ತುಮಕೂರು : ಜಿಲ್ಲೆಯಲ್ಲಿ 135 ಮಾದರಿ ನೆಗೆಟಿವ್!!

ತುಮಕೂರು :       ಕೊವೀಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಗೆ ಬಂದಿರುವ 480 ಮಂದಿಯನ್ನು ತೀವ್ರ ನಿಗಾವಣೆಯಲ್ಲಿಡಲಾಗಿದ್ದು, ಈ ಪೈಕಿ 303 ಮಂದಿಯನ್ನು ಹೋಂ ಕ್ವಾರೆಂಟೈನ್‍ನಲ್ಲಿ ಇರಿಸಲಾಗಿದೆ.       ಅವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದೆಂದು ಸೂಚಿಸಲಾಗಿದೆ. ಒಟ್ಟು 92 ಮಂದಿಯನ್ನು ಐಸೋಲೇಷನ್‍ನಲ್ಲಿ ಇಡಲಾಗಿದ್ದು, 67 ಜನರ 28 ದಿನಗಳ ಹೋಂ ಕ್ವಾರೆಂಟೈನ್ ಅವಧಿ ಪೂರ್ಣಗೊಂಡಿದೆ. ಈವರೆವಿಗೂ 140 ಜನರ ಗಂಟಲುಸ್ರಾವ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೊಳಪಡಿಸಿದ್ದು, ಆ ಪೈಕಿ 135 ಮಾದರಿಗಳು ನೆಗೆಟಿವ್ ಎಂದು ದೃಢಪಟ್ಟಿದೆ.       2 ಪ್ರಕರಣಗಳು ಪಾಸಿಟಿವ್ ಬಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ. 3 ಮಾದರಿಗಳು ತಿರಸ್ಕøತಗೊಂಡಿವೆ ಎಂದು ಡಿಹೆಚ್‍ಓ ಡಾ: ಚಂದ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದೆ ಓದಿ...

ಜಿಪಂ ಸದಸ್ಯರಿಂದ 3 ಸಾವಿರ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ!!

ಕೊರಟಗೆರೆ:       ಕೊರೊನಾ ವೈರೇಸ್ ಹರಡುವಿಕೆ ತಡೆಯಲು ಪ್ರತಿನಿತ್ಯ ಸೈನಿಕರಂತೆ ಕೆಲಸ ಮಾಡುತ್ತೀರುವ ಕೋಳಾಲ ಜಿಪಂ ಕ್ಷೇತ್ರದ ಆಸ್ಪತ್ರೆ, ಪೊಲೀಸ್, ಗ್ರಾಪಂ ಮತ್ತು ಆಶಾ ಕಾರ್ಯಕರ್ತೆಯರಿಗೆ ಉಚಿತವಾಗಿ 3 ಸಾವಿರ ಸಾನಿಟೈಸರ್ ಮತ್ತು ಮಾಸ್ಕ್ ವಿತರಣೆ ಮಾಡಲಾಗಿದೆ ಎಂದು ಕೋಳಾಲ ಜಿಪಂ ಸದಸ್ಯ ಶಿವರಾಮಯ್ಯ ತಿಳಿಸಿದರು.       ತಾಲೂಕಿನ ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಕರ್ತವ್ಯನಿರತ ಕೊರೊನಾ ಸೈನಿಕರಿಗೆ ಉಚಿತವಾಗಿ ಇತ್ತೀಚಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಿದ ವೇಳೆ ಮಾತನಾಡಿದರು.       ಕೋಳಾಲ ಜಿಪಂ ಕ್ಷೇತ್ರದಲ್ಲಿ ಕೊರೊನಾ ಸೈನಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಿದ್ದೇನೆ. ನನ್ನ ಮತಕ್ಷೇತ್ರದ ಪ್ರತಿಮನೆಯ ಸದಸ್ಯರಿಗೂ ಉಚಿತವಾಗಿ 30ಸಾವಿರ ಮಾಸ್ಕ್ ಮತ್ತು ಸ್ಯಾನಿಟೈಸರ್ ಅವರ ಮನೆಯ ಬಳಿಯೇ ಹೋಗಿ ವಿತರಣೆ ಮಾಡುತ್ತೇನೆ. ಈಗಾಗಲೇ ಜನಸಂಖ್ಯೆಯ ಅಂಕಿಅಂಶ ಕಳೆಹಾಕಿದ್ದೇನೆ ನಮ್ಮ ಕ್ಷೇತ್ರದ…

ಮುಂದೆ ಓದಿ...

ತುಮಕೂರು : ಹಾಪ್‍ಕಾಮ್ಸ್ ಮೂಲಕ ರೈತರ ಹಣ್ಣು-ತರಕಾರಿಗಳ ಮಾರಾಟ!!

ತುಮಕೂರು :       ತುಮಕೂರು ಜಿಲ್ಲೆಯಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‍ಡೌನ್ ಇರುವುದರಿಂದ ಜಿಲ್ಲೆಯ ರೈತರು ಬೆಳೆದಿರುವ ಕಲ್ಲಂಗಡಿ, ಕರಬೂಜ, ಟಮೋಟೋ ಹಾಗೂ ಪಪ್ಪಾಯ ಹಣ್ಣುಗಳನ್ನು ಹಾಪ್‍ಕಾಮ್ಸ್ ಹಾಗೂ ವ್ಯಾಪಾರಸ್ಥರನ್ನು ಲಿಂಕ್ ಮಾಡುವ ಮೂಲಕ ಖರೀದಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ತಿಳಿಸಿದ್ದಾರೆ.       ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಾ, ಇದಕ್ಕಾಗಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ಕ್ರಮ ಕೈಗೊಂಡಿದ್ದು, ಜಿಲ್ಲೆಗೆ ಅಗತ್ಯವಿರುವಷ್ಟು ಜಿಲ್ಲೆಯಲ್ಲೇ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಚಿತ್ರದುರ್ಗ, ಬೆಂಗಳೂರು ಜಿಲ್ಲೆಗಳಿಗೆ ಕಳುಹಿಸಲು ಹಾಗೂ ನೆರೆಯ ರಾಜ್ಯದ ಅನಂತಪುರದಲ್ಲಿರುವ ವ್ಯಾಪಾರಸ್ಥರನ್ನು ಲಿಂಕ್ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.       ತುಮಕೂರು ಜಿಲ್ಲೆಯಲ್ಲಿ…

ಮುಂದೆ ಓದಿ...