ತುಮಕೂರಿ : ವಿಶ್ವದಲ್ಲೇ ಮೊದಲ ಸೆನ್ಸಾರ್ ಸ್ಯಾನಿಟೈಸರ್ ಎಟಿಎಂ!!

ತುಮಕೂರು:       ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಮೊಟ್ಟ ಮೊದಲನೇ ಬಾರಿಗೆ ವರ್ಲ್ಡ್ ಫಸ್ಟ್ ಸೆನ್ಸಾರ್ ಸ್ಯಾನಿಟೈಸರ್ ಎಟಿಎಂ ಆರಂಭಿಸಿದೆ.        ನಗರದ ಜೆ.ಸಿ. ರಸ್ತೆಯಲ್ಲಿರುವ ಟಿಎಂಸಿಸಿ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ಈ ಸೆನ್ಸಾರ್ ಸ್ಯಾನಿಟೈಸರ್ ಎಟಿಎಂ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಇಂದಿಲ್ಲಿ ಉದ್ಘಾಟಿಸಿದರು.       ನಂತರ ಮಾತನಾಡಿದ ಅವರು, ಟಿಎಂಸಿಸಿ ಬ್ಯಾಂಕ್ ಹಲವು ತಂತ್ರಜ್ಞಾನಗಳನ್ನು ಬಳಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ. ಕೊರೊನಾ ಸಂಕಷ್ಟದ ಕಾಲದಲ್ಲೂ ಗ್ರಾಹಕರ ಆರೋಗ್ಯ ದೃಷ್ಠಿಯಿಂದ ಸೆನ್ಸಾರ್ ಸ್ಯಾನಿಟೈಸರ್ ಎಟಿಎಂ ಕೇಂದ್ರವನ್ನು ಆರಂಭಿಸುವ ಮೂಲಕ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.       ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಎಸ್. ಜಯಕುಮಾರ್ ಮಾತನಾಡಿ, ಪ್ರಸ್ತುತ ಕೊರೊನಾ ಸೋಂಕು ಹರಡುವ ಭೀತಿ ಎಲ್ಲೆಡೆ ಆವರಿಸಿರುವುದರಿಂದ ಬ್ಯಾಂಕ್‌ಗಳಿಗೆ…

ಮುಂದೆ ಓದಿ...

ಊರಿನ ಜೀವ ನಾಡಿಯಾಗಿದ್ದ ಕೆರೆಗೆ ಕಾಯಕಲ್ಪ : ಜನರ ಮೊಗದಲ್ಲಿ ಮಂದಹಾಸ

ಚಿಕ್ಕನಾಯಕನಹಳ್ಳಿ:      ಒಂದು ಕೆರೆ ಇಡೀ ಊರಿನ ಜೀವನಾಡಿ, ಕೆರೆಯೊಂದರ ಅಸ್ತಿತ್ವ ಮರೆಯಾಗುತ್ತಾ ಹೋದಂತೆ ಊರಿನ Àಬದುಕು ಚೈತನ್ಯರಹಿತವಾಗುತ್ತಾ ಹೋಗಲಿದೆ. ಇಂತಹ ಕೆರೆಗೆ ಕಾಯಕಲ್ಪ ಸ್ಪರ್ಷವಾಗುತ್ತಿದ್ದು ಪಟ್ಟಣದ ಮೆರಗನ್ನು ಹೆಚ್ಚಿಸುವ ಆಶಾಕಿರಣವೊಂದು ಒಡಮೂಡುತ್ತಿದೆ.       ಹೇಮಾವತಿಯೇ ಆಸರೆ: ಸುಮಾರು 25ವರ್ಷದ ಹಿಂದೆ ಪ್ರತಿವರ್ಷ ಪಟ್ಟಣದ ಕೆರೆಗೆ ಅಷ್ಟಿಷ್ಟು ಮಳೆ ನೀರು ಸಂಗ್ರಹವಾಗುತ್ತಾ ಇದ್ದ ಕಾರಣ ಕೆಲವೇ ಸಂಖ್ಯೆಯಲ್ಲಿದ್ದ ಕೊಳವೆಬಾವಿಗಳಿಂದ ದಿನನಿತ್ಯ ಕುಡಿಯುವ ನೀರು ಕೊಳಾಯಿಮೂಲಕ ಪಟ್ಟಣದ ಮನೆಮನೆಗೆ ಸರಬರಾಜಾಗುತ್ತಿತ್ತು. ಎಂತಹ ಕಡುಬೇಸಿಗೆಯಲ್ಲೂ ಪಟ್ಟಣದಲ್ಲಿ ಕುಡಿಯುವ ನೀರನ ಕೊರತೆಯುಂಟಾಗುತ್ತಿರಲಿಲ್ಲ.       ಆದರೆ ವರ್ಷ ಕಳೆದಂತೆ ಮಳೆಗಾಲ ಕಮ್ಮಿಯಾಗಿ ಕೆರೆಗೆ ನೀರು ಹರಿಯುವದೇ ಅಪರೂಪವೆನಿಸುತ್ತಾ ಕೊನೆಗೆ ಕೆರೆ ಬಹುತೇಕ ಖಾಲಿಯಾಗಿ ಬಟಾಬಯಲಾಗುತ್ತಿದ್ದಂತಯೇ ಪಟ್ಟಣದಲ್ಲಿ ಕುಡಿಯುವ ನೀರಿನ ಹಾಹಾಕಾರ ಬೇಸಿಗೆ ಸಂದರ್ಭದಲ್ಲಿ ಮುಗಿಲು ಮಟ್ಟುತ್ತಿತ್ತು. ಈ ಸಮಸ್ಯೆ ನಿವಾರಣೆಗೆ ಹಲವರ ಪ್ರಯತ್ನದಿಂದ ಹೇಮಾವತಿ ನಾಲೆಯಿಂದ…

ಮುಂದೆ ಓದಿ...

ತುಮಕೂರು : ಪ್ರತಿ ತಾಲ್ಲೂಕಿನಲ್ಲಿ 20 ಬೆಡ್‍ಗಳ ಕೋವಿಡ್ ಆಸ್ಪತ್ರೆ!

ತುಮಕೂರು :      ಸರ್ಕಾರದ ಯೋಜನೆಗಳನ್ನು ಕಾಲಬದ್ಧ ಮಿತಿಯಲ್ಲಿ ಪೂರ್ಣಗೊಳಿಸುವುದರ ಜೊತೆಗೆ ಅರ್ಹರಿಗೆ ಸರ್ಕಾರದ ಯೋಜನೆಗಳ ಲಾಭ ತಲುಪಿಸುವ ಕೆಲಸ ಮಾಡಬೇಕೆಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ, ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.        ಅವರು ಇಂದು ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2019-20ನೇ ಸಾಲಿನ 4ನೇ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬೆಳೆಯುವ ಬೆಳೆಗಳ ಬಿತ್ತನೆ ಬೀಜ, ಗೊಬ್ಬರ ಮತ್ತು ಕೀಟನಾಶಕ ಔಷಧಿಗಳ ದಾಸ್ತಾನಿನ ಬಗ್ಗೆ ಮಾಹಿತಿ ಪಡೆದರು. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಈವರೆಗೆ 120 ಮಿ.ಮಿ. ವಾಡಿಕೆ ಮಳೆಯಾಗಬೇಕಾಗಿದ್ದು, 108 ಮಿ.ಮಿ. ಮಳೆಯಾಗಿರುತ್ತದೆ. ಉದ್ದು, ಹೆಸರು ಮತ್ತು ಅಲಸಂದೆ ಬೆಳೆ ಸುಮಾರು…

ಮುಂದೆ ಓದಿ...

ಸಾಮಾಜಿಕ ಅಂತರ ಕಾಯ್ದುಕೊಂಡು ಎಸ್‍ಎಸ್‍ಎಲ್‍ಸಿ ಪರೀಕ್ಷೆ

 ಗುಬ್ಬಿ:      ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಿದ್ದತೆ ನಡೆಸಿರುವ ಗುಬ್ಬಿ ತಾಲ್ಲೂಕಿನ 14 ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ 19 ತುರ್ತು ಮಾರ್ಗಸೂಚಿ ಅನ್ವಯ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಲು ಸಕಲ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್  ತಿಳಿಸಿದರು.       ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿನ ಒಟ್ಟು 3360 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಸನ್ನದ್ದರಾಗಿದ್ದಾರೆ. ಈ ನೋಂದಾಯಿತ ಮಕ್ಕಳಿಗೆ ಪರೀಕ್ಷಾ ವೇಳಾಪಟ್ಟಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಾರ್ಗಸೂಚಿಯನ್ನು ತಿಳಿಸಲಾಗುತ್ತಿದೆ. ಜತೆಗೆ ಪೋಷಕರಿಗೂ ಅಗತ್ಯ ಮಾಹಿತಿ ರವಾನೆ ಮಾಡಲಾಗುತ್ತಿದೆ ಎಂದರು.       ಜೂನ್ 25 ರಿಂದ ಆರಂಭವಾಗುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ಹಾಗೂ ಇಲಾಖಾ ಸಿಬ್ಬಂದಿಗಳಿಗೆ ಕಡ್ಡಾಯ ಮಾಸ್ಕ್ ಬಳಕೆಗೆ ಸೂಚಿಸಲಾಗಿದೆ. ಜತೆಗೆ ದೇಹದ ತಪಮಾನ ತಿಳಿಯಲು ಸ್ಕ್ರೀನಿಂಗ್…

ಮುಂದೆ ಓದಿ...

ಮಧುಗಿರಿಗೆ ವಕ್ಕರಿಸಿದ ಮಿಡತೆಗಳು

ಮಧುಗಿರಿ:       ಮಧುಗಿರಿ ಪಟ್ಟಣದ ಗೌರಿ ಬಿದನೂರು ರಸ್ತೆಯಲ್ಲಿರುವ ಕೆಎಸ್‍ಐಐಡಿಸಿ ಗೋಡನ್‍ಗಳ ಮುಂಭಾಗ ಇರುವ ಎಕ್ಕದ ಗಿಡಗಳಲ್ಲಿ ಮಿಡತೆಗಳು ಗುಂಪುಗಳಲ್ಲಿ ಆಕ್ರಮಿಸಿದೆ.       ಮಿಡತೆಗಳು ಮಹಾರಾಷ್ಟ್ರದಿಂದ ಬಂದಿರಬಹುದೆಂದು ಊಹಿಸಲಾಗಿದೆ, ಕೆಎಸ್‍ಐಡಿಸಿ ವಸವತುಗಳಲ್ಲಿ ಇತ್ತೀಚೆಗೆ ಮಹಾರಾಷ್ಟ್ರದಿಂದ ಬಂದ ಗೂಡ್ಸ್ ಲಾರಿಗಳ ಮೂಲಕ ಈ ಮಿಡತೆಗಳು ಬಂದಿರಬಹುದು ಎಂದು ಶಂಕಿಸಲಾಗಿದೆ.      ಈ ಮಿಡತೆಗಳು ಅಲ್ಲಿರುವ ಸಂಪೂರ್ಣ ಎಕ್ಕದ ಮರದ ಸುತ್ತಲೂ ಆವರಿಸಿಕೊಂಡು ಎಕ್ಕದ ಎಲೆಗಳನ್ನೆಲ್ಲ ಸಂಪೂರ್ಣ ತಿಂದುಹಾಕಿದೆ ಇನ್ನು ಕೃಷಿ ಬೆಳೆಗಳಿಗೆ ಆವರಿಸಿಕೊಂಡರೆ ಮುಂದಾಗುವ ಅನಾಹುತವನ್ನು ತಪ್ಪಿಸಬೇಕಾಗಿದೆ ಎಂದು ರೈತರ ಆಗ್ರಹವಾಗಿದೆ.

ಮುಂದೆ ಓದಿ...

ಹೋಬಳಿ ಕೇಂದ್ರಗಳಲ್ಲಿ ಬಾಡಿಗೆ ಆಧಾರದಲ್ಲಿ ಕೃಷಿ ಯಂತ್ರಗಳು

ತುಮಕೂರು :       ಪೂರ್ವ ಮುಂಗಾರು ಆರಂಭವಾಗಿರುವ ಹಿನ್ನಲೆಯಲ್ಲಿ ರೈತರಿಗೆ ಬಿತ್ತನೆ ಕಾರ್ಯಕ್ಕೆ ಬೇಕಾಗುವ ಕೃಷಿ ಸಲಕರಣೆಗಳನ್ನು ಎಲ್ಲಾ ಹೋಬಳಿ ಕೇಂದ್ರಗಳಲ್ಲಿರುವ ಕೃಷಿಯಂತ್ರಧಾರೆ ಮೂಲಕ ಬಾಡಿಗೆ ಆಧಾರದಲ್ಲಿ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಂಜನೇಯ ಅಧಿಕಾರಿಗಳಿಗೆ ಸೂಚಿಸಿದರು.       ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಬಿತ್ತನೆ ಕಾರ್ಯಕ್ಕೆ ತೊಂದರೆಯಾಗದಂತೆ ರಿಯಾಯಿತಿ ಧರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಉಪಕರಣಗಳನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದರು.        ಸಹಾಯಕ ಕೃಷಿ ನಿರ್ದೇಶಕ ಎನ್.ಕೆಂಗೇಗೌಡ ಸಭೆಗೆ ಮಾಹಿತಿ ನೀಡಿ, ಮೇ.ಅಂತ್ಯಕ್ಕೆ 142 ಮಿ.ಮೀ ಮಳೆಯಾಗಬೇಕಿತ್ತು, ಪ್ರಸ್ತುತ 119 ಮಿ.ಮೀ. ಮಳೆಯಾಗಿದ್ದು, ಪೂರ್ವ ಮುಂಗಾರಿನಲ್ಲಿ ಕೃಷಿ ಚಟುವಟಿಕೆಗಳಿಗೆ ಈಗ ಆಗಿರುವ ಮಳೆ ಉತ್ತಮವಾಗಿದೆ. ರೈತರು…

ಮುಂದೆ ಓದಿ...

ಚಿಕ್ಕನಾಯಕನಹಳ್ಳಿ : ಗಾಳಿ ಮಳೆಗೆ ಹಾರಿದ ಶೀಟುಗಳು : ಅಪಾರ ನಷ್ಟ!!

ಚಿಕ್ಕನಾಯಕನಹಳ್ಳಿ:       ಕಳೆದೆರಡು ದಿನಗಳಿಂದ ತಾಲ್ಲೂಕಿನ ಹಲವೆಡೆ ಸುರಿದ ಮಳೆಗಾಳಿಗೆ ಮರಗಿಡ ಹಾಗೂ ಮನೆಗಳ ಹೆಂಚು ಹಾಗೂ ಶೀಟುಗಳು ಹಾರಿಹೋಗಿ ಅಪಾರಪ್ರಮಾಣದ ನಷ್ಟವುಂಟಾಗಿದೆ       ಕಳೆದೆರಡು ದಿನಗಳಿಂದ ಸಂಜೆ ಮಳೆ ಹಾಗೂ ಗಾಳಿಯರಭಸ ಜೋರಾಗಿದ್ದು ಗಾಳಯ ಹೊಡೆತಕ್ಕೆ ಹಲವು ಮರಗಳು ಉರುಳಿಬಿದ್ದಿವೆ. ತಾಲ್ಲೂಕಿನ ಶೆಟ್ಟಿಕೆರೆ ಹಾಗೂ ಹಂದನಕೆರೆ ಹೋಬಳಿಗಳಲ್ಲಿ ಸಾಕಷ್ಟು ಹಾನಿ ಮಾಡಿದ್ದು ಈ ಭಾಗದ ಹಲವು ತೋಟದಲ್ಲಿ ತೆಂಗು, ಅಡಿಕೆ, ಮಾವು, ಹಲಸುಮರಗಳು ನೆಲಕ್ಕೊರಗಿವೆ. ರಸ್ತೆಬದಿಯ ಮರಗಳುಸಹ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಹಲವೆಡೆ ವಾಹನ ಸಂಚಾರಕ್ಕೆ ತೊಡಕಾಯಿತು. ತಾಲ್ಲೂಕಿನ ಮೇಲನಹಳ್ಳಿ, ಶ್ಯಾವಿಗೆಹಳ್ಳಿ, ಹಾಲುದೇವರಹಟ್ಟಿ, ಸಾವಸೆಟ್ಟಿಹಳ್ಳಿಗಳಲ್ಲಿ ಹಲವು ಮನೆಗಳ ಹೆಂಚು ಮತ್ತು ಸಿಮೆಂಟ್ ಶೀಷ್‍ಗಳು ಮಳೆ ಗಾಳಿಯ ಹೊಡೆತಕ್ಕೆ ಹಾರಿಹೋಗಿದ್ದು ಅಪಾರ ನಷ್ಟ ಸಂಭವಿಸಿದೆ. ಈಗಾಗಲೇ ಕಂದಾಯ ಇಲಾಖೆಯಿಂದ ಮಳೆ ಹಾಗೂ ಗಾಳಿಯಿಂದ ತಾಲ್ಲೂಕಿನಲ್ಲಿ ಆಗಿರುವ ಹಾನಿಯ ಬಗ್ಗೆ ಮಹಜರ್…

ಮುಂದೆ ಓದಿ...

ಅಂತರ್ಜಲ ಹೆಚ್ಚಿಸುವ ಮೂಲಕ ಪ್ರಕೃತಿ ಉಳಿಸಿ : ಸಚಿವ ಕೆ.ಎಸ್.ಈಶ್ವರಪ್ಪ

ತುಮಕೂರು:       ಭೂಮಿಯ ಮೇಲೆ ಮಾನವನ ಅತಿಕ್ರಮಣದಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿದ್ದು, ಮಳೆಯ ನೀರು ಹರಿದು ಹೋಗುವುದನ್ನು ನಿಲ್ಲಿಸಿ ಭೂಮಿಯಲ್ಲಿ ಹಿಂಗಿಸುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಕೆಲಸ ಆಗಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.        ಅವರು ಜಿಲ್ಲಾ ಪಂಚಾಯತ್ ಆವರಣದ ಕುಂಚಿಟಿಗರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಅಂತರ್ಜಲ ಚೇತನ ಕಾರ್ಯಕ್ರಮವನ್ನು ಉದ್ಥಾಟಿಸಿ ಅವರು ಮಾತನಾಡಿದರು.       ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸುವ ಮೂಲಕ 30 ವರ್ಷಗಳ ಹಿಂದಿನ ಪರಿಸರ ಮತ್ತು ಪ್ರಕೃತಿಯನ್ನು ಉಳಿಸಿ ಮತ್ತು ಬೆಳೆಸುವ ಕಾರ್ಯವನ್ನು ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸಹಯೋಗದಲ್ಲಿ ಮನ್ರೆಗಾ ಯೋಜನೆಯಡಿಯಲ್ಲಿ ಕಾರ್ಯ ಪ್ರವೃತ್ತರಾಗಿ ಅಂತರ್ಜಲವನ್ನು ಹೆಚ್ಚಿಸುವ ಕಾರ್ಯ ಮಾಡಬೇಕಾಗಿದೆ. ಅದಕ್ಕಾಗಿ ಪ್ರಧಾನ ಮಂತ್ರಿ ನರೇಗಾ ಯೋಜನೆಯಡಿ 1861 ಕೋಟಿ…

ಮುಂದೆ ಓದಿ...

ತುಮಕೂರು : ಇಂದು 2 ಹೊಸ ಕರೋನಾ ವೈರಸ್ ಪಾಸಿಟಿವ್ ಪ್ರಕರಣ

ತುಮಕೂರು:       ಜಿಲ್ಲೆಯಲ್ಲಿ ಇಂದು 2 ಹೊಸ ಕರೋನಾ ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ನಾಗೇಂದ್ರಪ್ಪ ನವರು ತಿಳಿಸಿದ್ದಾರೆ.           30 ವರ್ಷದ ಓರ್ವ ವ್ಯಕ್ತಿ P-2771 ದೆಹಲಿಯಿಂದ ಪಾವಗಡಕ್ಕೆ ಬಂದಿದ್ದು ಅಲ್ಲಿಯೇ ಕ್ವಾರಂಟೈನ್ ಮಾಡಲಾಗಿತ್ತು. 22 ವರ್ಷದ ವ್ಯಕ್ತಿ P-2771 ಕುಣಿಗಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇಬ್ಬರ ಗಂಟಲು ದ್ರವದ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಇಂದು ವರದಿ ಬಂದಿದ್ದು, ಇಬ್ಬರಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.       ಪ್ರಸ್ತುತ ಸೋಂಕಿತರನ್ನು ತುಮಕೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ನಾಗೇಂದ್ರಪ್ಪ ನವರು ತಿಳಿಸಿದ್ದಾರೆ.    

ಮುಂದೆ ಓದಿ...

ಸುರಕ್ಷಾ ಸಮಿತಿಯಿಂದ ಹೇಮಾವತಿ ನೀರಿನ ಹರಿವು ವೀಕ್ಷಣೆ!!

ತುಮಕೂರು:        ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಮಾಡುವ ಹೇಮಾವತಿ ನೀರು ಗೊರೂರು ಜಲಾಶಯದಿಂದ ಗೊರೂರು 2.50 ಮೀಟರ್ ಹರಿದು ಬರುತ್ತಿರುವುದನ್ನು ವೀಕ್ಷಿಸಿದ ಸಾರ್ವಜನಿಕ ಸುರಕ್ಷಾ ಸಮಿತಿ ಸದಸ್ಯರು ಹರ್ಷ ವ್ಯಕ್ತಪಡಿಸಿ ಘನ ಸರ್ಕಾರಕ್ಕೆ ಅಭಿನಂದಿಸಿದ್ದಾರೆ.       ಬುಗುಡನಹಳ್ಳಿಯಲ್ಲಿ ಹೇಮಾವತಿ ನೀರಿನ ಸಂಗ್ರಹಣೆ ದಿನೇ ದಿನೇ ಕಮ್ಮಿಯಾಗಿ ತುಮಕೂರು ನಗರ ನಾಗರೀಕರಿಗೆ ನೀರಿನ ಪೂರೈಕೆ ವ್ಯತ್ಯಯವಾಗಬಹುದೆಂಬ ಆತಂಕ ಎದುರಾಗಿತ್ತು. ಈ ಸಂಬಂಧ ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ಕಳೆದ ವಾರ ಭೇಟಿ ನೀಡಿ ನೀರಿನ ಲಭ್ಯತೆ ವೀಕ್ಷಿಸಿ ಘನ ಸರ್ಕಾರ, ಜಿಲ್ಲಾಡಳಿತ ಹಾಗೂ ಮಹಾನಗರಪಾಲಿಕೆ ಆಡಳಿತಕ್ಕೆ ಸುರಕ್ಷಾ ಸಮಿತಿ ಜಿಲ್ಲಾಧ್ಯಕ್ಷ ಕೆ.ಪಿ. ಮಹೇಶ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡಿ ಮನವಿ ಮೂಲಕ ಗಮನ ಸೆಳೆದಿದ್ದನ್ನು ಗಮನಿಸಬಹುದಾಗಿದೆ.       ಬುಗುಡನಹಳ್ಳಿ ಜಲ ಸಂಗ್ರಹಾಗಾರದ ಒಟ್ಟು ಸಂಗ್ರಹಣಾ ಸಾಮಥ್ಯ 282 MCFT ಆಗಿದ್ದು ಇದರ…

ಮುಂದೆ ಓದಿ...