ಪಾವಗಡ ಪುರಸಭೆಯ 2020-21ನೇ ಸಾಲಿನ ಆಯ-ವ್ಯಯ ಮಂಡನೆ

ಪಾವಗಡ :       ಪಟ್ಟಣದ ಪುರಸಭೆಯ 2020-21 ನೇ ಸಾಲಿನ ಆಯ-ವ್ಯಯ ಮಂಡನೆಯಾಗಿದ್ದು, 58 ಲಕ್ಷದ 87 ಸಾವಿರದ ಉಳಿತಾಯ ಬಜೆಟ್‍ನ್ನು ಪುರಸಭಾ ಆಡಳಿತಾಧಿಕಾರಿ ಹಾಗೂ ಮಧುಗಿರಿ ಉಪ ವಿಭಾಗಾಧಿಕಾರಿ ಡಾ.ನಂದಿನಿ ದೇವಿ ಮಂಡಿಸಿದರು.       ಗುರುವಾರ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ವಾರ್ಷಿಕವಾಗಿ 569.72 ಕೋಟಿ ಬಜೆಡ್ ಮಂಡಿಸಿ, ಇದರಲ್ಲಿ 510.85 ಕೋಟಿ ವೆಚ್ಚವಾಗಿ 58.87 ಲಕ್ಷ ಪುರಸಭೆಯ ಉಳಿತಾಯವಾಗಿದೆ ಎಂದು ತಿಳಿಸಿ ಮಾತನಾಡಿದ ಅವರು, ಸ್ವಯಂ ಘೋಷಿತ ಆಸ್ತಿ, ಕಟ್ಟಡ ಬಾಡಿಗೆ, ನೀರಿನ ತೆರಿಗೆ, ದಿನವಹಿ, ಮಾರ್ಕೆಟ್‍ವಹಿ ಲೇಔಟ್‍ಗಳ ಅಭಿವೃದ್ಧಿ ಸೇರಿದಂತೆ ಪುರಭೆಗೆ ವಿವಿಧ ಆದಾಯ ಮೂಲಗಳಿಂದ 5.ಕೋಟಿ 69 ಲಕ್ಷ್ಮ 72 ಸಾವಿರ ಆದಾಯ ಬಂದಿದ್ದು, ಕಚೇರಿ ನಿರ್ವಹಣಿ, ಆರೋಗ್ಯ, ಶುದ್ಧ ಕುಡಿಯುವ ನೀರು, ವಿದ್ಯುತ್, ಬೀದಿ ದ್ವೀಪ ನಿರ್ವಹಣಿ, ಅದ್ಯಕ್ಷ ಉಪಾಧ್ಯಕ್ಷರ ಗೌರವಧನ, ವಾಹನ ಬಾಡಿಗೆ, ಪೌರ…

ಮುಂದೆ ಓದಿ...

ಮಾರಕ ಕೊರೊನಾ ವೈರಸ್‍ನಿಂದ ತುಮಕೂರು ಸುರಕ್ಷಿತ

ತುಮಕೂರು :      ಮಾರಕ ಕೊರೊನಾ ವೈರಸ್ ನಿಂದ ತುಮಕೂರು ಸುರಕ್ಷಿತವಾಗಿದ್ದು ಸಾರ್ವಜನಿಕರು ಭಯ ಪಡಬೇಕಿಲ್ಲ ಆದರೆ ಎಚ್ಚರಿಕೆಯಿಂದ ಇರಬೇಕು ಎಂದು ಡಿಹೆಚ್ ಒ ಶಶಿಕಲಾ ಮನವಿ ಮಾಡಿದರು.        ಅವರು ಸಿದ್ಧಗಂಗಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗಾಗಿ ತೆರೆದಿರುವ ವಿಶೇಷ ಕೊಠಡಿಗೆ ಭೇಟಿ ನೀಡಿದ ನಂತರ ಮಾತನಾಡಿ ರಾಜ್ಯದಲ್ಲಿ ಬೆರಳಿಕೆಯಷ್ಟು ಪ್ರಕರಣಗಳಲ್ಲಿ ಮಾತ್ರ ಕೊರೊನಾ ವೈರಸ್ ಪತ್ತೆಯಾಗಿದ್ದು ನಮ್ಮ ಜಿಲ್ಲೆಗೆ ಕೊರೊನಾದಿಂದ ಸುರಕ್ಷಿತವಾಗಿದ್ದು ಒಂದುವೇಳೆ ಪತ್ತೆಯಾದಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.       ತುಮಕೂರಿನ ಸಿದ್ಧಗಂಗಾ ಆಸ್ಪತ್ರೆ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿದ್ದು ಒಂದುವೇಳೆ ಕೊರಾನಾ ಸೊಂಕಿತರು ಆಸ್ಪತ್ರೆಗೆ ದಾಖಲಾದರೆ ಅವರಿಗೆ ಚಿಕಿತ್ಸೆ ನೀಡಲೆಂದೇ ಐಸೋಲೇಟೆಡ್ ಘಟಕ ತೆರೆದಿರುವುದು ಆಸ್ಪತ್ರೆಯ ಜನತ ಮೇಲಿಟ್ಟಿರುವ ಕಾಳಜಿಯನ್ನ ತೋರಿಸುತ್ತದೆ ಎಂದರು.       ಸಿದ್ಧಗಂಗಾ ಆಸ್ಪತ್ರೆ ಎಂ.ಡಿ. ಡಾ.ಎಸ್.ಪರಮೇಶ್ ಮಾತನಾಡಿ…

ಮುಂದೆ ಓದಿ...

ಕೊರೋನಾ ಭೀತಿ : ಮಧುಗಿರಿ ದಂಡಿನ ಮಾರಮ್ಮ ಜಾತ್ರೆ ರದ್ದು!

ಮಧುಗಿರಿ:       ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ 19 ಸಾಂಕ್ರಾಮಿಕ ರೋಗವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮನ ಜಾತ್ರಾ ಮಹೋತ್ಸವವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಡಾ.ಕೆ.ನಂದಿನಿ ದೇವಿ ತಿಳಿಸಿದರು.       ಪಟ್ಟಣದ ಉಪವಿಭಾಗಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ನಡೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಸರಕಾರವು ಈಗಾಗಲೇ ಒಂದು ವಾರದವರೆವಿಗೂ ಎಲ್ಲಾ ರೀತಿಯ ಸಭೆ ಸಮಾರಂಭ ಜಾತ್ರೆ, ವಿವಾಹ ಮತ್ತಿತರ ಜನ ಸೇರುವ ಸಮಾರಂಭಗಳನ್ನು ರದ್ಧುಪಡಿಸುವಂತೆ ಆದೇಶಿಸಿದೆ. ಈ ಆದೇಶದ ಆನ್ವಯ 10 ದಿನಗಳ ಕಾಲ ನಡೆಯಬೇಕಾಗಿದ್ದ ಜಾತ್ರ ಮಹೋತ್ಸವನ್ನು ಹಾಗೂ ತಾಲ್ಲೂಕಿನಲ್ಲಿ ನಡೆಯುವ ಸಂತೆಗಳನ್ನು ಸಹ ರದ್ಧುಪಡಿಸಲಾಗಿದೆ.         ಆದರೆ ದಂಡಿನ ಮಾರಮ್ಮನ ಜಾತ್ರೆಯಲ್ಲಿ ಸಾವಿರಾರು ಜನ ಸೇರಿ ವಿಶೇಷವಾಗಿ ಆಚರಿಸುವ ಬೆಳ್ಳಿ…

ಮುಂದೆ ಓದಿ...