ಚಿಕ್ಕನಾಯಕನಹಳ್ಳಿ : ಆಕಸ್ಮಿಕ ಬೆಂಕಿ ಅವಘಡ : ಸಾಮಗ್ರಿಗಳು ಭಸ್ಮ!

ಚಿಕ್ಕನಾಯಕನಹಳ್ಳಿ:       ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಮನೆಯ ಮಾರು ಹಾಗೂ ಮನೆಯಲ್ಲಿದ್ದ ಕೆಲವು ಸಾಮಗ್ರಿಗಳು ಸುಟ್ಟುಹೋದ ಘಟನೆ ಪಟ್ಟಣದ ಕಾಳಿದಾಸ ಬೀದಿಯಲ್ಲಿ ವರದಿಯಾಗಿದೆ.       ಪಟ್ಟಣದ ಕಾಳಿದಾಸ ಬೀದಿಯಲ್ಲಿ ವಾಸವಿರುವ ಭೀಮಯ್ಯ ಎಂಬುವರ ಹೆಂಚಿನ ಮನೆಗೆ ಸೋಮವಾರ ಮಧ್ಯಾಹ್ನ 12ಕ್ಕೆ ಕಾಣಿಸಿಕೊಂಡ ಬೆಂಕಿ ಸ್ವಲ್ಪ ಸಮಯದಲ್ಲಿಯೇ ಇಡೀ ಮನೆಗೆ ವ್ಯಾಪಿಸಿಕೊಂಡಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ ನೆರಹೊರೆಯವರು ತಕ್ಷಣ ಆಗ್ಮಿಶಾಮಕ ಠಾಣೆಗೆ ದೂರುನೀಡಿದ ಕಾರಣ ತಕ್ಷಣವೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವುದರಲ್ಲಿ ಯಶಸ್ವಿಯಾದರು. ಈ ಮನೆಯಲ್ಲಿ ಭೀಮಯ್ಯ್ ಹಾಗೂ ಶಾಂತಮ್ಮ ಸೇರಿ ನಾಲ್ಕುಮಂದಿ ವಾಸವಿದ್ದರು.       ಬೆಂಕಿ ಆಕಸ್ಮಿಕ ಸಂಭವಿಸಿದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಈ ಘಟನೆಯಲ್ಲಿ ಮನೆಯ ತೀರು, ಹೆಂಚು, ಮನೆಯಲ್ಲಿದ್ದ ಸುಮಾರು 2000ಕಾಯಿ, ಆಹಾರಪದಾರ್ಥಗಳು, ಮಂಚ, ದಿವಾನ್, ಬಟ್ಟೆಬರೆಗಳ ಜೊತೆಗೆ…

ಮುಂದೆ ಓದಿ...

ಎಲ್‍ಕೆಜಿ-ಯುಕೆಜಿಯನ್ನು ಅಂಗನವಾಡಿಗಳಲ್ಲೇ ಆರಂಭಿಸಲು ಆಗ್ರಹ

ತುಮಮಕೂರು :       ಅಂಗನವಾಡಿಗಳಲ್ಲಿ ಪೌಷ್ಠಿಕ ಆಹಾರ ದೊರೆಯುತ್ತಿದೆ. ಹೀಗಾಗಿ ಶಾಲಾಪೂರ್ವ ಶಿಕ್ಷಣವಾದ ಎಲ್‍ಕೆಜಿ, ಯುಕೆಜಿಯನ್ನು ಅಂಗನವಾಡಿಗಳಲ್ಲೇ ಆರಂಭಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಒತ್ತಾಯಿಸಿದರು.        ತುಮಕೂರಿನ ಗಾಂಧೀನಗರದಲ್ಲಿರುವ ಜನಚಳವಳಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅಂಗವಾಡಿಗಳಲ್ಲಿ ಶಾಲಾ ಪೂರ್ವ ಶಿಕ್ಷಣ ಆರಂಭಿಸುವ ಸಾಧಕ-ಬಾಧಕಗಳ ಕುರಿತ ಸಮಾಲೋಚನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.       ಅಂಗನವಾಡಿಗಳಲ್ಲಿ ಮಕ್ಕಳ ಲಾಲನೆ-ಪಾಲನೆಯ ಜೊತೆಯಲ್ಲಿ ಶಾಲಾಪೂರ್ವ ಶಿಕ್ಷಣ ನೀಡಿದರೆ ಕಲಿಕೆ ಉತ್ತಮವಾಗಿರುತ್ತದೆ. ಈಗಾಗಲೇ ಅಂಗನವಾಡಿಗಳಲ್ಲಿ ಬೋಧಿಸಲು ಪಠ್ಯವೂ ಇದೆ. ಅಂಗನವಾಡಿಗಳಲ್ಲಿ ಮಕ್ಕಳಿಗೆ ವಿಟಮಿನ್, ಪ್ರೋಟೀನ್ ಅಂಶವುಳ್ಳ ಆಹಾರ ನೀಡಲಾಗುತ್ತಿದೆ. ಆರೋಗ್ಯದ ಕಡೆಯು ಗಮನ ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಕ್ಕಳ ಹಾರೈಕೆಯು ಮುಖ್ಯವಾಗಿದೆ ಎಂದು ಹೇಳಿದರು.       ಪ್ರತಿಯೊಬ್ಬ ಮಗುವಿಗೂ ಸಾಮಾಜಿಕರಣದ ಶಿಕ್ಷಣ ಸಿಗಬೇಕು. ಸಮಾಜದಲ್ಲಿ ಮತ್ತು…

ಮುಂದೆ ಓದಿ...

25 ಅರಣ್ಯ ಸಿಬ್ಬಂದಿಗಳಿಂದ ಕಾರ್ಯಾಚರಣೆ : ಚಿರತೆ ಸೆರೆ

ತುಮಕೂರು:       ತಾಲ್ಲೂಕಿನ ಕಸಬಾ ಹೋಬಳಿ ಆಲನೂರು ಗ್ರಾಮ ಆಚಾರಪಾಳ್ಯ ರಸ್ತೆ, ಹೇಮಾವತಿ ಚಾನಲ್ ಟನಲ್‍ನಲ್ಲಿ ಅಡಗಿದ್ದ ಚಿರತೆಯನ್ನು ಇಂದು ಅರಣ್ಯ ಇಲಾಖೆಯ 25ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದ್ದಾರೆ.        ಡಾ: ಸನ್ನತ್ ಅವರ ಮುಂದಾಳತ್ವದಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಸೆರೆ ಹಿಡಿದ ಚಿರತೆಯು ನರಭಕ್ಷಕ ಚಿರತೆಯಾಗಿರುವ ಸಾಧ್ಯತೆ ಹೆಚ್ಚಾಗಿದೆ. ಚಿರತೆಯನ್ನು ಸೆರೆ ಹಿಡಿದ ಸ್ಥಳವು ಮಾನವ ಹತ್ಯೆ ಸಂಭವಿಸಿದ ಸ್ಥಳದಿಂದ ಸುಮಾರು 10 ರಿಂದ 12 ಕಿ.ಮೀ. ದೂರದಲ್ಲಿದ್ದು, ಸಾರ್ವಜನಿಕ ಮಾಹಿತಿ ಹಾಗೂ ಕ್ಯಾಮೆರಾ ಟ್ರಾಪ್‍ಗಳಲ್ಲಿ ಸೆರೆಯಾಗಿರುವ ಛಾಯಾಚಿತ್ರಗಳ ಆಧಾರದ ಮೇಲೆ ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಚಿರತೆಗಳು ಇರುವುದು ತಿಳಿದು ಬಂದಿದೆ.       ಶಂಕಿತ ನರಭಕ್ಷಕ ಚಿರತೆಗಳನ್ನು…

ಮುಂದೆ ಓದಿ...

ಕೊವಿಡ್-19 3ನೇ ಹಂತದ ಹರಡುವಿಕೆಯನ್ನು ತಡೆಯಲು ಸಚಿವರ ಸೂಚನೆ

ತುಮಕೂರು:        ಕೊವಿಡ್-19 3ನೇ ಹಂತದ ಹರಡುವಿಕೆಯು ಬಹಳ ತೀವ್ರ ಮತ್ತು ವ್ಯಾಪ್ತಿಯನ್ನು ವೇಗವಾಗಿ ಕ್ರಮಿಸುವುದನ್ನು ತಡೆಯಲು ಎಲ್ಲಾ ರೀತಿಯಲ್ಲೂ ಮುಂಜಾಗ್ರತಾ ಕ್ರಮವಹಿಸಬೇಕೆಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.       ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೊವಿಡ್-19 ಕುರಿತಂತೆ ನಡೆದ ಮುಂಜಾಗ್ರತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಸೋಂಕಿತ ವ್ಯಕ್ತಿಗೆ ಪ್ರಥಮ ಹಂತದಲ್ಲಿ ಸಮೀಪವಿರುವ ಕುಟುಂಬಸ್ಥರು, ಬಂಧುಗಳು ಹಾಗೂ 2ನೇ ಹಂತದಲ್ಲಿ ಅವರ ನಿಕಟವರ್ತಿಗಳಿಗೆ ಹರಡುವ ಸಾಧ್ಯತೆಯಿದ್ದು, 3ನೇ ಹಂತದಲ್ಲಿ ಅವರು ಓಡಾಡಿರುವ, ಸಂಪರ್ಕದಲ್ಲಿರುವ ಎಲ್ಲಾ ಪ್ರದೇಶಗಳ ವ್ಯಕ್ತಿಗಳಿಗೆ ತೀವ್ರವಾಗಿ ಹಾಗೂ ವಿಶಾಲವ್ಯಾಪ್ತಿಯಲ್ಲಿ ಸೋಂಕು ಹರಡುವುದರಿಂದ ಮಾರ್ಚ್ 31 ರವರೆಗೆ ತೀವ್ರ ನಿಗಾವಹಿಸಬೇಕೆಂದು ಅವರು ಸೂಚನೆ ನೀಡಿದರು. ಪ್ರತಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಐಸೋಲೇಷನ್ ಬೆಡ್‍ಗಳ ರೂಂಗಳನ್ನು…

ಮುಂದೆ ಓದಿ...