ಕೊರೋನಾ ಭೀತಿ ಹಿನ್ನೆಲೆ ತುಮಕೂರು ಪಾಲಿಕೆಯಲ್ಲಿ ತುರ್ತುಸಭೆ

ತುಮಕೂರು :       ನಾವಿರುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕುಡಿಯುವ ನೀರು ಶುದ್ಧವಿರಬೇಕು. ವೈಯಕ್ತಿಕವಾಗಿ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಅಂದರೆ ಪದೇ ಪದೇ ಸಾಬೂನು ಬಳಸಿ ಕೈಗಳನ್ನು ತೊಳೆದುಕೊಳ್ಳಬೇಕು. ಅನವಶ್ಯಕವಾಗಿ ಪ್ರವಾಸ ಅಥವಾ ಹೊರಗೆ ಓಡಾಡುವುದನ್ನು ತಪ್ಪಿಸಬೇಕು- ಹೀಗೆ ಸಾರ್ವಜನಿಕರಿಗೆ ಹಲವು ಸಲಹೆಗಳನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಿಕಾ ನೀಡಿದ್ದಾರೆ.       ಮಾರಕ ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲು ತುಮಕೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮಂಗಳವಾರ ಬೆಳಗ್ಗೆ ಮೇಯರ್ ಫರೀದಾ ಬೇಗಂ ಅವರ ಅಧ್ಯಕ್ಷತೆಯಲ್ಲಿ ಏರ್ಪಟ್ಟಿದ್ದ ಪಾಲಿಕೆಯ ತುರ್ತುಸಭೆಯಲ್ಲಿ ಆಹ್ವಾನಿತರಾಗಿ ಅವರು ಮಾತನಾಡುತ್ತಿದ್ದರು.       ಕೊರೋನಾ ವೈರಸ್ ಹರಡುವ ಮೊದಲನೇ ಹಂತ, ಎರಡನೇ ಹಂತ ದಾಟಿ ಮೂರನೆಯ ಹಂತದಲ್ಲಿ ನಾವಿದ್ದೇವೆ. ವಿದೇಶದಿಂದ ಬಂದವರಿಂದ ಇದು ಹರಡುವ ಸಾಧ್ಯತೆ ಇರುವುದರಿಂದ, ವಿದೇಶ ಪ್ರಯಾಣ ಮಾಡಿಬಂದಿರುವವರ ಹಾಗೂ…

ಮುಂದೆ ಓದಿ...