ಜಗಳವನ್ನು ಬಿಡಿಸಲು ಹೋದ ನಾದಿನಿಯ ಕೈ ಕತ್ತರಿಸಿದ ಭಾವ

 ಮಧುಗಿರಿ :        ಗಂಡ-ಹೆಂಡತಿ ಜಗಳವನ್ನು ಬಿಡಿಸಲು ಹೋದ ನಾದಿನಿಯ ಕೈ ಕತ್ತರಿಸಿದ ಘಟನೆ ಭಾನುವಾರ ಜರುಗಿದೆ.       ತಾಲ್ಲೂಕಿನ ಕಸಬಾ ಹೋಬಳಿಯ ಡಿ.ವಿ.ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಹನುಮಂತ (25) ತನ್ನ ಪತ್ನಿ ಅನಿತಾ (23) ಳೊಂದಿಗೆ ಜಗಳವಾಡಿ ಮಚ್ಚಿನಿಂದ ಹಲ್ಲೆಗೆ ಮುಂದಾದಾಗ ಅನಿತಾಳ ತಂಗಿ ಮೇಘನಾ (16) ತಡೆಯಲು ಮುಂದೆ ಬಂದಿದ್ದು, ಆವೇಶದಲ್ಲಿದ್ದ ಹನುಮಂತ ಬೀಸಿದ ಮಚ್ಚು ಅಡ್ಡ ಬಂದ ನಾದಿನಿಯ ಕೈ ತುಂಡರಿಸಿದ್ದು, ಆರೋಪಿ ಹನುಮಂತನನ್ನು ಮಧುಗಿರಿ ಪೊಲೀಸರು ಬಂಧಿಸಿದ್ದಾರೆ        ಬೆಂಗಳೂರಿನಲ್ಲಿ ನೆಲಸಿದ್ದ ಹನುಮಂತನ ಕುಟುಂಬದಲ್ಲಿ ಆಗಾಗ್ಗೆ ಗಲಾಟೆಗಳು ನಡೆಯುತ್ತಿದ್ದವೆಂದು ಹೇಳಲಾಗುತ್ತಿದ್ದು, ಬೆಂಗಳೂರಿನಲ್ಲಿಯೂ ಸಹಾ ಆರೋಪಿಯ ಮೇಲೆ ಪ್ರಕರಣ ಪ್ರಕರಣವೊಂದು ದಾಖಲಾಗಿತ್ತು ಎನ್ನಲಾಗಿದೆ.       ಹಲ್ಲೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಘಟನೆ ನಡೆದ ಕೇವಲ ಒಂದು ಘಂಟೆಯೊಳಗೆ ಪಿಎಸ್‍ಐ…

ಮುಂದೆ ಓದಿ...

ತುಮಕೂರು ಮಹಾನಗರ ಪಾಲಿಕೆ : ಕೋವಿಡ್-19 ಸಾರ್ವಜನಿಕರ ನಿಯಮ ಪಾಲಿಸಲು ಸೂಚನೆ

ತುಮಕೂರು :        ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕರ ಗಮನಕ್ಕೆ, ರಾಷ್ಟ್ರ ವ್ಯಾಪ್ತಿ ಹರಡಿರುವ ಕೋವಿಡ್-19 ಸೋಂಕು ರೋಗವನ್ನು ತಡೆಯುವ ಸಂಬಂಧ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 2020ರ ಮಾರ್ಚ್ 13ರಂದು ನಡೆದ ಸಭೆಯಲ್ಲಿ ನಿರ್ದೇಶಿಸಿರುವಂತೆ, ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇವರ ಆದೇಶದಲ್ಲಿ ಸೂಚಿಸಿರುವಂತೆ ಮತ್ತು ತುಮಕೂರು ಜಿಲ್ಲಾಧಿಕಾರಿಗಳು ನಿರ್ದೇಶಿಸಿರುವಂತೆ 2020ರ ಮಾರ್ಚ್ 14ರ ಮಧ್ಯರಾತ್ರಿಯಿಂದ ಒಂದು ವಾರಗಳ ಕಾಲ ಅತಿ ಹೆಚ್ಚು ಜನ ಸೇರುವ ಸಿನಿಮಾ ಮಂದಿರಗಳು, ಮಾಲ್‍ಗಳು, ನಾಟಕಗಳು, ರಂಗಮಂದಿರಗಳು, ಪಬ್‍ಗಳು, ನೈಟ್ ಕ್ಲಬ್‍ಗಳು, ವಸ್ತುಪ್ರದರ್ಶನಗಳು, ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು ಹಾಗೂ ಇತರೆ ಹೆಚ್ಚಾಗಿ ಜನ ಸೇರುವಂತಹ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ, ತುಮಕೂರು ಮಹಾನಗರ ಪಾಲಿಕೆಯ ಪೂರ್ವಾನುಮತಿ ಪಡೆಯದೇ ಯಾವುದೇ ಬೇಸಿಗೆ ಶಿಬಿರಗಳು, ಸಾರ್ವಜನಿಕ ಸಭೆ, ಸಮಾರಂಭಗಳು ಹಾಗೂ ಇತರೆ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.…

ಮುಂದೆ ಓದಿ...