ತುಮಕೂರು : ಹೊರ ರಾಜ್ಯಗಳಿಂದ ಮೇ.1ರಿಂದ 289 ಮಂದಿ ಆಗಮನ

ತುಮಕೂರು :       ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ತುಮಕೂರು ಜಿಲ್ಲೆಗೆ ಬರುವವರ ಮೇಲೆ ತೀವ್ರ ನಿಗಾವಹಿಸಲಾಗುತ್ತಿದ್ದು, ಇಲ್ಲಿಯವರೆಗೂ ಹೊರ ಜಿಲ್ಲೆಯಿಂದ 2711 ಮಂದಿ ಹಾಗೂ ಮೇ 1 ರಿಂದ ಹೊರ ರಾಜ್ಯಗಳಿಂದ 289 ಮಂದಿ ಜಿಲ್ಲೆಗೆ ಆಗಮಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ.       ಈಗಾಗಲೇ ಇವರನ್ನು ಪ್ರತ್ಯೇಕವಾಗಿ ವಸತಿ ಶಾಲೆ, ಶಾಲೆಗಳಲ್ಲಿ ಹಾಗೂ ಹೋಟೆಲ್‍ಗಳಲ್ಲಿ ಕ್ವಾರಂಟೈನ್ ಮಾಡಿ ಪರಿಶೀಲಿಸಲಾಗುತ್ತಿದೆ. ಹೊರ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಬರುವವರಿಗೆ ಪಾವಗಡದಲ್ಲಿ ತಪಾಸಣಾ ಕೇಂದ್ರ ಮಾಡಿದ್ದು, ಮಧುಗಿರಿಯಲ್ಲಿ ಸ್ವೀಕರಣಾ ಕೇಂದ್ರವನ್ನು ತೆರೆಯಲಾಗಿದೆ. ಅದೇರೀತಿ ಉತ್ತರ ಕರ್ನಾಟಕದಿಂದ ಬರುವವರಿಗೆ ಶಿರಾದಲ್ಲಿ ಹಾಗೂ ಹೊರ ರಾಜ್ಯಗಳಿಂದ ಬೆಂಗಳೂರು ಕಡೆಯಿಂದ ಬರುವವರಿಗೆ ತುಮಕೂರು ನಗರದ ಕೆಎಸ್‍ಆರ್‍ಟಿಸಿ ತಾತ್ಕಾಲಿಕ ಬಸ್ಸು ನಿಲ್ದಾಣದಲ್ಲಿ ಸ್ವೀಕರಣಾ ಕೇಂದ್ರವನ್ನು ತೆರೆಯಲಾಗಿದೆ ಎಂದರು.      …

ಮುಂದೆ ಓದಿ...

ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಒಂದೇ ದಾರಿ

ತುಮಕೂರು:       ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಕಾಪಾಡುವ ನಿಟ್ಟಿನಲ್ಲಿ ಅಂಗಡಿ ಮುಂಗಟ್ಟು ಮತ್ತಿತರ ಸಾಮಾಜಿಕ ಸ್ಥಳಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ಹೇಳಿದರು.       ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಅಕ್ಕಪಕ್ಕದ ಜನರು ಕೆಮ್ಮುವಾಗ, ಸೀನುವಾಗ ಎಚ್ಚರವಹಿಸಬೇಕು ಎಂದರಲ್ಲದೇ ಈಗಾಗಲೇ ಮುಸ್ಲಿಂ ಭಾಂದವರ ಪವಿತ್ರ ರಂಜಾನ್ ಹಬ್ಬ ಪ್ರಯುಕ್ತ ಪ್ರಾರ್ಥನೆ ಮಾಡುವವರು ಈದ್ಗಾಗೆ ಹೋಗುವುದು ಬೇಡ. ಇದರಿಂದ ಹಲವಾರಿಗೆ ತೊಂದರೆಯಾಗುತ್ತದೆ. ಈಗ ಹಗ್ ಮಾಡುವುದು ಬೇಡ. ಆದ್ದರಿಂದ ಮುಸ್ಲಿಂ ಭಾಂದವರು ಮನೆಯಲ್ಲಿಯೇ ಕುಳಿತು ಪ್ರಾರ್ಥನೆ ಮಾಡಿ ಎಂದರು.       ಕೊರೊನಾ ವೈರಸ್ ಎಂಬುದು ಒಂದು ಸಮುದಾಯದ ಜನರಿಗೆ ಮಾತ್ರ ಬರುವಂತಹದ್ದಲ್ಲ.…

ಮುಂದೆ ಓದಿ...

ಚಿಕ್ಕನಾಯಕನಹಳ್ಳಿ:         ಪಟ್ಟಣದಲ್ಲಿ ನಡೆಯಬೇಕಿರುವ ಯುಜಿಡಿ, ನೀರಿನ ಟ್ಯಾಂಕ್, ಚರಂಡಿ ಹಾಗೂ ಹುಳಿಯಾರಿನ ರಸ್ತೆ ಕಾಮಗಾರಿಗಳ ಪ್ರಗತಿ ತೃಪ್ತಿದಾಯಿಕವಾಗಿಲ್ಲ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಧಾನ ವ್ಯಕ್ತಪಡಿಸಿದರು.       ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ಸಮವಸ್ತ್ರ ಹಾಗೂ ರಕ್ಷಣಾಕಿಟ್‍ಗಳನ್ನು ವಿತರಿಸಿದ ನಂತರ ಇಲಾಖಾವಾರು ಸಂಬಂಧಿಸಿದ ಅಧಿಕಾರಿಗಳಿಂದ ಹಲವು ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.        ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣಕ್ಕಾಗಿರೂ. 60ಕೋಟಿ. ಬಿಡುಗಡೆಯಾಗಿ ಆರುತಿಂಗಳು ಕಳೆದರೂ ಆಮೆಗತಿಯಲ್ಲಿ ನಡೆದಸಿರುವ ಬಗ್ಗೆ ತೀವ್ರ ಅತೃಪ್ತಿವ್ಯಕ್ತಪಡಿಸಿ ಮೊದಲು ಸಂಸ್ಕರಣಾ ಪಿಟ್‍ಗಳ ನಿರ್ಮಾಣಕ್ಕಾಗಿ ಜಾಗಗಳನ್ನು ಪುರಸಭಾ ವಶಕ್ಕೆ ಪಡೆದು ಕಾಮಗಾರಿ ಅಲ್ಲಿನಿಂದಲೇ ಆರಂಭಿಸಲು ತಿಳಿಸಿದ್ದರೂ ಇನ್ನು ತಡವಾಗಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಇದಕ್ಕಾಗಿಯೇ ಪಟ್ಟಣದ ಯಾವುದೇ ರಸ್ತೆಕಾಮಗಾರಿಗೆ ಅನುದಾನ ಹಾಕದೇ ಬೇರೆಡೆಗೆ ವಿನಿಯೋಗಿಸಲಾಗಿದೆ. ಆದರೆ ನೀವು ಇನ್ನೂ ಇದರ ಬಗ್ಗೆ ಆಸಕ್ತಿಯೇ…

ಮುಂದೆ ಓದಿ...

ಕೊರೋನಾ ವೈರಸ್: ಸ್ಪಿರುಲಿನಾ ಮಾತ್ರೆ, ಚಿಕ್ಕಿ ವಿತರಣೆ

ತುಮಕೂರು:       ವಿಶ್ವದಾದ್ಯಂತ ಹರಡುತ್ತಿರುವ ಕೋವಿಡ್-19 ಸೋಂಕು ತಡೆಗಟ್ಟಲು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೊರೋನಾ ಸೋಂಕಿತರು, ಶಂಕಿತರು, ವೈದ್ಯರು, ಶುಶ್ರೂಷಕರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಪ್ರತಿ ದಿನ 2 ಗ್ರಾಂ ಸ್ಪಿರುಲಿನಾ ಮಾತ್ರೆ ಸೇವಿಸುವಂತೆ ತುಮಕೂರು ಸ್ಪಿರುಲಿನಾ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷ ಮಹೇಶ್ ಆರ್.ವಿ. ಅವರು ಸಲಹೆ ನೀಡಿದರು. ಸ್ಪಿರುಲಿನಾ ಫೌಂಡೇಷನ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿಂದು 350 ಚಿಕ್ಕಿ ಪ್ಯಾಕೆಟ್ ಹಾಗೂ 150 ಬಾಕ್ಸ್ ಸ್ಪಿರುಲಿನಾ ಮಾತ್ರೆಗಳನ್ನು ವಿತರಿಸಿ ಅವರು ಮಾತನಾಡಿದರು.       ಸ್ಪಿರುಲಿನಾ ಒಂದು ಸೂಕ್ಷ್ಮಾಣು ಜೀವಿಯಾಗಿದ್ದು, ಅತೀ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಕಾರಣ ದೇಹದಲ್ಲಿ ಬೇರೆಲ್ಲಾ ಆಹಾರಗಳಿಗಿಂತ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೀರಲ್ಪಟ್ಟು ಇದರ ಪರಿಣಾಮವಾಗಿ ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸಿ ಯಾವುದೇ ವೈರಾಣು ಸೋಂಕನ್ನು…

ಮುಂದೆ ಓದಿ...