ಪೌರ ಕಾರ್ಮಿಕರು, ಆಟೋ ಚಾಲಕರಿಗೆ ಸುರಕ್ಷತಾ ಸಲಕರಣೆಗಳ ವಿತರಣೆ

ತುಮಕೂರು:       ಕೊರೋನಾ ಸಂಕಷ್ಟದ ಸಮಯದಲ್ಲಿ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರು ಹಾಗೂ ಆಟೋ ಚಾಲಕರಿಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಆದೇಶದಂತೆ ಪಡಿತರ ಕಿಟ್ ವಿತರಿಸಲಾಯಿತು ಎಂದು ಕ್ರೀಬ್ಕೋ ಸಂಸ್ಥೆ ನಿರ್ದೇಶಕ ಆರ್.ರಾಜೇಂದ್ರ ತಿಳಿಸಿದರು.       ನಗರದ ಕ್ಯಾತ್ಸಂದ್ರದ ಚಂದ್ರಮೌಳೇಶ್ವರ ಸಹಕಾರ ಸಂಘದ ಆವರಣದ ಬಳಿ ಕೊರೋನಾ ಸಂಕಷ್ಟದಲ್ಲಿರುವ ಕ್ಯಾತ್ಸಂದ್ರ 33, 34ನೇ ವಾರ್ಡ್ ನ ಪೌರಕಾರ್ಮಿಕರು, ಮಡಿವಾಳರು, ಮೇದರು, ಆಟೋ ಚಾಲಕರಿಗೆ ಪಡಿತರ ವಿತರಿಸಿ ಅವರು ಮಾತನಾಡಿದರು.        ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರು ಸುರಕ್ಷತಾ ಸಲಕರಣೆಗಳು ಇಲ್ಲದೇ ಕಾರ್ಯನಿರ್ವಹಿಸುತ್ತಿದ್ದಾರೆ, ಅವರಿಗೆ ಮೊದಲು ಸುರಕ್ಷತಾ ಸಾಧನಾಗಳನ್ನು ವಿತರಿಸಬೇಕು ಈ ನಿಟ್ಟಿನಲ್ಲಿ ನಮ್ಮ ಭಾಗದ ಮುಖಂಡರು ಗಮನಹರಿಸಬೇಕು, ಟಿಜಿಎಂಸಿ ಬ್ಯಾಂಕ್ ನ ಎನ್.ಎಸ್.ಜಯಕುಮಾರ್ ಅವರು ಬ್ಯಾಂಕ್ ವತಿಯಿಂದ ನೀಡಿರುವ ಯೂನಿಫಾರ್ಮ್ ಧರಿಸಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.      …

ಮುಂದೆ ಓದಿ...

ತಂದೆಯಿಂದಲೇ ಮಗಳ ಮೇಲೆ ಮಾರಣಾಂತಿಕ ಹಲ್ಲೆ!

ತುಮಕೂರು:       ಆಸ್ತಿ ವಿಚಾರವಾಗಿ ತಂದೆಯೇ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಗೊಪಾಲಪುರ ಗ್ರಾಮದಲ್ಲಿ ನಡೆದಿದೆ.       6 ವರ್ಷಗಳ ಹಿಂದೆ ಮದುವೆಯಾಗಿ ಬೆಂಗಳೂರಿನಲ್ಲಿ ವಾಸವಿದ್ದ ಅಮೃತಾ ಮತ್ತು ಸುನೀಲ್ ಮಾರ್ಚ್ ನಲ್ಲಿ ಗೋಪಾಲಪುರ ಗ್ರಾಮದ ತಂದೆ ಮನೆಗೆ ಬಂದಿದ್ದರು. ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಗ್ರಾಮದಲ್ಲೇ ಉಳಿದುಕೊಂಡಿದ್ದರು. ಈ ವೇಳೆ ತಂದೆ ಭೈರಪ್ಪ ಜಮೀನಿನಲ್ಲಿ ಮಣ್ಣು ತೆಗೆಸಿ ಮಾರಿಕೊಂಡಿದ್ದಾರೆ ಎಂದು ಅಮೃತಾ ತಂದೆಯನ್ನ ಪ್ರಶ್ನಿಸಿದ್ದಾರೆ. ಈ ವಿಚಾರಕ್ಕೆ ತಂದೆ ಮಗಳ ನಡುವೆ ಗಲಾಟೆ ಶುರುವಾಗಿ ಕೊನೆಗೆ ಅಮೃತಾ ನೊಣವಿನಕೆರೆ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.       ಪೊಲೀಸ್ ಠಾಣೆಯಿಂದ ಮನೆಗೆ ಬಂದ ಅಮೃತಾ ಹಾಗೂ ತಂದೆ ಬೈರಪ್ಪ ನಡುವೆ ಮತ್ತೆ ಜಗಳ ಶುರುವಾಗಿದ್ದು ವಿಕೋಪಕ್ಕೆ ತಿರುಗಿದೆ. ತಂದೆ ಬೈರಪ್ಪ…

ಮುಂದೆ ಓದಿ...

ಸೀಲ್‍ಡೌನ್ ಏರಿಯಾದಲ್ಲಿ ವೃದ್ಧನ ಸಾವು : ಮಾನವೀಯತೆ ಮರೆದ ಮುಸ್ಲಿಂ ಯುವಕರು

ತುಮಕೂರು:        ಪ್ರತಿದಿನ ದೇಶದೆಲ್ಲೆಡೆ ಕೊರೊನಾ ಅಟ್ಟಹಾಸ ಮರೆದಿದ್ದು, ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಹೋಗುತ್ತಿದೆ. ಬಂದುಬಳಗ, ರಕ್ತಸಂಬಂಧಿಗಳು ಸತ್ತರು ಹತ್ತಿರ ಹೋಗಿ ಮರಣೋತ್ತರ ಕಾರ್ಯವನ್ನು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇಂತಹದೇ ಒಂದು ಘಟನೆ ಸೀಲ್ಡ್ ಡೌನ್ ಪ್ರದೇಶವಾಗಿರುವ ಕೆ ಎಚ್ ಬಿ ಕಾಲೋನಿಯಲಿ ತುಮಕೂರಿನಲ್ಲಿ ನಡೆದಿದೆ. ಆದರೇ ಇಲ್ಲಿ ಮುಸ್ಲೀಂ ಯುವಕರು ಮೃತ ವೃದ್ಧನ ಶವನ್ನು ಸಾಗಿಸಿ ಮಾನವೀಯತೆ ಮರೆದಿದ್ದಾರೆ.       ತುಮಕೂರಿನ ಕೆ ಎಚ್ ಬಿ ಕಾಲೋನಿಯಲ್ಲಿ ಕರೊನಾ ಸೊಂಕಿತ ಪಿ 535 ವೃದ್ಧ ಸಾವನ್ನಪ್ಪಿದ್ದು, ಈತನಿಂದ ಪಕ್ಕದ ಮನೆಯ ದಂಪತಿಗಳಿಬ್ಬರಿಗೂ ಸೊಂಕು ತಗುಲಿತ್ತು. ಇದರಿಂದ ಕೆ ಎಚ್ ಬಿ ಕಾಲೋನಿಯನ್ನು ಸೀಲ್ಡ್ ಡೌನ್ ಮಾಡಲಾಗಿತ್ತು. ಈ ಸೀಲ್ಡ್ ಡೌನ್ ಏರಿಯಾದಲ್ಲಿ ಕಳೆದ ರಾತ್ರಿ ಮತ್ತೊಬ್ಬ ವೃದ್ಧ ಅನಾರೋಗ್ಯದಿಂದ ಸಹಜವಾಗಿ ಸಾವನ್ನಪ್ಪಿದ್ದು, ಮುಸಲ್ಮಾನ್ ಯುವಕರು ಅಂತ್ಯಕ್ರಿಯೆ ನೆರವೇರಿಸಲು ಸಹಾಯ ಮಾಡಿದ್ದಾರೆ.…

ಮುಂದೆ ಓದಿ...