ಶಾಸಕ ಡಿ.ಸಿ.ಗೌರಿಶಂಕರ್ ಪಿಎ ಕಾರು ಅಪಘಾತ : ಕಾರಿನಲ್ಲಿದ್ದ 2.5 ಕೋಟಿ ಹಣ ನಾಪತ್ತೆ…?

 ತುಮಕೂರು:       ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ರವರ ಆಪ್ತ ಸಹಾಯಕನಾಗಿದ್ದ ಕುಮಾರ್ ಚಲಿಸುತ್ತಿದ್ದ ಕಾರು ಅಪಘಾತವಾಗಿದ್ದು ಗಾಯಾಳು ಮೈಸೂರಿನ ಕೊಲಂಬಿಯ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.       ಕುಣಿಗಲ್ ತಾಲೂಕಿನ ಹುಲಿಯೂದುರ್ಗ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬರುವ ನಿಡಸಾಲೆ (ಕುಣಿಗಲ್-ಮದ್ದೂರು ರಸ್ತೆ )ಬಳಿ ಏಂ 06, P-5738 ನಂಬರಿನ ಸ್ವಿಫ್ಟ್ ಕಾರಿನಲ್ಲಿ ತಮ್ಮ ಸ್ವಗ್ರಾಮ ಯಡವಾಣಿಗೆ ದಿನಾಂಕ:05-05-2020ರ ಮಂಗಳವಾರ ರಾತ್ರಿ 8:30ರ ಸಮಯದಲ್ಲಿ ಶಾಸಕರ ಆಪ್ತ ಕುಮಾರ್ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದ ವೇಳೆ ಅಪಘಾತವಾಗಿದೆ. ಅಪಘಾತವಾದ ನಂತರ ಡ್ರೈವಿಂಗ್ ಸೀಟ್‍ನಿಂದ ಮುಂದಿನ ಬಲಭಾಗದ ಕಾರಿನ ಡೋರ್ ತೆಗೆದು ಚಾಲಕ ಕುಮಾರ್ ರಸ್ತೆಯ ಇಕ್ಕೆಲದಲ್ಲಿ ಅಂಗಾತವಾಗಿ ಬಿದ್ದಿರುವಂತಹ ದೃಶ್ಯ ಕಂಡುಬಂದಿದ್ದು, ಅಪಘಾತವಾದ ರೀತಿಯಲ್ಲಿ ಇದ್ದ ಕಾರನ್ನು ಮತ್ತು ಪ್ರಜ್ಞಾವಸ್ಥೆಯಲ್ಲಿರದ ರೀತಿಯಲ್ಲಿದ್ದ ಕುಮಾರ್‍ರನ್ನು ಕಂಡಂತಹ ಪೊಲೀಸರು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ…

ಮುಂದೆ ಓದಿ...

ರಸ್ತೆ ಕಾಮಗಾರಿಗಳ ಪ್ರಗತಿ ತೃಪ್ತಿದಾಯಿಕವಾಗಿಲ್ಲ – ಸಚಿವ ಜೆ.ಸಿ. ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ:       ಪಟ್ಟಣದಲ್ಲಿ ನಡೆಯಬೇಕಿರುವ ಯುಜಿಡಿ , ನೀರಿನ ಟ್ಯಾಂಕ್, ಚರಂಡಿ ಹಾಗೂ ಹುಳಿಯಾರಿನ ರಸ್ತೆ ಕಾಮಗಾರಿಗಳ ಪ್ರಗತಿ ತೃಪ್ತಿದಾಯಿಕವಾಗಿಲ್ಲ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಧಾನ ವ್ಯಕ್ತಪಡಿಸಿದರು. ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ಸಮವಸ್ತ್ರ ಹಾಗೂ ರಕ್ಷಣಾಕಿಟ್‍ಗಳನ್ನು ವಿತರಿಸದ ನಂತರ ಇಲಾಖಾವಾರು ಸಂಬಂಧಿಸಿದ ಅಧಿಕಾರಿಗಳಿಂದ ಹಲವು ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.        ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣಕ್ಕಾಗಿರೂ. 60ಕೋಟಿ. ಬಿಡುಗಡೆಯಾಗಿ ಆರುತಿಂಗಳು ಕಳೆದರೂ ಆಮೆಗತಿಯಲ್ಲಿ ನಡೆದಸಿರುವ ಬಗ್ಗೆ ತೀವ್ರ ಅತೃಪ್ತಿವ್ಯಕ್ತಪಡಿಸಿ ಮೊದಲು ಸಂಸ್ಕರಣಾ ಪಿಟ್‍ಗಳ ನಿರ್ಮಾಣಕ್ಕಾಗಿ ಜಾಗಗಳನ್ನು ಪುರಸಭಾ ವಶಕ್ಕೆ ಪಡೆದು ಕಾಮಗಾರಿ ಅಲ್ಲಿನಿಂದಲೇ ಆರಂಭಿಸಲು ತಿಳಿಸಿದ್ದರೂ ಇನ್ನು ತಡವಾಗಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಇದಕ್ಕಾಗಿಯೇ ಪಟ್ಟಣದ ಯಾವುದೇ ರಸ್ತೆಕಾಮಗಾರಿಗೆ ಅನುದಾನ ಹಾಕದೇ ಬೇರೆಡೆಗೆ ವಿನಿಯೋಗಿಸಲಾಗಿದೆ. ಆದರೆ ನೀವು ಇನ್ನೂ ಇದರ ಬಗ್ಗೆ ಆಸಕ್ತಿಯೇ ತೆಳೆದಿಲ್ಲವೆಂದು ಮುಖ್ಯಾಧಿಕಾರಿ ಶ್ರೀನಿವಾಸ್‍ರವರನ್ನು…

ಮುಂದೆ ಓದಿ...

ಮೇ.13ರಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಫೋನ್ ಇನ್ ಕಾರ್ಯಕ್ರಮ

ತುಮಕೂರು:       ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಕೋವಿಡ್-19 ಹಿನ್ನೆಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಂದೂಡಲಾಗಿದ್ದು ವಿದ್ಯಾರ್ಥಿಗಳ ಆತ್ಮವಿಶ್ವಾಸ ತುಂಬಲು ಹಾಗೂ ವಿಷಯವಾರು ಕ್ಲಿಷ್ಟ ಅಂಶಗಳು/ಸಂದೇಹಗಳನ್ನು ಪರಿಹರಿಸಲು ನಿಗಧಿತ ಸಂಪನ್ಮೂಲ ಶಿಕ್ಷಕರುಗಳಿಂದ ಫೋನ್ ಇನ್ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಉಪನಿರ್ದೇಶಕರಾದ ಎಂ. ರೇವಣಸಿದ್ದಪ್ಪ ಅವರು ತಿಳಿಸಿದ್ದಾರೆ.       ಮೇ 13ರಂದು ಗಣಿತ ಮತ್ತು ವಿಜ್ಞಾನ, ಮೇ 14ರಂದು ಕನ್ನಡ ಮತ್ತು ಇಂಗ್ಲೀಷ್, ಮೇ 15ರಂದು ಸಮಾಜ ವಿಜ್ಞಾನ ಮತ್ತು ಹಿಂದಿ ವಿಷಯಗಳನ್ನು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1.30 ರವರೆಗೆ ಫೋನ್ ಇನ್ ಕಾರ್ಯಕ್ರಮ ನಡೆಯುತ್ತಿದ್ದು, ಕೊರಟಗೆರೆ, ಮಧುಗಿರಿ, ಪಾವಗಡ ಮತ್ತು ಸಿರಾ ತಾಲ್ಲೂಕಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ನಿಗಧಿಪಡಿಸಿದ ದಿನಾಂಕ ಮತ್ತು ಸಮಯದಂದು ದೂರವಾಣಿ ಕರೆ ಮಾಡಿ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ  ಕರೆ ಮಾಡುವ ದೂರವಾಣಿ ಸಂಖ್ಯೆ :    …

ಮುಂದೆ ಓದಿ...

ಕೊರೊನಾ ಸಮಯದಲ್ಲಿ ‘ದಾಸೋಹ’ಕ್ಕೆ ಶಾಸಕರ ಮೆಚ್ಚುಗೆ

ತುಮಕೂರು:       ಕೋವಿಡ್-19ನಿಂದ ಲಾಕ್‍ಡೌನ್ ಆಗಿರುವ ಈ ಸಂದರ್ಭದಲ್ಲಿ ನಗರದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ಧೇಶದಿಂದ ಆರ್.ಆರ್. ಅಭಿಮಾನಿ ಬಳಗವು ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿನಿತ್ಯ ದಾಸೋಹ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.        ನಗರದ ಮರಳೂರು ಎಸ್‍ಎಸ್‍ಐಟಿ ಕಾಲೇಜಿನ ಮುಂಭಾಗದಲ್ಲಿರುವ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ದಾಸೋಹ ಕಾರ್ಯವನ್ನು ಶುಕ್ರವಾರ ವೀಕ್ಷಿಸಿದ ನಂತರ ಮಾತನಾಡಿದ ಅವರು, “ಉಳ್ಳವರು ಇಲ್ಲದವರೊಂದಿಗೆ ಹಂಚಿಕೊಂಡು ಬದುಕುವಂಥ ಆದರ್ಶದ ಮಾರ್ಗ ಹಾಕಿಕೊಟ್ಟವರು ಬಸವಣ್ಣ. ಕೊರೊನಾ ಸಂಕಷ್ಟದಲ್ಲಿ ಆರ್.ರಾಜೇಂದ್ರ ನೇತೃತ್ವದ ಬಳಗವು ಬಸವಣ್ಣನ ಮಾತಿನಂತೆ ದಾಸೋಹ ಕಾರ್ಯ ನಡೆಸುತ್ತಿದ್ದಾರೆ. ಬಸವೇಶ್ವರರು ಸಾರಿದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಇತತರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.        ಕಾಯಕವೇ ಕೈಲಾಸ ಎಂಬ ತತ್ತ್ವವನ್ನು ಅಳವಡಿಸಿಕೊಂಡಾಗ ಎಲ್ಲರಿಗೂ ಸಲ್ಲುವಂಥ `ಹಸಿವು ಮುಕ್ತ’…

ಮುಂದೆ ಓದಿ...

ಲಾಕ್ ಡೌನ್ ವೇಳೆ ಮಕ್ಕಳನ್ನು ಕೂಲಿ ಕೆಲಸಕ್ಕೆ ಬಳಸಿಕೊಂಡಲ್ಲಿ ಕಾನೂನು ಕ್ರಮ!

ತುಮಕೂರು:       ಕೋವಿಡ್-19 ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಲವಾರು ಕಾರಣಗಳಿಂದ ಕೂಲಿ ಕಾರ್ಮಿಕರ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ದಿನನಿತ್ಯ ವಹಿವಾಟು ನಡೆಯುವ ಎಪಿಎಂಸಿ ಮಾರುಕಟ್ಟೆ/ ತರಕಾರಿ ಮಾರುಕಟ್ಟೆ/ಮತ್ತಿತರ ಅಂಗಡಿ-ಮುಂಗಟ್ಟುಗಳಲ್ಲಿ ಮೂಟೆಗಳನ್ನು ಏರಿಸಲು ಮತ್ತು ಇಳಿಸಲು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಗಮನಕ್ಕೆ ಬಂದಿದ್ದು, ಬಾಲ ಕಾರ್ಮಿಕ ನಿಷೇಧ ಕಾಯ್ದೆಯನ್ವಯ ಅಪ್ತಾಪ್ರ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದು ಅಪರಾಧವಾಗಿದೆ.       ಕಾಯ್ದೆಯನ್ನು ಉಲ್ಲಂಘಿಸಿದ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ.

ಮುಂದೆ ಓದಿ...