಮಕೂರು :       ಕಾನೂನು ಉಲ್ಲಂಘಿಸದೇ ಕಾರ್ಯನಿರ್ವಹಿಸುವ ಮೂಲಕ ಸಾವಿರಾರು ಜನರಿಗೆ ಸಹಾಯ ಮಾಡಿರುವ ತಹಶೀಲ್ದಾರ್ ಎಂ.ಮಮತಾ ಅವರನ್ನು ಗುಬ್ಬಿ ತಾಲ್ಲೂಕಿಗೆ ಮರು ನಿಯೋಜನೆಗೊಳಿಸದಿದ್ದರೆ ತುಮಕೂರು ಬಂದ್ ಮಾಡಲಾಗುವುದು ಎಂದು ದಲಿತ ಮುಖಂಡ ಕೊಡಿಯಾಲ ಮಹದೇವ್ ಆಗ್ರಹಿಸಿದರು.       ಗುಬ್ಬಿ ತಹಶೀಲ್ದಾರ್ ಮಮತಾ ಅವರನ್ನು ಮರು ನಿಯೋಜನೆಗೊಳಿಸುವಂತೆ ಒತ್ತಾಯಿಸಿ ದಲಿತರ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಿಪ್ಪೂರಿನ ಜಮೀನು ಒತ್ತುವರಿಯಾಗಿದ್ದು, ರಾಜಕಾರಣಿಗಳು ಆರ್ ಐ, ವಿಎ ಅವರನ್ನು ಬಳಸಿಕೊಂಡು ಕುತಂತ್ರ ರೂಪಿಸಿ ಅವರನ್ನು ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.       ಹೊದಲೂರು ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವ ಸಂಸದರ ಜಮೀನನ್ನು ತೆರವುಗೊಳಿಸಲು ಮುಂದಾಗಿದ್ದ ಮಮತಾ ಅವರನ್ನು, ಅಲ್ಲಿನ ಗ್ರಾಮ ಲೆಕ್ಕಿಗ ಮುರುಳಿ, ರಾಜಸ್ವ ನಿರೀಕ್ಷಕ ರಮೇಶ್ ಅವರನ್ನು ಬಳಸಿಕೊಂಡು, ಕುಮ್ಮಕ್ಕು ನೀಡಿ…

ಮುಂದೆ ಓದಿ...

ಮಾ.15ರಂದು ಕೈದಾಳ ಶ್ರೀ ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ

ತುಮಕೂರು :       ತಾಲ್ಲೂಕಿನ ಗೂಳೂರು ಹೋಬಳಿ ಕೈದಾಳ ಶ್ರೀ ಚನ್ನಕೇಶವ ಸ್ವಾಮಿಯ ಬ್ರಹ್ಮ ರಥೋತ್ಸವವು ಮಾರ್ಚ್ 15ರಂದು ನಡೆಯಲಿದೆ.       ರಥೋತ್ಸವದ ಪ್ರಯುಕ್ತ ಮಾರ್ಚ್ 13 ರಿಂದ 19ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಮಾರ್ಚ್ 13ರಂದು ಅಂಕುರಾರ್ಪಣೆ, ದ್ವಜಾರೋಹಣ; 14ರಂದು ಗಜೇಂದ್ರ ಮೋಕ್ಷ, ಪ್ರಹ್ಲಾದೋತ್ಸವ, ಕಲ್ಯಾಣೋತ್ಸವ; 15ರಂದು ಬ್ರಹ್ಮರಥೋತ್ಸವದ ಅಂಗವಾಗಿ ಯಾತ್ರಾದಾನ ಸೇವೆ, ಹರಿವಾಣದ ಸೇವೆ, ಹೂವಿನ ಅಲಂಕಾರ ತಿರುಪಾವಡೈ ಸೇವೆ, ಬ್ರಾಹ್ಮಣ ಅನ್ನಸಂತರ್ಪಣೆ, ಪಾನಕ ಪೂಜಾದಿಗಳು, ಶೇಷೋತ್ಸವ; 16ರಂದು ಕುದುರೆ ಉತ್ಸವ, ಹೂವಿನ ಪಲ್ಲಕ್ಕಿ ಉತ್ಸವ; 17ರಂದು ಗರುಡೋತ್ಸವ, ತೀರ್ಥಸ್ನಾನ, ಧ್ವಜ ಅವರೋಹಣ, ಪಲ್ಲಕ್ಕಿ ಉತ್ಸವ, ಶಯನೋತ್ಸವ; 18ರಂದು ಉಯ್ಯಾಲೋತ್ಸವ, ಬೃಂದಾವನೋತ್ಸವ; 19ರಂದು ದವನೋತ್ಸವ, ಮಂಟಪೋತ್ಸವ, ಹೆಜ್ಜೆ ಮಂಗಳಾರತಿ, ಮಹಮಜ್ಜನ ಸೇವೆ, ಮತ್ತಿತರ ಪೂಜಾ ಕಾರ್ಯಗಳು ನಡೆಯಲಿವೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ…

ಮುಂದೆ ಓದಿ...

ಚಿಕ್ಕನಾಯಕನಹಳ್ಳಿ ಪುರಸಭೆಯ ಅಧ್ಯಕ್ಷ ಸ್ಥಾನ ಮತ್ತೆ ಕಗ್ಗಂಟು

ಚಿಕ್ಕನಾಯಕನಹಳ್ಳಿ :       ಕಳೆದ ಎರಡುವರ್ಷದಿಂದ ಸ್ಥಳೀಯ ಪುರಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷಸ್ಥಾನಗಳ ಮೀಸಲಾತಿ ವಿವಾದಕ್ಕೆ ತೆರೆ ಎಳೆದಿರುವ ಸರ್ಕಾರ ಈಗ ನೂತನ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದರೂ ಇಲ್ಲಿನ ಪುರಸಭೆಯ ಅಧ್ಯಕ್ಷಸ್ಥಾನ ಮತ್ತೆ ಕಗ್ಗಂಟಾಗಿದೆ.       ಕಳೆದ ಎರಡುವರ್ಷದಲ್ಲಿ ನಡೆದ ಪುರಸಭೆ ಚುನಾವಣೆಯನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಘೋಷಿಸಿದ್ದ ಮೀಸಲಾತಿ ಪಟ್ಟಿಯಲ್ಲಿ ನಿಯಮಗಳು ಪರಿಪಾಲನೆಯಾಗಿಲ್ಲವೆಂಬ ಕಾರಣಕ್ಕೆ ಪ್ರಕರಣ ನ್ಯಾಯಾಲಯಕ್ಕೆ ಎಡೆತಾಗಿದ್ದ ಪರಿಣಾಮ ಚುನಾಯಿತ ಸದಸ್ಯರು ಗೆದ್ದರೂ ಪುರಸಭೆಯೊಳಗೆ ತಮ್ಮ ಅಧಿಕಾರ ಚಲಾಯಿಸಲು ಅವಕಾಶವಿರಲಿಲ್ಲ.       ಈಗ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನೂತನ ಮೀಸಲಾತಿಪಟ್ಟಿಯನ್ನು ಬಿಡುಗಡೆಮಾಡುವ ಮೂಲಕ ಚುನಾಯಿತ ಸದಸ್ಯರ ಅಧಿಕಾರ ಚಲಾವಣೆಗೆ ಹಾಕಲಾಗಿದ್ದ ದಿಗ್ಬಂದನ ತೆರವಾಗುವ ಸಂದರ್ಭ ಬಂದೊದಗಿದೆ.       ಆದರೆ ಪಟ್ಟಣದ ಪುರಸಭೆಗೆ ಈಗ ಸರ್ಕಾರ ಅಧಿಕೃತವಾಗಿ ಘೋಷಿಸಿರುವ…

ಮುಂದೆ ಓದಿ...

ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಜಾಗ್ರತಾ ಕ್ರಮ ವಹಿಸಲು ಡಿಸಿ ಸೂಚನೆ

ತುಮಕೂರು:       ಜಿಲ್ಲೆಯಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರ ಬಗ್ಗೆ ಸಾರ್ವಜನಿಕರಿಗೆ ತಿಳಿದಲ್ಲಿ ಕೂಡಲೇ ಸಹಾಯವಾಣಿ ಸಂಖ್ಯೆ-0816-2278387/2251414ಕ್ಕೆ ಕರೆ ಮಾಡಿ ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಸೂಚನೆ ನೀಡಿದ್ದಾರೆ.       ತಾಲ್ಲೂಕು ಮಟ್ಟದಲ್ಲಿ ಪ್ರತಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲೂ ಕರೋನ ಸೋಂಕು ಹರಡುವ ಬಗ್ಗೆ ಜನಜಾಗೃತಿ ಮೂಡಿಸಿ ಮುಂಜಾಗ್ರತಾ ಕ್ರಮವಾಗಿ ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳುವುದು, ಬಾಯಿ, ಕಣ್ಣು, ಮೂಗು ಇವುಗಳನ್ನು ಮುಟ್ಟದೇ ಇರುವುದು ಹಾಗೂ ಕೆಮ್ಮು/ಸೀನು ಬಂದಾಗ ರಕ್ಷಣಾತ್ಮಕವಾಗಿ ತಮ್ಮ ಕೈತೋಳುಗಳನ್ನು ಬಳಸಿಕೊಳ್ಳುವಂತೆ ಅರಿವು ಮೂಡಿಸಬೇಕೆಂದು ಅವರು ತಿಳಿಸಿದರು.       ಕೆಮ್ಮು, ಜ್ವರ, ನೆಗಡಿ ಬಂದರೆ ಹತ್ತಿರದ ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು. ಆದರೆ ಎಲ್ಲಾ ಜ್ವರ, ಕೆಮ್ಮು, ನೆಗಡಿ ಕರೋನಾ ವೈರಸ್‍ನಿಂದ ಬಂದಿರುವುದಿಲ್ಲ ಇದರ ಬಗ್ಗೆ ಸಾರ್ವಜನಿಕರು ಗಮನಹರಿಸಿ ಮುಂಜಾಗ್ರತಾ ಕ್ರಮವಾಗಿ ವೈಯಕ್ತಿಕವಾಗಿ ಬಳಸುವ…

ಮುಂದೆ ಓದಿ...