ಕೊರೋನಾ ಭೀತಿ ಹಿನ್ನೆಲೆ ಸಿದ್ದಗಂಗಾ ಮಠದಲ್ಲಿ ಭಕ್ತರಿಗೆ ನಿರ್ಬಂಧ

ತುಮಕೂರು :       ವಿಶ್ವದಾದ್ಯಂತ ಕಾಡುತ್ತಿರುವ ಕೊರೊನಾ ವೈರಾಣು ಸೋಂಕಿನ ವಿರುದ್ಧ ದೇಶ ಮತ್ತು ನಾಡಿನ ಜನತೆ ಹೋರಾಟ ನಡೆಸಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕರೆ ನೀಡಿದ್ದಾರೆ.       ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದ ಜನತಾ ಕಫ್ರ್ಯೂನಂತೆ ಪ್ರತಿಯೊಬ್ಬರೂ ಸ್ವಯಂ ನಿಯಂತ್ರಣ ಹೇರಿಕೊಂಡು ಸುಮಾರು 15 ದಿನಗಳ ಕಾಲ ಮನೆಯಿಂದ ಹೊರಗೆ ಬಾರದೆ ಈ ಸೋಂಕು ಹರಡದಂತೆ ನಿಯಂತ್ರಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಪ್ರತಿಯೊಬ್ಬರೂ ಮನೆಯಲ್ಲೇ ಇದ್ದು, ಈ ಮಹಾಮಾರಿಯನ್ನು ದೇಶದಿಂದ ಓಡಿಸಲು ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರು.   ಭಕ್ತರಿಗೆ ನಿರ್ಬಂಧ:       ರಾಜ್ಯದಲ್ಲಿ ಕೊರೊನಾ ಸೋಂಕು ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದರು.…

ಮುಂದೆ ಓದಿ...

ಲಾಕ್‍ಡೌನ್ ಪ್ರಯುಕ್ತ ಮಹಾನಗರಪಾಲಿಕೆ ದಿಟ್ಟ ನಿರ್ಧಾರ!!

ತುಮಕೂರು  :       ಕೋವಿಡ್-19 ಸೋಂಕು ರೋಗವನ್ನು ತಡೆಯುವ ಸಲುವಾಗಿ ಮಾರ್ಚ್ 31ರವರೆಗೆ ಲಾಕ್‍ಡೌನ್ ಮಾಡಲಾಗಿದ್ದು, ಮಹಾನಗರಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು/ಉದ್ದಿಮೆದಾರರು ಈ ಕೆಳಕಂಡ ನಿರ್ಧಾರವನ್ನು ಪಾಲಿಸಬೇಕೆಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ. ಮುಚ್ಚುವುದು:-       ಟೈರ್ ಅಂಗಡಿ, ಮೆಕಾನಿಕಲ್ ಮತ್ತು ಇತರೆ ವರ್ಕ್ ಶಾಪ್, ಆಕ್ಸಸರೀಸ್, ಕಬ್ಬಿಣ ಹಾಗೂ ಸ್ಕ್ರಾಪ್ ವ್ಯಾಪಾರದ ಅಂಗಡಿ, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಸಾಮಾಗ್ರಿಗೆಗಳ ಮಾರಾಟ ಮಳಿಗೆ, ಜವಳಿ ಮಳಿಗೆ, ಚಪ್ಪಲಿ ಮತ್ತು ಫ್ಯಾನ್ಸಿ ಸ್ಟೋರ್, ಚಿನ್ನಾಭರಣ ಮತ್ತು ಗಿರವಿ ಅಂಗಡಿ, ಹೋಮ್ ಅಪ್ಲೈನ್ಸಸ್ ಮತ್ತು ಎಲೆಕ್ಟ್ರಾನಿಕ್ಸ್ ಅಂಗಡಿ, ಜಿಮ್ ಮತ್ತು ವ್ಯಾಯಾಮ ಕೇಂದ್ರ, ಕೋಚಿಂಗ್ ಸೆಂಟರ್, ಸಾರ್ವಜನಿಕ ಸಾರಿಗೆ ವ್ಯವಸ್ಥೆ(ಬಸ್, ಆಟೋ, ಟ್ಯಾಕ್ಸಿ), ಟೀ ಮತ್ತು ಚಾಟ್ಸ್ ಅಂಗಡಿ, ತಳ್ಳುವ ಗಾಡಿ ಮೇಲೆ ಮಾರಾಟ ಮಾಡುವ ಆಹಾರ ಪದಾರ್ಥಗಳು ಹಾಗೂ ಹಣ್ಣಿನ ಗಾಡಿಗಳು ಮತ್ತು…

ಮುಂದೆ ಓದಿ...