ಕೊರಟಗೆರೆ-ಗೌರಿಬಿದನೂರು ಗಡಿ ಭಾಗದಲ್ಲಿ ಕೊರೋನಾ ಚೆಕ್ ಪೋಸ್ಟ್!!

ಕೊರಟಗೆರೆ :       ಕೊರಟಗೆರೆ ಗಡಿ ಭಾಗದ ಗೌರಿಬಿದನೂರು ತಾಲ್ಲೂಕಿನಲ್ಲಿ ಎರಡು ಸೋಂಕಿತ ಕೊರೊನಾ ಪತ್ತೆಯಾದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಕೊರಟಗೆರೆ ಗಡಿಭಾಗದ ಅರಸಾಪುರ ಬಳಿಯ ಕಾಶಾಪುರ ಗೇಟ್‍ನ ಬಳಿ ಚೆಕ್‍ಪೋಸ್ಟ್ ನಿರ್ಮಿಸಿ ಕೊರಟಗೆರೆ ಭಾಗದ ಕಡೆ ಬರುವ ಎಲ್ಲಾ ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.       ಇತ್ತೀಚೆಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದು, ಕೊರೊನಾ ವೈರಸ್ ಮಹಾಮಾರಿಗೆ ಭಯ ಪಡುತ್ತಿರುವ ಸಂದರ್ಭದಲ್ಲಿ ಕೊರಟಗೆರೆ ಗಡಿಭಾಗದ ಗೌರಿಬಿದನೂರು ತಾಲ್ಲೂಕಿನಲ್ಲಿ ಕೊರೋನಾ ಸೋಂಕಿತರು ಪತ್ತೆಯಾದ ಕಾರಣ ತಾಲ್ಲೂಕಿನಲ್ಲೂ ಭಯದ ವಾತಾವರಣ ಸೃಷ್ಟಿಯಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಗೌರಿಬಿದನೂರು ಭಾಗದ ಕಡೆಯಿಂದ ಬರುವಂತಹ ಎಲ್ಲರನ್ನು ಚೆಕ್‍ಪೋಸ್ಟ್‍ನಲ್ಲಿ ಪರೀಕ್ಷೆಗೊಳಪಡಿಸಲಾಗುತ್ತಿದೆ.       ಕೊರೊನಾ ಮಾಹಾಮಾರಿಗೆ ಇಡಿ ರಾಜ್ಯವೇ ಭಯಪಡುತ್ತಿರುವಂತಹ ಸಂದರ್ಭದಲ್ಲಿ ಕೊರಟಗೆರೆ ಗಡಿಭಾಗ ಗೌರಿಬಿದನೂರಿನಲ್ಲಿ ಕೊರೊನಾ ಸೋಂಕಿತ ಪತ್ತೆಯಾದ ಹಿನ್ನೆಲೆಯಲ್ಲಿ ಗೌರಿಬಿದನೂರು ಭಾಗದಿಂದ ಕೊರಟಗೆರೆ ತಾಲ್ಲೂಕಿಗೆ…

ಮುಂದೆ ಓದಿ...

ತುಮಕೂರು : ಪಾಲಿಕೆ ಸಿಬ್ಬಂದಿಗೆ ಮಾಸ್ಕ್ ವಿತರಿಸಲು ಒತ್ತಾಯ!!!

ತುಮಕೂರು :       ಮೂರನೇ ಹಂತದ ಕೋರೋನಾ ವೈರಸ್ ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 144 ಸೆಕ್ಷನ್ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಸೋಮವಾರ ಕರೆದಿದ್ದ ತುಮಕೂರು ನಗರಪಾಲಿಕೆ ನಗರ ಯೋಜನೆ ಮತ್ತು ಸುಧಾರಣಾ ಸ್ಥಾಯಿ ಸಮಿತಿ ಸಭೆಯನ್ನು ಮುಂದೂಡಲಾಯಿತು.       ನಗರ ಯೋಜನೆ ಮತ್ತು ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಮಲ್ಲಿಕಾರ್ಜುನ್ಯ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿ ಎಲ್ಲಡೆ ಕೋರೋನ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರಪಾಲಿಕೆಯ ಸುಮಾರು 400 ಜನ ಸಿಬ್ಬಂದಿ ಹಾಗೂ 400 ಜನ ಪೌರಕಾರ್ಮಿಕರು ಸೇರಿದಂತೆ 800 ಜನರಿಗೆ ಪಾಲಿಕೆ ವತಿಯಿಂದ ಎನ್.91 ಮಾಸ್ಕ್ ಮತ್ತು ಅಗತ್ಯ ಮುಂಜಾಗ್ರತಾ ಸಲಕರಣೆಗಳನ್ನು ವಿತರಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಒತ್ತಾಯಿಸಿದರು.       ಕೋರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರಪಾಲಿಕೆ ಪಿ.ಕೆ.ಎಸ್.ಗಳು ಹಗಲಿರುಳೆನ್ನದೆ ಸ್ವಚ್ಚತೆಯಲ್ಲಿ ತೊಡಗಿದ್ದಾರೆ.ಅವರು ಮತ್ತಷ್ಟು ಹುರುಪಿನಿಂದ ಕೆಲಸ ಮಾಡುವಂತೆ…

ಮುಂದೆ ಓದಿ...

ಸರ್ಕಾರದ ಬೆಂಬಲ ಬೆಲೆಗೆ ಮುಗಿಬಿದ್ದು ರೈತರ ರಾಗಿ ಮಾರಾಟ!

ಚಿಕ್ಕನಾಯಕನಹಳ್ಳಿ :       ರಾಗಿ ಖರೀದಿ ಕೇಂದ್ರದ ಮುಂದೆ ಸರತಿಯಲ್ಲಿ ನಿಂತು ಸರ್ಕಾರದ ಬೆಂಬಲಬೆಲೆಗೆ ರಾಗಿಯನ್ನು ರೈತರು ಮುಗಿಬಿದ್ದು ಮಾರಾಟ ಮಾಡುತ್ತಿದ್ದಾರೆ.       ತಾಲ್ಲೂಕು ಅತಿ ಹೆಚ್ಚು ರಾಗಿಬೆಳೆ ಬೆಳೆಯಲಾಗುತ್ತಿದೆ. ಕಳೆದ ವರ್ಷ ಉತ್ತಮ ಮಳೆಗಾಲ ಆದಕಾರಣ ಬಂಪರ್‍ಬೆಳೆಯನ್ನು ರೈತರು ನಿರೀಕ್ಷಿಸಿದ್ದರು ಆದರೆ . ಕೆಲವಡೆ ಅತಿಹೆಚ್ಚು ಮಳೆಯಾದಕಾರಣ ಉತ್ತಮವಾಗಿ ಬೆಳೆದುನಿಂತ ರಾಗಿಯ ಮೇಲೆ ತೀವ್ರ ಪರಿಣಾಮ ಬೀರಿತು, ಮತ್ತೆ ಕೆಲವಡೆ ಹೊಲದಲ್ಲಿ ಕೊಯ್ದರಾಗಿಗಳು ಅಲ್ಲೆ ಮಣ್ಣುಪಾಲಾದಾರೂ ಒಟ್ಟಾರೆ ತಾಲ್ಲೂಕಿನಲ್ಲಿ ಬೆಳೆದ ರೈತರಿಗೆ ಆನ್ಯಾಯವೆಸಗದೆ ಉತ್ತಮ ಇಳುವರಿ ದೊರೆತಿದೆ. ಆದರೆ ಈಗಿನ ರೈತರ ಶ್ರಮ ಹಾಗೂ ಖರ್ಚಿನ ದೃಷ್ಠಿಯಿಂದ ನೋಡಿದರೆ ರಾಗಿ ಬೆಳೆಯುವ ಸಣ್ಣ ಹಾಗೂ ಮಧ್ಯಮವರ್ಗದ ರೈತರಿಗೆ ಲಾಭದಾಯಕವಂತೂ ಅಲ್ಲ. ಮುಂದಿನ ದಿನಗಳಲ್ಲಿ ಮನೆಯಲ್ಲಿರುವ ರಾಸುಗಳ ಮೇವಿನ ಸಮಸ್ಯೆ ನೀಗಲಿದೆ ಎಂಬ ಸಮಾಧಾನ ರೈತರಿಗಿದೆ.       ಕಳೆದ…

ಮುಂದೆ ಓದಿ...

ತುಮಕೂರಿನಲ್ಲಿ ಇದುವರೆಗೂ ಕಂಡುಬರದ ಕೊರೋನಾ ವೈರಸ್ ಪಾಸಿಟಿವ್!!

ತುಮಕೂರು:       ತುಮಕೂರು ಜಿಲ್ಲೆಗೆ ವಿವಿಧ ದೇಶಗಳಿಂದ ಬಂದಿರುವಂತಹ 277 ಜನರನ್ನು ಕೊರೊನಾ ತಪಾಸಣೆಗೊಳಪಡಿಸಿ, ಅವರೆಲ್ಲರೂ ತೀವ್ರ ನಿಗಾವಣೆಯಲ್ಲಿ ವೈದ್ಯರ ಸಂಪರ್ಕದಲ್ಲಿದ್ದಾರೆ. ಜಿಲ್ಲೆಯಲ್ಲಿ ಇದುವರೆವಿಗೂ ಯಾವುದೇ ಕೊರೋನಾ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲವೆಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್ ತಿಳಿಸಿದರು.       ಅವರು ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಕರೆಯಲಾಗಿದ್ದ ಕೊರೊನಾ ಸೋಂಕು ತಡೆಯುವ ಮುಂಜಾಗ್ರತಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಆರೋಗ್ಯ ಇಲಾಖೆಯವರು ಹೊರಡಿಸಿರುವ “ನಿಮ್ಮನ್ನು ಮತ್ತು ಇತರರನ್ನು ರಕ್ಷಿಸಿ” ಎಂಬ ಕರ ಪತ್ರದೊಂದಿಗೆ ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ ನೀಡಿ ಕೊರೋನಾ ಸೋಂಕಿನ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದ್ದು, ಪಾಲಿಕೆ ಹಾಗೂ ನಗರ ಸ್ಥಳೀಯ ವ್ಯಾಪ್ತಿಯಲ್ಲಿ ಮನೆಮನೆಗೆ ತೆರಳಿ ಕೊರೋನಾ ನಿಯಂತ್ರಣ ಮುಂಜಾಗ್ರತಾ ಕ್ರಮಗಳ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.…

ಮುಂದೆ ಓದಿ...