ಚಿಕ್ಕನಾಯಕನಹಳ್ಳಿ : ನೆನೆಗುದಿಗೆ ಬಿದ್ದಿದ್ದ ಮುಖ್ಯಕಾಮಗಾರಿಗಳಿಗೆ ಚಾಲನೆ

ಚಿಕ್ಕನಾಯಕನಹಳ್ಳಿ:       ಲಾಕ್ಡೌನ್ ಹಿನ್ನಲೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಮುಖ್ಯಕಾಮಗಾರಿಗಳಿಗೆ ಚಾಲನೆ ದೊರೆಯುತ್ತಿದೆ ಆದರೆ ಈ ಕೆಲಸಗಳಿಗೆ ಹೊರಗಿನ ಕೂಲಿಕಾರ್ಮಿಕರು ಬರುತ್ತಿದ್ದು ಸುರಕ್ಷತೆಯ ಕೆಲ ನಿಯಮಗಳು ಪಾಲನೆಯಾಗದಿರುವುದು ಆತಂಕಕ್ಕೆಡೆ ಮಾಡಿಕೊಟ್ಟಿದೆ.       ಕಾಮಗಾರಿಗೆ ಗ್ರೀನ್ ಸಿಗ್ನಲ್:       ಕೊರೊನಾ ಸೋಂಕಿನ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಇದೇ ಮೊದಲಬಾರಿಗೆ ಲಾಕ್‍ಡೌನ್ ಆದ ಪರಿಣಾಮ ದೇಶದಲ್ಲಿ ಕೊರೊನಾ ಹರಡುವಿಕೆಗೆ ಕಡಿವಾಣ ಬಿದ್ದಿದ್ದು ಈಗ ಲಾಕ್‍ಡೌನ್ ಸಡಿಲಿಕೆಯಾಗಿದೆ. ಕಾರ್ಮಿಕರ ನೆರವಿನಿಂದ ನಡೆಯುವ ಕಾಮಗಾರಿಗಳನ್ನು ಆರಂಭಿಸಲು À ಸರ್ಕಾರ ಕೆಲವು ಶರತ್ತುಬದ್ದದನ್ವಯ ನಡೆಸಲು ಸೂಚಿಸಿದೆ. ಅದರಂತೆ ತಾಲ್ಲೂಕಿನಲ್ಲಿ ಈಗಾಗಲೇ ಇದಕ್ಕೆ ಚಾಲನೆ ನೀಡಲಾಗಿದೆ ಪಟ್ಟಣದ ಮುಲಕ ಹಾದುಹೋಗುವು ರಾಷ್ಟ್ರಿಯ ಹೆದ್ದಾರಿ ಕಾಮಗಾರಿ ಆರಂಭಗೊಂಡಿದ್ದು ಎತ್ತಿನಹೊಳೆ, ಹೇಮಾವತಿಯ ನಾಲಾ ಕಾಮಗಾರಿಗಳು ಇನ್ನೇನು ಆರಂಭಗೊಳ್ಳಲಿದೆ. ಸುರಕ್ಷತಾ ಕ್ರಮಕ್ಕೆ ತಿಲಾಂಜಲಿ:        ಈ ನಡುವೆ ಹೆದ್ದಾರಿ ಕಾಮಗಾರಿ ಆರಂಭಕ್ಕಾಗಿ…

ಮುಂದೆ ಓದಿ...

ತುಮಕೂರಿನಿಂದ ವಲಸೆ ಹೋದ ಕಾರ್ಮಿಕರ ಬಸ್ಸುಗಳಿಗೆ ಚಾಲನೆ!

ತುಮಕೂರು:        ತುಮಕೂರು ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಉಚಿತವಾಗಿ ಕರೆದೊಯ್ಯುವ ಕೆಸ್ಸಾರ್ಟಿಸಿ ಬ ಸ್ಸುಗಳಿಗೆ ತುಮಕೂರು ನಗರದ ಶಾಸಕರಾದ ಜಿ.ಬಿ ಜ್ಯೋತಿಗಣೇಶ್ ಅವರು ನಗರದ ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣದಿಂದ ಹಸಿರು ನಿಶಾನೆ ತೋರಿದರು.       ಅನಂತರ ಮಾತನಾಡಿದ ಅವರು, ವಲಸೆ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಕರ್ನಾಟಕ ಸರ್ಕಾರ, ಕೆ.ಎಸ್.ಆರ್.ಟಿ.ಸಿ ಮತ್ತು ಜಿಲ್ಲಾಡಳಿತ ವತಿಯಿಂದ ಇವತ್ತು ಮತ್ತು ನಾಳೆ ತಮ್ಮ ತಮ್ಮ ಊರುಗಳಿಗೆ ಹೋಗಲು ಉಚಿತ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಆರೋಗ್ಯ ಇಲಾಖೆಯಿಂದಲೂ ಸಹ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತಿದೆ. ಎಷ್ಟು ಜನ ಬಂದರೂ ಕೂಡ ಕರೆದುಕೊಂಡು ಹೋಗುವ ವವ್ಯಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ ಎಂದರು.       ವಿಭಾಗ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ಮಾತನಾಡಿ ಜಿಲ್ಲಾಡಳಿತ ವತಿಯಿಂದ ತುಮಕೂರು ನಗರದಲ್ಲಿ ಉಳಿದು ಕೊಂಡಿರುವ ಮುದ್ದೆಬಿಹಾಳ,…

ಮುಂದೆ ಓದಿ...

KSOU : ಬಿ.ಎ/ಬಿ.ಕಾಂ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸ್

ತುಮಕೂರು:       ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2019-20ನೇ ಶೈಕ್ಷಣಿಕ ಸಾಲಿನಲ್ಲಿ (ಜುಲೈ ಮತ್ತು ಜನವರಿ ಆವೃತ್ತಿಯಲ್ಲಿ) ಪ್ರವೇಶಾತಿ ಪಡೆದಿದ್ದ ಪ್ರಥಮ ಮತ್ತು ದ್ವಿತೀಯ ಬಿ.ಎ/ಬಿ.ಕಾಂ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಸಂಪರ್ಕ ತರಗತಿಗಳು ಪ್ರಾರಂಭವಾಗಿವೆ ಎಂದು ಪ್ರಾದೇಶಿಕ ನಿರ್ದೇಶಕ ದಿಲೀಪ ಡಿ. ಅವರು ತಿಳಿಸಿದ್ದಾರೆ.       ವೇಳಾಪಟ್ಟಿಯನ್ನು ಈಗಾಗಲೇ www.ksoumyuru.ac.in ನಲ್ಲಿ ಅಪ್‍ಲೋಡ್ ಮಾಡಲಾಗಿದ್ದು, ವಿದ್ಯಾರ್ಥಿಗಳು ಞsousಣuಜeಟಿಣ ಂಠಿಠಿ ಅನ್ನು ಡೌನ್‍ಲೋಡ್ ಮಾಡಿಕೊಳ್ಳುವ ಮೂಲಕ ಆನ್‍ಲೈನ್ ಸಂಪರ್ಕ ಕಾರ್ಯಕ್ರಮಕ್ಕೆ ಲೈವ್ ಆಗಿ ಸೇರಿಕೊಳ್ಳಬಹುದಾಗಿದೆ.       www.ksoumyuru.ac.in  ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.        ವಿದ್ಯಾರ್ಥಿಗಳು ಆನ್‍ಲೈನ್ ಸಂಪರ್ಕ ತರಗತಿಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ, ಸಿ.ಎ-07, ಟೂಡಾ ಲೇಔಟ್, ಮೇಳೆಕೋಟೆ-ವೀರಸಾಗರೆ, ತುಮಕೂರು-572105 ಅಥವಾ ದೂರವಾಣಿ ಸಂಖ್ಯೆ: 9108808219 ಸಂಪರ್ಕಿಸಬಹುದಾಗಿದೆ…

ಮುಂದೆ ಓದಿ...