ಚನ್ನಿಗಪ್ಪನಪಾಳ್ಯದ ಕೆರೆ ಬಳಿ ಗಂಡು ಚಿರತೆ ಸೆರೆ!!

ತುಮಕೂರು :       ಜಿಲ್ಲೆಯ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಅರಿಯೂರು ಗ್ರಾಮಪಂಚಾಯತಿ ವ್ಯಾಪ್ತಿಯ ಚನ್ನಿಗಪ್ಪನಪಾಳ್ಯದ ಕೆರೆ ಬಳಿ ನಾಲ್ಕೈದು ದಿನಗಳಿಂದ ಪ್ರತ್ಯಕ್ಷವಾಗಿ ಸಾರ್ವಜನಿಕರಿಗೆ ಭೀತಿ ಹುಟ್ಟಿಸಿ ಸಾಕು ಪ್ರಾಣಿಗಳನ್ನು ಭಕ್ಷಿಸುತ್ತಿದ್ದ ಸುಮಾರು 2 ವರ್ಷದ ಗಂಡು ಚಿರತೆಯನ್ನು ತುಮಕೂರು ವಲಯದ ಅರಣ್ಯ ಸಿಬ್ಬಂದಿಗಳು ಇಂದು ಕಾರ್ಯಾಚರಣೆ ನಡೆಸಿ ಬೋನಿನಲ್ಲಿ ಸೆರೆ ಹಿಡಿದಿದ್ದಾರೆ.       ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ತುಮಕೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದ್ದಾರೆ.

ಮುಂದೆ ಓದಿ...

ಕೊರೋನಾ ವೈರಸ್ ಹೊಡೆದೋಡಿಸಲು ಸ್ವಯಂಪ್ರೇರಿತರಾದ ನಾಗರಿಕ ಸಮಿತಿ!

ತುಮಕೂರು:       ಕೊರೋನಾ ವೈರಸ್(ಕೋವಿಡ್-19)ನಿಂದ ದೇಶ-ವಿದೇಶಗಳಲ್ಲಿ ಭಯಂಕರ ಸಾವು-ನೋವುಗಳು ಸಂಭವಿಸುತ್ತಿರುವುದರಿಂದ ತುಮಕೂರು ನಗರದ ಶ್ರೀನಗರ-ಬಂಡೇಪಾಳ್ಯ ಬಡಾವಣೆಯ ನಾಗರಿಕರೆಲ್ಲ ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕರೋನ ವೈರಸ್ ಅನ್ನು ಹೊಡೆದೋಡಿಸುವ ಪಣ ತೊಟ್ಟಿದ್ದಾರೆ.        ಸುತ್ತೆಲ್ಲ ದೇಶಗಳಲ್ಲಿ ಮಹಾಮಾರಿ ಕೋವಿಡ್-19 ವೈರಾಣು ತನ್ನ ಕಬಂಧ ಬಾಹುಗಳಿಂದ ಅಸಂಖ್ಯಾತ ಜನರ ಜೀವವನ್ನು ಬಲಿತೆಗೆದುಕೊಳ್ಳುತ್ತಿರುವುದನ್ನು ಕಂಡು ಎಚ್ಚೆತ್ತ ಶ್ರೀನಗರ ನಾಗರೀಕ ಕ್ಷೇಮಾಭಿವೃದ್ಧಿ ಸಮಿತಿಯು ಸ್ಥಳೀಯ ನಾಗರಿಕರೊಂದಿಗೆ ಸಮಾಲೋಚಿಸಿ ಕೆಲವು ನಿರ್ಧಾರಗಳನ್ನು ಕೈಗೊಂಡು ಕಾರ್ಯೋನ್ಮುಖವಾಗಿದೆ. ಮುಖ್ಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರಿಂದ ಈ ಮಹಾಮಾರಿ ರೋಗವನ್ನು ತೊಲಗಿಸಬಹುದೆಂದು ಸ್ಥಳೀಯರೆಲ್ಲ ತಮಗೆ ತಾವೇ ನಿರ್ಬಂಧಗಳನ್ನು ಹಾಕಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ನಾಳೆ ಬನ್ನಿ :       ಕೊರೋನಾ ವೈರಸ್‍ನಿಂದ ಪಾರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳವುದೇ ಉತ್ತಮ ಮಾರ್ಗೋಪಾಯವೆಂದು ಮಾನ್ಯ ಪ್ರಧಾನಿಗಳು ಮಾರ್ಚ್ 24ರ ಮಧ್ಯರಾತ್ರಿಯಿಂದ ದೇಶದಾದ್ಯಂತ ಲಾಕ್‍ಡೌನ್…

ಮುಂದೆ ಓದಿ...

ತುಮಕೂರು : ಅಭದ್ರತೆಯಲ್ಲಿ ಪೊಲೀಸರ ತಪಾಸಣೆ!!

ತುಮಕೂರು :       ಜಿಲ್ಲೆಯಲ್ಲಿ ಕರೋನ ಮಹಾಮಾರಿಗೆ ಮೊದಲ ಬಲಿಯಾದ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯಾದ್ಯಂತ ಹೆಚ್ಚಿನ ಭದ್ರತೆಯನ್ನ ಮಾಡಿದ್ದು, ತುಮಕೂರು ನಗರ ಸೇರಿದಂತೆ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ವ್ಯಾಪಕವಾದ ಭದ್ರತೆ ಹಾಗೂ ಗಸ್ತನ್ನು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂಧಿ ನಿರ್ವಹಿಸುತ್ತಿದ್ದು, ಹೆದ್ದಾರಿಗಳ ಭದ್ರತೆ ಮತ್ತು ವಿನಾಕಾರಣ ಜನತೆ ರಸ್ತೆಗಿಳಿಯುವುದನ್ನ ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಬ್ಯಾರಿಕೇಡ್‍ಗಳನ್ನ ಹಾಕಿ ಖುದ್ದು ಪಿಎಸ್‍ಐಗಳೇ ರಸ್ತೆಯಲ್ಲಿ ನಿಂತು ರಸ್ತೆಗಿಳಿದ ಸಾರ್ವಜನಿಕರ ತಪಾಸಣೆಗಿಳಿದಿರುವುದನ್ನ ಗಮನಿಸಿದರೆ, ಕೊರೊನಾ ಮಹಾಮಾರಿಯ ಭೀಬತ್ಸತೆಯನ್ನ ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಬಹುಮುಖ್ಯ ಎನ್ನುವ ನಿರ್ಧಾರಕ್ಕೆ ಜಿಲ್ಲಾ ಪೊಲೀಸರು ಬಂದಿರುವಂತಿದೆ.       ರಾಷ್ಟ್ರೀಯ ಹೆದ್ದಾರಿಗಳು ಮತ್ತು ಹೊರಜಿಲ್ಲೆಯ ಗಡಿ ಹಾಗೂ ಅಂತರಾಜ್ಯ ಗಡಿಗಳನ್ನ ಗಡಿಯ ಮುಖೇನ ಅಂತರಾಜ್ಯ ಹಾಗೂ ಹೊರಜಿಲ್ಲೆಯ ಜನತೆ ಜಿಲ್ಲೆಯೊಳಗೆ ನುಸುಳದಂತೆ ಜಾಗೃತಿ ವಹಿಸುವುದು ಒಂದೆಡೆಯಾದರೆ ತುಮಕೂರು ನಗರದ ಹಾಗೂ…

ಮುಂದೆ ಓದಿ...

52 ಲಕ್ಷ ಮೌಲ್ಯದ ಚಿನ್ನಾಬರಣ ಕಳ್ಳತನ ಮಾಡಿದ ಕಳ್ಳನ ಬಂದನ!!

 ತುಮಕೂರು :       ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುಖ್ಯಾತ ಕಾರುಗಳ್ಳರ ಬಂಧನವಾಗಿದೆ.       ಇತ್ತೀಚಿನ ದಿನಗಳಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕು ಅಮೃತೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಕಾರಿನಲ್ಲಿದ್ದ ಚಿನ್ನಾಭರಣ, ಲ್ಯಾಪ್ ಟಾಪ್, ಮೊಬೈಲ್ಗಳು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಮಾಲುಗಳನ್ನ ಕಳ್ಳತನ ಮಾಡಲಾಗಿತ್ತು. ಸದರಿ ವಿಚಾರವಾಗಿ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸರಿಯಷ್ಟೇ. ಇದಕ್ಕಾಗಿ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಶೇಷ ತಂಡವನ್ನ ರಚಿಸಿದ್ದು, ಆ ತಂಡವು ಸದರಿ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿದೆ.         ವಿಶೇಷ ತಂಡದ ಜಾಲದಲ್ಲಿ ಸಿಲುಕಿದ್ದ ಸದರಿ ಪ್ರಕರಣದ ಆರೋಪಿ ಲೊಕೇಶ್.ಬಿ.ಪಿ ಆಲಿಯಾಸ್ ಲೋಕಿ ಆಲಿಯಾಸ್ ಜಗ್ಗುದಾದ(41) ವೃತ್ತಿಯಲ್ಲಿ ಡ್ರೈವರ್ ಕೆಲಸ ಮಾಡುತ್ತಿದ್ದ. ಈತನು ಈ ಪ್ರಕರಣದ…

ಮುಂದೆ ಓದಿ...